ನೀವು ಫೋನ್ ಪೆ ಗೂಗಲ್ ಪ್ಲೇ ಅಥವಾ ಯಾವುದಾದರೂ ಆನ್ಲೈನ್ ಪೇಮೆಂಟ್ ಒಂದು ಬಳಸುತ್ತಿದ್ದರೆ ಒಮ್ಮೆ ಇದನ್ನು ತಪ್ಪದೇ ಓದಿರಿ

By Infoflick Correspondent

Updated:Tuesday, August 30, 2022, 07:55[IST]

ನೀವು ಫೋನ್ ಪೆ ಗೂಗಲ್ ಪ್ಲೇ ಅಥವಾ ಯಾವುದಾದರೂ ಆನ್ಲೈನ್ ಪೇಮೆಂಟ್ ಒಂದು ಬಳಸುತ್ತಿದ್ದರೆ ಒಮ್ಮೆ ಇದನ್ನು ತಪ್ಪದೇ ಓದಿರಿ

ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್‌ಗಳನ್ನು ಉಪಯೋಗ ಮಾಡುತ್ತಿದ್ದರೆ ಐದು ನಿಮಿಷ ಬಿಡುವು ಮಾಡಿಕೊಂಡು ಇದನ್ನ ಓದಿ. ಏಕೆಂದರೆ, ಈಗ ಕಾಲ ಬದಲಾದ ಹಾಗೇ ಇಡೀ ಜಗತ್ತೇ ಒಂದು ಸಣ್ಣ ಮೊಬೈಲ್ ಸೇರಿದೆ. ಗೂಗಲ್ ಪೇ ಮತ್ತು ಫೋನ್ ಪೇ ಹೀಗೆ ಅನೇಕ ರೀತಿಯ ಆಪ್‌ಗಳು ಬ್ಯಾಂಕಿಂಗ್ ವ್ಯವಹಾರಕ್ಕೆ ಸಹಾಯವಾಗುತ್ತಿವೆ. ಇವುಗಳ ಬಗ್ಗೆ ನಾವು ಸ್ವಲ್ಪ ಯಾಮಾರಿದರೂ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತದೆ.

ಇತ್ತೀಚಿನ ನಡೆದ ಆಂತಕಕಾರಿ ಘಟನೆಯೊಂದು ಈ ಬಗ್ಗೆ ನಮ್ಮನ್ನು ಎಚ್ಚರಿಸಿದೆ. ಗೂಗಲ್ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ. ಗೂಗಲ್ ಪೇ ಬಳಕೆದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಗೂಗಲ್‌ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಹೇಳಿ, ಆಪ್‌ನ ಲಿಂಕ್‌ ಮುಖಾಂತರ ಅವರಿಗೆ ಕ್ಷಣ ಮಾತ್ರದಲ್ಲಿ ವಂಚಿಸಿದ್ದಾನೆ

ನಂಬಿದರೆ ನಂಬಿ,ನೀವೇನಾದ್ರು ಗೂಗಲ್ ಪೇ ಅಥವಾ ಫೋನ್ ಪೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ನಿಮ್ಮ ಖಾತೆಯಲ್ಲಿ ಇರೋ ಬರೋ ಎಲ್ಲ ಹಣ ಒಂದೇ ನಿಮಿಷದಲ್ಲಿ ಖಾಲಿ ಆಗುತ್ತದೆ. ಏಕೆಂದರೆ, ಗೂಗಲ್ ಪೇ ಅಥವಾ ಫೋನ್ ಪೇ ಸಂಸ್ಥೆಗಳು ಸಹಾಯವಾಣಿ ಕೇಂದ್ರಗಳನ್ನೇ ಹೊಂದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್‌ಗಳನ್ನು ಉಪಯೋಗ ಮಾಡುತ್ತಿದ್ದರೆ ಹೇಗೆ ಎಚ್ಚರಿಕೆ ಹೊಂದಿರಬೇಕು ಎಂದು ನಾನು ತಿಳಿಸಿಕೊಡುತ್ತಿದ್ದೇನೆ. 

ವಾಯ್ಸ್ ಕಸ್ಟಮರ್  ಇಲ್ಲವೇ ಇಲ್ಲ

ಗೂಗಲ್ ಪೇ ಮತ್ತು ಫೋನ್ ಪೇಗೆ ಯಾವುದೇ ರೀತಿಯ ವಾಯ್ಸ್ ಕಸ್ಟಮರ್ ಕೇರ್ ಇಲ್ಲವೇ ಇಲ್ಲ ಎಂಬುದನ್ನು ತಿಳಿಯಿರಿ. ಗೂಗಲ್ ನಲ್ಲಿ ನಕಲಿ ಫೋನ್ ಕಸ್ಟಮರ್ ಕೇರ್ ನಂಬರ್ ಹಾಕಿದ್ದಾರೆ. ಇತ್ತೇಚೆಗೆ ನಮ್ಮ ಸ್ನೇಹಿತರು ಒಬ್ಬರು ಗೂಗಲ್ ಪೇ ನಿಂದ 300 ರೂಪಾಯಿ ಕಟ್ ಆಗಿದೆ ಅಂತ ಗೂಗಲ್ ನಲ್ಲಿ ಹುಡುಕಿ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ ಹೀಗೆ ಆಗಿರುವ ಎರಡೇ ನಿಮಿಸದಲ್ಲಿ ಅಕೌಂಟ್ ನಲ್ಲಿ ಇರುವ ಒಂದೂವರೆ ಲಕ್ಷ ಹಣ ಕಟ್ ಆಗೋಗಿದೆ. ಗೂಗಲ್ ಪೇ ಮತ್ತು ಫೋನ್ ಪೇ ಗೆ ಯಾವುದೇ ರೀತಿಯ ಕಸ್ಟಮರ್ ಸೇವೆ ಇಲ್ಲವೇ ಇಲ್ಲ.

ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ!

ಬ್ಯಾಂಕಿನ ಲಿಂಕ್‌ ಹೆಸರಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಗೋಜಿಗೆ ಹೋಗಬೇಡಿ. ನೀವಾಗಿಯೇ ಬ್ಯಾಂಕ್‌ ಯುಆರ್‌ಎಲ್‌ ಟೈಪ್‌ ಮಾಡಿ ಮುಂದುವರಿಸಿ. ಸಾರ್ವಜನಿಕ ಕಂಪ್ಯೂಟರುಗಳಲ್ಲಿ (ಉದಾ. ಸೈಬರ್‌ ಕೆಫೆಗಳಲ್ಲಿ) ಆನ್‌ಲೈನ್‌ ಬ್ಯಾಂಕಿಂಗ್‌ ವಹಿವಾಟು ನಡೆಸಬೇಡಿ. ವಂಚಕರು ತಕ್ಷ ಣಕ್ಕೆ ಸಿಕ್ಕಿ ಬೀಳುವುದರಿಂದ ತಪ್ಪಿಸಲು, ಬ್ಯಾಂಕ್‌ ರಜಾದಿನಗಳಲ್ಲೋ ಅಥವಾ ಬ್ಯಾಂಕ್‌ ತೆರೆಯುವ ಮುನ್ನವೋ ಚಾಕಚಕ್ಯತೆ ಮೆರೆಯುತ್ತಾರೆಂಬುದು ನೆನಪಿರಲಿ. ಈ ಕುರಿತು ನಿಮಗೆ ಸಾಕಷ್ಟು ಎಚ್ಚರವಿರಿ.

ಫೋನ್ ಪೇ ಅಥವ ಗೂಗಲ್ ಪೇ ಸರ್ವರ್ ಬ್ಯುಸಿ ಆಗೋಗಿ ನಿಮ್ಮ ಖಾತೆಯಿಂದ ಹಣ ಕಟ್ ಆದರು ಸಹ ಸ್ನೇಹಿತರಿಗೆ ಹೋಗಿರೋದಿಲ್ಲ ಅಂತ ಸಮಯದಲ್ಲಿ ಕೆಲವು ಜನರು ಕಾದು ನೋಡೋಣ ಎನ್ನುತ್ತಾರೆ. ಮತ್ತಷ್ಟು ಜನ ಒಂದೆರಡು ತಾಸು ನೋಡಿ ಗೂಗಲ್ ನಿಂದ ಫೋನ್ ಪೇ ಅಥವ ಗೂಗಲ್ ಪೇ ಕಸ್ಟಮರ್ ಕೇರ್ ಗೆ ಕಾಲ್ ಮಾಡೋಣ ಅಂತ ನಂಬರ್ ಹುಡುಕಿ ಕಾಲ್ ಕಾಡ್ತಾರೆ. ಇಂತಹ ಸಮಯದಲ್ಲಿ ವಂಚಕರು ನಕಲಿ ವೆಬ್‌ಸೈಟ್ ಸೃಷ್ಟಿಸಿ ಅವರ ನಂಬರ್ ನೀಡುತ್ತಾರೆ. ನಂತರ ನಿಮ್ಮ ಖಾತೆಯಲ್ಲಿನ ಹಣ ಖಾಲಿಯಾಗುತ್ತದೆ.