ಉಕ್ರೇನ್ ನಲ್ಲಿರುವ ಗಂಡನಿಗೆ ಭಾರತಕ್ಕೆ ಬರಲು ಹೆಂಡಿಯದ್ದೇ ಸಮಸ್ಯೆ ; ಏಕೆ ಗೊತ್ತೆ ?

By Infoflick Correspondent

Updated:Tuesday, March 8, 2022, 06:30[IST]

ಉಕ್ರೇನ್ ನಲ್ಲಿರುವ ಗಂಡನಿಗೆ ಭಾರತಕ್ಕೆ ಬರಲು ಹೆಂಡಿಯದ್ದೇ ಸಮಸ್ಯೆ ; ಏಕೆ ಗೊತ್ತೆ ?

ಕೇಂದ್ರ ಸರ್ಕಾರ ಆಪರೇಷನ್​ ಗಂಗಾ ಕಾರ್ಯಾಚರಣೆ ಮೂಲಕ ಉಕ್ರೇನ್ ನಲ್ಲಿರುವವರನ್ನು ಸ್ವದೇಶಕ್ಕೆ ಕರೆದುಕೊಂಡು ಬಂದಿದೆ ಆದರೆ ಇಲ್ಲೊಬ್ಬ ಭಾರತೀಯ ವ್ಯಕ್ತಿಗೆ ಮಾತ್ರ ಭಾರತಕ್ಕೆ ಮರಳಲು ಆಗದ ಪರಿಸ್ಥಿತಿ ಎದುರಾಗಿದೆ. ಕಾರಣ ಹೆಂಡತಿಯದ್ದೇ ಸಮಸ್ಯೆಯಾಗಿದೆ ! ಗಗನ್ ಎಂಬ ವ್ಯಕ್ತಿ ಪತ್ನಿಯ ಕಾರಣದಿಂದಾಗಿ ಭಾರತಕ್ಕೆ ಬರಲಾಗದೆ ಪರಿತಪಿಸುವಂತಾಗಿದೆ. ಸ್ವದೇಶಕ್ಕೂ ಬರದೆ ಅಲ್ಲಿಯೂ ಇರಲಾಗದೆ ಅವರ ಪರಿಸ್ಥಿತಿ ತ್ರಿಶಂಕು ಸ್ವರ್ಗದಂತಾಗಿ ಪರದಾಡುತ್ತಿದ್ದಾರೆ. ಕಾರಣ ತಿಳಿದರೆ ಬೇಸರವಾಗುತ್ತದೆ. 

ಗಗನ್(ಗಂಡ) ಭಾರತೀಯ, ಗಂಗಾ ಕಾರ್ಯಾಚರಣೆ ಮೂಲಕ ಭಾರತಕ್ಕೆ ಹೋಗಬಹುದು. ಆದರೆ ಅವರ ಪತ್ನಿ ಭಾರತಕ್ಕೆ ಬರಲು ಸಾದ್ಯವಿಲ್ಲ ಏಕೆಂದರೆ ಆಕೆ ಯೂಕ್ರೇನಿನ ಪ್ರಜೆ.  ರಕ್ಷಣಾ ಕಾರ್ಯಾಚರಣೆ ವೇಳೆ ಕೇವಲ ಭಾರತೀಯರನ್ನು ಮಾತ್ರ ಭಾರತಕ್ಕೆ ಕರೆದುಕೊಂಡು ಹೋಗಲಾಗುವುದು.   

ಹೆಂಡತಿಯನ್ನು ಬಿಟ್ಟು ಬರಲು ಆ ಪ್ರದೇಸ ಈಗ ಯುದ್ಧದ ರಣರಂಗ, ಅಷ್ಟೇ ಅಲ್ಲದೆ ಪತ್ನಿ 8 ತಿಂಗಳ ಗರ್ಭಿಣಿ, ಈಗ ಆಕೆಯನ್ನು ಬಿಟ್ಟು ಹೋಗುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಗಗನ್ ಹೇಳಿಕೊಂಡಿದ್ದಾರೆ. ಗಗನ್ ಇದೇ ಹೆಂಡತಿ ಭಾರತದ ಪ್ರಜೆ ಅಲ್ಲದ ಕಾರಣ, ಗರ್ಭವತಿಯೂ ಆದ್ದರಿಂದ ಪೋಲಂಡ್​ಗೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಕೀವ್​ನಿಂದ ಹೊರಟು ಲಿವಿವ್​ನಲ್ಲಿರುವ ಗೆಳೆಯರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.