Chandrashekhar Guruji : ಸಿವಿಲ್ ಇಂಜಿನಿಯರ್ ಆಗಿದ್ದ ಚಂದ್ರ ಶೇಖರ್ ಗುರೂಜಿ ವಾಸ್ತು ತಜ್ಞ ಆಗಿದ್ದು ಹೇಗೆ ?

By Infoflick Correspondent

Updated:Tuesday, July 5, 2022, 22:03[IST]

Chandrashekhar Guruji : ಸಿವಿಲ್ ಇಂಜಿನಿಯರ್  ಆಗಿದ್ದ ಚಂದ್ರ ಶೇಖರ್ ಗುರೂಜಿ ವಾಸ್ತು ತಜ್ಞ ಆಗಿದ್ದು ಹೇಗೆ ?

ನಗರದ ಹೋಟೆಲ್​ವೊಂದರಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನ ದುಷ್ಕರ್ಮಿಗಳಿಬ್ಬರು ಇಂದು ಮಧ್ಯಾಹ್ನ ಹಾಡಹಗಲೇ ಭೀಕರವಾಗಿ ಕೊಲೆ ಮಾಡಿದ್ದು, ಕರ್ನಾಟಕ ಜನತೆ ಬೆಚ್ಚಿಬಿದ್ದಿದ್ದಾರೆ. ಕೊಲೆಗೆ ಪ್ರಾಥಮಿಕ ಕಾರಣಗಳು ತಿಳಿದುಬಂದಿದ್ದು ಇಬ್ಬರು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಯಾರು ಈ ಚಂದ್ರಶೇಖರ ಗುರೂಜಿ ? ಇವರ ಹಿನ್ನಲೆ ಏನು ಗೊತ್ತೆ ? ಇಲ್ಲಿದೆ ವಿವರ

ಚಂದ್ರಶೇಖರ ಗುರೂಜಿ ಅವರು ಬಾಗಲಕೋಟೆ ಮೂಲದವರು. ಇವರ ಮೊದಲ ಹೆಸರು ಚಂದ್ರಶೇಖರ ವಿರುಪಾಕ್ಷಪ್ಪ ಅಂಗಡಿ. ಚಂದ್ರಶೇಖರ ಗುರೂಜಿ ಅವರಿಗೆ ಇಬ್ಬರು.ಬಾಗಲಕೋಟೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ಇವರು ಬಾಗಲಕೋಟೆ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ವಿಭಾಗದಲ್ಲಿ ಪದವಿ ಪಡೆದರು.

ಪದವೀಧರರಾದ ಚಂದ್ರಶೇಖರ ಗುರೂಜಿ, ಮೂರು ವರ್ಷಗಳ ಕಾಲ‌‌ ಕೆಲಸವಿಲ್ಲದೆ ಖಾಲಿ ಇದ್ದರು. ನಂತರ ತಮ್ಮ ಸಹೋದರ ಸಂಬಂಧಿ ಬಸವರಾಜ ಕುನ್ನೂರು ಅವರ ಜೊತೆಗೆ 1988 ರಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದರು.ಮುಂಬೈನಲ್ಲಿ 6 ವರ್ಷಗಳ ಗುತ್ತಿಗೆದಾರನಾಗಿ ವೃತ್ತಿ ಜೀವನ ನಡೆಸಿದ ಬಳಿಕ ಚಂದ್ರಶೇಖರ ಗುರೂಜಿ ಅವರು ಸಿಂಗಪುರ ದೇಶಕ್ಕೆ ಪ್ರಯಾಣ ಬೆಳೆಸಿದರು. ಸಿಂಗಾಪುರದಲ್ಲಿ ವಾಸ್ತು ಶಾಸ್ತ್ರ ಅಧ್ಯಯನ ಮಾಡಿದ ಚಂದ್ರಶೇಖರ ಗುರೂಜಿ, ಸಿಂಗಪುರದಿಂದ ಪುನಃ ಮುಂಬೈಗೆ ವಾಪಸ್ ಬಂದು ಅಲ್ಲಿಯೇ ತಮ್ಮ ವಾಸ್ತು ಶಾಸ್ತ್ರ ವೃತ್ತಿಯನ್ನು ಕೈಗೊಂಡರು. ಮೊದಲು ಮುಂಬೈನಲ್ಲಿ ಸರಳ ವಾಸ್ತು ಕಚೇರಿಯ ಆರಂಭ ಆಯಿತು.
 
 ಸಹೋದರರು, ಮೂವರು ಸಹೋದರರಿಯರು. ಮೊದಲ ಪತ್ನಿಯ ನಿಧನದ ಬಳಿಕ ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದ ಅಂಕಿತಾ ಎಂಬುವರನ್ನ ಎರಡನೇ ಮದುವೆಯಾದರು. ಇವರಿಗೆ ಓರ್ವ ಪುತ್ರಿ ಇದ್ದಾಳೆ. ಅಂಕಿತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಗಲಕೋಟೆ ಬಿಟ್ಟು 30 ವರ್ಷ ಆಗಿತ್ತು. ಅಪರೂಪಕ್ಕೊಮ್ಮೆ ತವರು ಜಿಲ್ಲೆಗೆ ಬರುತ್ತಿದ್ದ ಚಂದ್ರಶೇಖರ ಗುರೂಜಿ, ಹೆಚ್ಚಾಗಿ ಮುಂಬೈನಲ್ಲೇ ನೆಲೆಸಿದ್ದರು. ಸಾವಿರಾರು ಕೋಟಿ ಆಸ್ತಿ ಒಡೆಯರಾಗಿದ್ದ ಚಂದ್ರಶೇಖರ ಗುರೂಜಿ, ನೂರಾರು ಜನರಿಗೆ ಉದ್ಯೋಗವನ್ನ ನೀಡಿದ್ದರು.

ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಕಚೇರಿಯನ್ನು ಚಂದ್ರಶೇಖರ ಗುರೂಜಿ ಆರಂಭ ಮಾಡಿದರು. ಆ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸರಳ ವಾಸ್ತು ಶಾಖೆ ಆರಂಭವಾಯ್ತು. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದ ಚಂದ್ರಶೇಖರ್‌ ಗುರೂಜಿ, ಹಲವು ಪುಸ್ತಕಗಳನ್ನೂ ಬರೆದಿದ್ದರು. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು. ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಹೆಗ್ಗಳಿಕೆ ಹೊಂದಿರುವ ಚಂದ್ರಶೇಖರ್ ಗುರೂಜಿ, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ.

ವಾಸ್ತುವಿನ ಸಂಶೋಧಕರಾಗಿದ್ದ ಡಾ.ಚಂದ್ರಶೇಖರ ಅಂಗಡಿ(ಗುರೂಜಿ) ಅವರು ಚಿಕ್ಕಂದಿನಲ್ಲೇ ಆಧ್ಯಾತ್ಮದತ್ತ ಆಸಕ್ತಿ ಹೊಂದಿದ್ದರು. 8 ವರ್ಷ ವಯಸ್ಸಿನಲ್ಲಿದ್ದಾಗಲೇ ತಮ್ಮೂರಿನ ಹಳೆಯ ದೇವಾಲಯವೊಂದರ ಜೀರ್ಣೋದ್ಧಾರಕ್ಕಾಗಿ ಜನರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿ ಮಾಡಿದ್ದರು. 14ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರಬೇಕೆಂಬ ಬಯಕೆ ಅವರದ್ದಾಗಿತ್ತಾದರೂ ಅನಾರೋಗ್ಯ ಕಾರಣಕ್ಕೆ ಅದು ಸಾಕಾರಗೊಳ್ಳಲಿಲ್ಲ. ಸಿವಿಲ್ ಇಂಜಿನಿಯರ್​ ಪದವಿ ಪಡೆದ ಬಳಿಕ ಮುಂಬೈನಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಆರಂಭಿಸಿದ್ದರು. 1995 ರಲ್ಲಿ 'ಶರಣ ಸಂಕುಲ ಟ್ರಸ್ಟ್' ಆರಂಭಿಸಿ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದರು.