ಬ್ರೇಕಿಂಗ್ ನ್ಯೂಸ್ : ಕೊನೆಗೂ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿಯೇ ಬಿಟ್ಟರು: ಇನ್ನು 15 ದಿನ ಕರ್ನಾಟಕ ಸಂಪೂರ್ಣ ಸ್ಥಬ್ಧ..?!

Updated: Friday, May 7, 2021, 13:32 [IST]

ಈ ತಿಂಗಳು ಮೇ ೧೦ ರಿಂದ ರಾಜ್ಯ ಸರ್ಕಾರ  ಕಂಪ್ಲೀಟ್ ಲಾಕ್ ಡೌನ್ ಮಾಡಲು ಯೋಜನೆ ರೂಪಿಸುತ್ತಿದೆ.  ದಿನೇ ದಿನೇ ಕೊರೊನಾ ಸೋಂಕಿತರು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಚೈನ್ ಗೆ ಬ್ರೇಕ್ ಹಾಕುವ ಸಲುವಾಗಿ  ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಲು ಯೋಜನೆ ರೂಪಿಸುತ್ತಿದೆ. ಹಾಗೊಂದು ವೇಳೆ, ರಾಜ್ಯದಲ್ಲಿ ಸಂಪೂರ್ಣ  ಲಾಕ್ ಡೌನ್ ಘೊಷಿಸಿದರೆ, ಏನಿರುತ್ತೆ ಏನಿರಲ್ಲ ನೋಡೋಣ ಬನ್ನಿ..    

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗಳಿಗೆ ಇರುವ ಅವಕಾಶಕ್ಕೆ ಬ್ರೇಕ್ ಹಾಕಲಿದ್ದಾರೆ. ಪಾರ್ಸೆಲ್ ಗಳಿಗೆ ವಿನಾಯ್ತಿ ರದ್ದು ಮಾಡಬಹುದು. ಗಾರ್ಮೆಂಟ್ಸ್, ಕೈಗಾರಿಕೆಗಳು ಬಂದ್ ಮಾಡುವ ಸಾಧ್ಯತೆ ಇದೆ. ಅಗತ್ಯ ಸೇವೆಗಳು ಲಭ್ಯವಿರಲಿದ್ದು, ಹಾಲು, ಮೆಡಿಕಲ್ ಶಾಪ್ ಗಳು ಮಾತ್ರ ತೆರಯಲಿವೆ.

ಇನ್ನು ತರಕಾರಿ ದಿನಸಿ ಖರೀದಿಗೆ ವಾರದಲ್ಲಿ ಮೂರು ದಿನ ಮಾತ್ರ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ. ದಿನಸಿ ಖರೀದಿಸಲು ಬೆಳಗ್ಗೆ ೬ ರಿಂದ  ೯ ಘಂಟೆವರೆಗೆ  ಮಾತ್ರ ಅವಕಾಶ ಇರುತ್ತದೆ .

ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಿದ್ದಾರೆ. ಆಸ್ಪತ್ರೆಗಳಿಗೆ ಹೋಗುವವರಿಗೆ ಪಾಸ್ ನೀಡಲು ಸರ್ಕಾರ ನಿರ್ಧರಿಸಿದೆ. ಪಾಸ್ ಇಲ್ಲದೇ ಹೊರಗಡೆ ಬರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶ ಇರುವುದಿಲ್ಲ  ಆಟೋ ಮತ್ತು ಕ್ಯಾಬ್ ಓಡಾಟ ಇರುವುದಿಲ್ಲ  ಮೆಟ್ರೋ ಸೇವೆ ಇರುವುದಿಲ್ಲ ಇನ್ನುಬಾಕಿ ಇರುವ  ಎರಡು ದಿನಗಳಲ್ಲಿ ನಿಮಗೆ ಇರುವ ಅತ್ಯವಶ್ಯಕ ಕೆಲಸಗಳ್ಳನ್ನುಮುಗಿಸಿ ಕೊಳ್ಳಿ​

 

 

ಲಾಕ್ ಡೌನ್ ಹೇರಿಕೆ ಮಾಡುವ ಕುರಿತು ಅಧಿಕಾರಿಗಳು, ತಜ್ಞರ ಜೊತೆ ಚರ್ಚಿಸಿ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವುದೊಂದೆ ಬಾಕಿ ಇದೆ. 15 ದಿನಗಳ ಕಾಲ ರಾಜ್ಯವನ್ನು ಬಂದ್ ಮಾಡುವ ಸಾಧ್ಯತೆ ಇದೆ. ಹಾಗೇನಾದರೂ ಮಾಡಿದರೆ, ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಹಲವು ತಜ್ಞರು ಸಲಹೆ ಕೂಡ ನೀಡಿದ್ದಾರೆ.