ಹೆಂಡತಿಗೆ ನನ್ನ ಗೆಳೆಯನ ಜೊತೆ ಮಲಗು ಎಂದು ಗಂಡ..! ಕಾರಣ ಕೇಳಿ ಎಂಥಾ ಆಸೆ ಪಟ್ಟಿದ್ದಾನೆ ಈ ನೀಚ

Updated: Thursday, June 10, 2021, 16:25 [IST]

ಹೌದು ಸ್ನೇಹಿತರೆ ಈ ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಒಂದು ಉತ್ತಮವಾದ ಘಟ್ಟ ಆಗಿರುತ್ತದೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ವಯಸ್ಸಿಗೆ ಬಂದ ಬಳಿಕ ಯುವತಿ ಪರಿಚಯವೇ ಇರದ ವ್ಯಕ್ತಿಯ ಜೊತೆ ಮನೆಯವರು ಸೆಟ್ ಮಾಡಿದ ಹುಡುಗನ ಜೊತೆಯೇ ಮದುವೆ ಮಾಡಿಕೊಂಡು, ಆ ಹುಡುಗನ ಮನೆಗಾಗಿ ಆತನಿಗಾಗಿ, ಆತನ ಪೂರ್ತಿ ಜೀವನಕ್ಕಾಗಿ, ಮತ್ತು ಮುಂದಿನ ಸಂತತಿಯನ್ನು ಆ ಕುಟುಂಬದ ಮುಂದಿನ ಪೀಳಿಗೆಗೆ ದುಡಿದು, ಇಡೀ ಜೀವನವನ್ನೇ ಆ ಪತಿಯ  ಕುಟುಂಬದ ಜೊತೆ ಕಳೆಯುತ್ತಾಳೆ.

ಇತ್ತ ಗಂಡು ಮಕ್ಕಳು ಸಹ ಅಷ್ಟೇ, ಒಂದು ಬಾರಿ ಒಂದು ಹುಡುಗಿಯನ್ನು ಮದುವೆಯಾದರೆ, ಇಡೀ ಜೀವನವನ್ನು ಹೆಂಡತಿ ಮಕ್ಕಳಿಗಾಗಿಯೇ ಸವೆಸುತ್ತಾನೆ. ಆದರೆ ಎಲ್ಲಾ ಗಂಡಸರು ಹಾಗಾಗಿರುವುದಿಲ್ಲ ಅನ್ನೋದಕ್ಕೆ ಇಲ್ಲಿ ಒಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಸ್ನೇಹಿತರೆ.  ಹೌದು ಬಿಟಿಎಂ ಲೇಔಟ್' ನ ವಾಸಿಂ ಷರೀಫ್ ಎಂಬಾತ ತನ್ನ ಸ್ವಂತ ಹೆಂಡತಿಗೆ, 'ನನ್ನ ಗೆಳೆಯನ ಜೊತೆ ಮಲಗು ಎಂದು ಹೇಳಿ ತುಂಬಾನೇ ಚಿತ್ರಹಿಂಸೆ ನೀಡಿದ್ದಾನೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಈಕೆ ಬನಶಂಕರಿ ಮೂಲದ ಯುವತಿ ಆಗಿದ್ದು,2018ರಲ್ಲಿ ಯುವತಿಯನ್ನು ಈ ವಾಸಿಮ್ ಮದುವೆಯಾಗಿದ್ದನು.     

ಹೌದು ಮದುವೆಯಾದ ಹೊಸತನದಲ್ಲಿ ಚೆನ್ನಾಗಿಯೇ ಇತ್ತು. ಆದರೆ ಒಂದು ಬಾರಿ ಈತ ತನ್ನ ಹೆಂಡತಿಯನ್ನು ಗೋವಾಕ್ಕೆ ಕರೆದುಕೊಂಡು ಹೋಗಿ, ಎಣ್ಣೆ ಕುಡಿ ಎಂದು ಒತ್ತಾಯ ಮಾಡಿದ್ದನಂತೆ. ಮತ್ತೊಂದು ಬಾರಿ ಊಟಿಗೆ ಕರೆದುಕೊಂಡು ಹೋಗಿ ತನ್ನ ಗೆಳೆಯರ ಜೊತೆ ಪಾರ್ಟಿ ಮಾಡಿ, ಅಲ್ಲಿ ನನ್ನ ಗೆಳೆಯನ ಜೊತೆ ನೀನು ಮಲಗು, ಅವನ ಹೆಂಡತಿಯ ಜೊತೆ ನಾನು ಮಲಗುತ್ತೇನೆ ಎಂದು ಹೇಳಿದ್ದನಂತೆ. ಆದರೆ ಇದಕ್ಕೊಪ್ಪದ ಯುವತಿ ತನ್ನ ಗಂಡನ ಮೇಲೆ ತುಂಬಾನೇ ಕೋಪ ವ್ಯಕ್ತಪಡಿಸಿದ್ದರಂತೆ.

ಇದೇ ವಿಷಯಕ್ಕೆ ಆಗಾಗ ಹೆಚ್ಚು ಹೆಂಡತಿಗೆ ಹಿಂಸೆಯನ್ನ ಕೊಡುತ್ತಿದ್ದ ಈ ವಾಸಿಮ್ ನ ಹೆಂಡತಿ ಎರಡು ಬಾರಿ ಗರ್ಭಿಣಿಯಾದರೂ, ಅದನ್ನು ಈತನೇ ತೆಗೆಸಿದ್ದನಂತೆ. ಬಳಿಕ ಇತ್ತೀಚಿಗೆ ಮಹಿಳೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಮಗು ನನ್ನದಲ್ಲ ಎಂದು ಇಬ್ಬರನ್ನು ಮನೆಯಿಂದ ಹೊರಹಾಕಿದ್ಧಾನಂತೆ. ಈ ವಿವಾಹಿತ ಮಹಿಳೆ ಈಗ ಶಿವಾಜಿನಗರದಲ್ಲಿ ಈತನ ವಿರುದ್ಧ ದೂರು ನೀಡಿದ್ದು, ದೂರು ನೀಡಿ ಹತ್ತು ದಿನಗಳಾದರೂ ಈತನ ಮೇಲೆ ಯಾವುದೇ ಕ್ರಮ ಜಾರಿಗೆ ಮಾಡದಿರುವುದು ವಿಷಾದನೀಯ. ಈ ಮಹಿಳೆಗೆ ಈಗಲಾದರೂ ನ್ಯಾಯ ಸಿಗಲಿ ಮತ್ತು ಮಾಹಿತಿಯನ್ನು ಎಲ್ಲರೂ ಶೇರ್ ಮಾಡಿ ಯುವತಿಗೆ ನ್ಯಾಯ ಕೊಡಿಸಿ ಧನ್ಯವಾದಗಳು...