ನಿಮಗಿದು ಗೊತ್ತೇ!! ಬಿಸಿಲಿನಲ್ಲಿ ತುಂಬಾ ಮೊಬೈಲನ್ನು ಬಳಸುತ್ತಿದ್ದೀರಾ!! ಹಾಗಾದರೆ ಅದರಿಂದ ಆಗುವ ಪರಿಣಾಮವೇನು ಗೊತ್ತೇ!

By Infoflick Correspondent

Updated:Thursday, September 22, 2022, 21:06[IST]

ನಿಮಗಿದು ಗೊತ್ತೇ!! ಬಿಸಿಲಿನಲ್ಲಿ ತುಂಬಾ ಮೊಬೈಲನ್ನು ಬಳಸುತ್ತಿದ್ದೀರಾ!! ಹಾಗಾದರೆ ಅದರಿಂದ ಆಗುವ ಪರಿಣಾಮವೇನು ಗೊತ್ತೇ!

ನಾವು ಈಗ ಡಿಜಿಟಲ್ ಯುಗದಲ್ಲಿ ಬಾಳುತ್ತಿದ್ದೇವೆ. ಫೋನ್ ಅಥವಾ ಲ್ಯಾಪ್ ಟಾಪ್ ಬಳಕೆ ಇಲ್ಲದೆ ಬದುಕುವುದು ಇಂದಿನ ದಿನಗಳಲ್ಲಿ ಕಷ್ಟವಾಗುತ್ತಿದೆ. ಪ್ರತಿನಿತ್ಯವೂ ಫೋನ್ ಹಾಗೂ ಲ್ಯಾಪ್ ಟಾಪ್ ಪರದೆ ನೋಡದೆ ದಿನ ಆರಂಭವಾಗುವುದಿಲ್ಲ ಎನ್ನುವ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಯಾಕೆಂದರೆ ಕೆಲಸದಿಂದ ಹಾಗೂ ಪರ್ಸನಲ್ ಆಗಿ ಮೊಬೈಲ್ ಬಳಕೆ ಹೆಚ್ಚುತ್ತಿದೆ. ಹೀಗೆ ಮೊಬೈಲ್ ಬಳಕೆ ಜಾಸ್ತಿಯಾಗುತ್ತಿರುವುದರಿಂದ ಕಣ್ಣಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೌದು, ಕಣ್ಣು ಹಾಗೂ ಮೊಬೈಲ್ ಬಳಕೆಗೆ ಅವಿನಾಭಾವ ಸಂಬಂಧವಿದೆ. ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದರೆ ಕಣ್ಣಿಗೆ ಆಪತ್ತು ಬರುವ ಸಾಧ್ಯತೆ ಇದೆ. ಆದರೆ ನಿಮಗೊಂದು ಗೊತ್ತಾ? ನಿಮ್ಮ ಫೋನ್‌ಗಳನ್ನು ಬಿಸಿಲಿನಲ್ಲಿ ಬಳಸುವುದರಿಂದ ಭಾಗಶಃ ಕುರುಡುತನಕ್ಕೆ ಕಾರಣವಾಗಬಹುದು. ಹೌದು, ಬಿಸಿಲಿನಲ್ಲಿ ತಮ್ಮ ಫೋನ್‌ಗಳನ್ನು ಬಳಸಿದ ನಂತರ ವಿವಿಧ ಹಂತದ ದೃಷ್ಟಿ ನಷ್ಟವನ್ನು ಅನುಭವಿಸಿದ ಇಬ್ಬರು ರೋಗಿಗಳ ಪ್ರಕರಣದ ಬಗ್ಗೆ ವರದಿಯೊಂದು ತಿಳಿಸಿದೆ. ಹಾಗಾದರೆ ಈ ರೀತಿಯ ದೃಷ್ಟಿ ಸಮಸ್ಯೆಗೆ ಕಾರಣವೇನು? ಹಾಗಾದರೆ ನೋಡೋಣವೇ?

ಕುರುಡುತನ ಸಂಭವಿಸುತ್ತದೆ.

ಹಗಲು ಹೊತ್ತಿನಲ್ಲಿ ಅಂದರೆ ಸೂರ್ಯನ ಬೆಳಕಿನಲ್ಲಿ ಮೊಬೈಲ್ ಬಳಕೆ ಮಾಡಿದ್ದರಿಂದ ಮಹಿಳೆಯೊಬ್ಬರಿಗೆ ಭಾಗಶಃ ಕುರುಡು ಸಂಭವಿಸಿರುವ ಬಗ್ಗೆ ಜರ್ನಲ್ ಆಫ್ ಮೆಡಿಕಲ್ ವರದಿಯೊಂದನ್ನು ಮಾಡಿದೆ. ಮಹಿಳೆಗೆ ಕುರುಡುತನ ಬಿಸಿಲಿನಿಂದ ಸಂಭವಿಸಿದ ಬಗ್ಗೆ ಸಾಬೀತಾಗಿದ್ದರಿಂದ ಈ ಘಟನೆ ಬಳಿಕ ಬಿಸಿಲಿನ ದಿನದಲ್ಲಿ ಫೋನ್ ಬಳಸದಂತೆ ವೈದ್ಯರು ಎಚ್ಚರಿಸಿದ್ದಾರೆ. ಈ ರೀತಿ ಬಳಕೆ ಮಾಡುವುದು ಕಣ್ಣುಗಳಿಗೆ ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ಫೋನ್ ಪರದೆಯ ಮೇಲೆ ಸೂರ್ಯನ ಶಕ್ತಿಯುತ ಪ್ರತಿಫಲನಕ್ಕೆ ಒಡ್ಡಿಕೊಂಡ ನಂತರ ಕೆಲವು ಗಂಭೀರವಾದ ರೆಟಿನಾದ ಹಾನಿಯಿಂದಾಗಿ ಕುರುಡುತನ ಉಂಟಾಗುತ್ತದೆ ಎಂದು ವೈದ್ಯರು ಅಧ್ಯಯನದ ಮೂಲಕ ತಿಳಿದಿದ್ದಾರೆ. ಈ ರೀತಿ ಸೂರ್ಯನ ಬೆಳಕಿನ ಜೊತೆ ಮೊಬೈಲ್ ಬಳಕೆಯಿಂದ ಇಬ್ಬರಿಗೆ ಕುರುಡುತನ ಸಂಭವಿಸಿದೆ .

ಇದನ್ನು ತಡೆಯುಗಟ್ಟುವುದು ಹೇಗೆ? 
ಸೂರ್ಯನ ಬೆಳಕಿನಿಂದ ಸೋಲರ್ ಮ್ಯಾಕ್ಯುಲೋಪತಿ ಸಮಸ್ಯೆ ಉಂಟಾಗುತ್ತಿದೆ. ಆದರೆ ಸಂಶೊಧನೆ ವೇಳೆ ಇಬ್ಬರು ನಾವು ಸೂರ್ಯನ ಬೆಳಕು ನೇರವಾಗಿ ನೋಡಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅವರಿಗೆ ಸೂರ್ಯನ ಬೆಳಕಿರುವ ವೇಳೆ ಮೊಬೈಲ್ ಬಳಕೆ ಮಾಡಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎನ್ನುವುದು ತಿಳಿದಿದೆ. ಹೀಗಾಗಿ ಸೂರ್ಯನ ಬೆಳಕನ್ನು ನೇರವಾಗಿ ನೋಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೇ ಸೂರ್ಯನ ಬೆಳಕಿನಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎನ್ನುವುದು ಮತ್ತೊಂದು ಸಲಹೆಯಾಗಿದೆ. ಇನ್ನು ಸೂರ್ಯನ ಬೆಳಕಿನಲ್ಲಿ ಮೊಬೈಲ್ ನೋಡಲೇಬೇಕು ಎನ್ನುವುದಾದರೆ ಕಣ್ಣಿಗೆ ಸಂಬಂಧಪಟ್ಟ ಸನ್ ಗ್ಲಾಸ್ ಅನ್ನು ಬಳಕೆ ಮಾಡುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.