ಬದುಕೋಕೆ ಸರ್ಕಾರಿ ಕೆಲಸ ಒಳ್ಳೆ ಜೀವನ ಇದ್ರೂ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಕಾರಣ ಕೇಳಿದ್ರೆ, ಶಾಕ್ ಆಗ್ತೀರಾ..

Updated: Thursday, June 10, 2021, 18:09 [IST]

ಜೀವನ ನಡೆಸೋಕೆ ಒಬ್ಬ ಮನುಷ್ಯನಿಗೆ ಒಂದೊಳ್ಳೆ ಕೆಲಸ.. ಸಂಬಳ.. ಇರೋಕೆ ಮನೆ.. ಪುಟ್ಟದಾದ ಚೊಕ್ಕ ಸಂಸಾರ ಇದ್ರೆ ಸಾಕು. ಆ ಮನೆಯಲ್ಲಿ ಖುಷಿ ಸಂತೋಷ ನೆಮ್ಮದಿಗೆ ಸಾಟಿನೇ ಇರೋದಿಲ್ಲ.  ಆದರೆ, ಇದೆಲ್ಲಾ ಇದೆ ಅಂದ್ರೆ ಆ ಮನುಷ್ಯ ತುಂಬಾ ಚೆನಾಗಿದಾನೆ ಅಂತ ನಾವು ಅಂದುಕೊಳಳೋದು ತಪ್ಪು. ಯಾಕೆಂದರೆ, ದೂರದ ಬೆಟ್ಟ ನುಣ್ಣಗೆ ಅನ್ನೋದೆ ಸತ್ಯ..

ಈಗ ನಾವು ಹೇಳೋಕೆ ಹೊರಟಿರೋದೇ ಅಂಥಹವರದ್ದೇ ಒಂದು ಕಥೆ. ಹೌದು.. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರ ಕಥೆ.. ಇತ್ತೀಚೆಗಷ್ಟೇ, ಅವರು ತಮ್ಮ ಮೈಸೂರಿನ ಮನೆಯಲ್ಲಿ ಜೀವ ಕಳೆದುಕೊಂಡರು. ಇದಕ್ಕೆ ಪ್ರಮುಖ ಕಾರಣ ಕೇಳಿದರೆ, ನೀವು ಕಣ್ಣೀರು ಹಾಕುವುದು ಖಚಿತ.  

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾಗಿದ್ದ ಎಂಕೆ ಮಂಜು ಪ್ರಸಾದ್. ಇವರಿಗೆ ಸರ್ಕಾರಿ ಕೆಲಸವಿತ್ತು. ಹಾಯಾಗಿ ಬದುಕುತ್ತಿದ್ದರು.  ಒಂದೊಳ್ಳೆ ಮನೆಯನ್ನು ಸ್ವಂತಕ್ಕೆ ತೆಗೆದುಕೊಳ್ಳಬೇಕು ಎಂಬ ಆಸೆ ಹೊತ್ತಿದ್ದರು. ಅದಕ್ಕೆಂದೆ ಒಂದಷ್ಟು ಲಕ್ಷ ಹಣವನ್ನೂ ಕೂಡ ಮುಂಗಡವಾಗಿ ಕೊಟ್ಟಿದ್ದರು. ದುರಾದೃಷ್ಟವಶಾತ್ ಎಂಕೆ ಮಂಜು ಪ್ರಸಾದ್ ಅವರು ಮೋಸ ಹೋಗಿದ್ದರು. 

ತಾವು ಕೊಟ್ಟ ಹಣವನ್ನು ಕಳೆದುಕೊಂಡಿದ್ದರು. ಇದರಿಂದ ನೊಂದ ಎಂಕೆ ಮಂಜು ಪ್ರಸಾದ್ ಅವರು, ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದರು. ಪ್ರಾಣ ಕಳೆದುಕೊಳ್ಳುವ ಮುನ್ನ ತಮಗಾದ ಮೋಸದ ಬಗ್ಗೆ ಇಂಚಿಂಚು ಬರೆದಿಟ್ಟಿದ್ದಾರೆ. ಎಷ್ಟು ವಿಚಿತ್ರ ಅಲ್ವಾ..