ಬ್ರೇಕಿಂಗ್ ನ್ಯೂಸ್ :ಎಂಟು ಜಿಲ್ಲೆಯಲ್ಲಿ ಕೊರೋನಾ ಕರ್ಫ್ಯೂ ಜಾರಿ ಮಾಡಿದ ರಾಜ್ಯ ಸರ್ಕಾರ!!

Updated: Thursday, April 8, 2021, 21:33 [IST]

ರಾಜ್ಯದಲ್ಲಿ ಕೋರನ ಕೇಸ್ ಗಳು ಹೆಚ್ಚಾಗುತ್ತಿದೆ ಮತ್ತು ಇಂದು ನರೇಂದ್ರ ಮೋದಿ ಜೊತೆ ಸಭೆಯಲ್ಲಿ ಯಡಿಯೂರಪ್ಪ ಅವರು ಮೋದಿ ಅವರಿಗೆ ಮನವಿ ಮಾಡಿದರು ಕಠಿಣ ಕ್ರಮಗಳನ್ನು ಜಾರಿ ಮಾಡಲು. ಅದೇ ಕಾರಣದಿಂದ ಇಂದು ಯಡಿಯೂರಪ್ಪ ಅವರು ಕೊರೋನಾ ಕರ್ಫ್ಯೂ  ಮೊರೆಹೋಗಲು ಸಿದ್ದರಾಗಿದ್ದಾರೆ.

 ನಾಳೆಯಿಂದ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು  ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮತ್ತು ಸಭೆ ಸಮಾರಂಭವನ್ನು ತಡೆಗಟ್ಟಬೇಕು  ಎಂದು ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತ್ತು ಶನಿವಾರದಿಂದ ಕೊರೋನ ಕರ್ಪ್ಯೂ   ಜಾರಿ ಮಾಡಲು ರಾಜ್ಯ ಸರ್ಕಾರ ಆದೇಶ ಕೊಟ್ಟಿದೆ.     

 ಬೆಂಗಳೂರು, ತುಮಕೂರು, ಬೀದರ್ ಮತ್ತು  ಉಡುಪಿ,ಮೈಸೂರು,ದಕ್ಷಿಣ ಕನ್ನಡ, ಬಳ್ಳಾರಿ, ಮತ್ತು ಕಲ್ಬುರ್ಗಿ  ಜಿಲ್ಲೆಗಳಿಗೆ  ಕೊರೋನ ಕೊರೋನಾ ಕರ್ಫ್ಯೂ ಶನಿವಾರದಿಂದ   ಜಾರಿ ಮಾಡಲಾಗುತ್ತದೆ. ಕೊರೋನಾ ಕರ್ಫ್ಯೂ  ಏಪ್ರಿಲ್ ೧೦ ರಿಂದ ೨೦ ನೇ  ತಾರೀಕು ತನಕ ಇರುತ್ತದೆ   ಜನರು ಇದಕ್ಕೆ ಪೂರಕವಾಗಿ ಸ್ಪಂದಿಸ ಬೇಕು ಎಂದು ಮನವಿ ಮಾಡಿದ್ದಾರೆ

ಸಮಯ ರಾತ್ರಿ 10 ಗಂಟೆಯಿಂದಬೆಳಗ್ಗೆ 5 ರವರೆಗೆ ಕೊರೋನ ಕರ್ಫ್ಯೂ ಇರುತ್ತದೆ.  ಆದರೆ ತುರ್ತು ಸೇವೆ ಅಗತ್ಯಗಳಿಗೆ ಇದು ಅನ್ವಯಿಸುವುದಿಲ್ಲ

 ನರೇಂದ್ರ ಮೋದಿ ಅವರು ಅವರ ಭಾಷಣದಲ್ಲಿ ಜನರು ಇನ್ನು ನಾಲ್ಕು ವಾರ ತುಂಬಾ ಎಚ್ಚರವಾಗಿರಬೇಕು ಇಲ್ಲಾಂದ್ರೆ ತುರ್ತು ಪರಿಸ್ಥಿತಿ ಬರುತ್ತದೆ ಎಂದು ಜನತೆಗೆ ತಿಳಿಸಿದ್ದಾರೆ.