Kodi Mutt Swamiji : ಕೋಡಿ ಮಠದ ಸ್ವಾಮೀಜಿಯಿಂದ ಮಳೆಯ ಮತ್ತು ಕರೋನ ಕುರಿತು ಬಂತು ಮತ್ತೊಂದು ಭವಿಷ್ಯ..! ರೈತರು ತಪ್ಪದೆ ನೋಡಿ

By Infoflick Correspondent

Updated:Thursday, July 21, 2022, 08:02[IST]

Kodi Mutt Swamiji  :  ಕೋಡಿ ಮಠದ ಸ್ವಾಮೀಜಿಯಿಂದ ಮಳೆಯ  ಮತ್ತು   ಕರೋನ  ಕುರಿತು ಬಂತು ಮತ್ತೊಂದು ಭವಿಷ್ಯ..! ರೈತರು ತಪ್ಪದೆ ನೋಡಿ

ರಾಜಕೀಯ ಕುರಿತು ಪ್ರಪಂಚದಲ್ಲಿ ನಡೆಯುವ ಕೆಲ ಕೆಟ್ಟ ಘಟನೆಗಳ ಬಗ್ಗೆ ಹಾಗೂ ರೋಗಗಳ ಬಗ್ಗೆ ಸುಮಾಮಿ ರೀತಿ ಬರುವ ಕಷ್ಟಗಳ ಕುರಿತು ಆಗಾಗ ಹೆಚ್ಚು ಸದ್ದು ಮಾಡುವ ಕೋಡಿಮಠದ ಶ್ರೀಗಳ ಭವಿಷ್ಯ ಇದೀಗ ಮತ್ತೊಂದು ಸುದ್ದಿ ಭವಿಷ್ಯ ನುಡಿದು ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು, ಕೋಡಿಮಠದ ಸ್ವಾಮಿಗಳಾದ ಶಿವಾನಂದ ಶಿವಯೋಗಿ  ಶ್ರೀಗಳು ರಾಜಕೀಯ ಕುರಿತು ಇದೀಗ ನುಡಿದಿರುವ ಭವಿಷ್ಯ ಮತ್ತೆ ಸದ್ದು ಮಾಡುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ರೈತರ ವಿಚಾರವಾಗಿಯೂ ಸಹ ರಾಜ್ಯದಲ್ಲಿ ಆಗುತ್ತಿರುವ ಮಳೆ ಕುರಿತು ಹೇಳಿರುವ ಕೆಲವು ಹೇಳಿಕೆಗಳು ಎಲ್ಲರನ್ನೂ ಬೆಚ್ಚಿ ಬೆಳಿಸಿದೆ ಹಾಗೆ ಕೆಲವು ಸಂತಸ ತರಿಸಿವೆ. ಹೌದು ಕೊಡಿ ಮಠದ ಶ್ರೀಗಳು ಕರೋನ ವಿಚಾರವಾಗಿ ಸಾಕಷ್ಟು ಬಾರಿ ಭವಿಷ್ಯ ನುಡಿದಿದ್ದರು.

ಅವುಗಳು ನಿಜವಾಗಿಯೂ ನಡೆದಿತ್ತು. ಸಾವು ನೋವುಗಳು ಹೆಚ್ಚಾಗುತ್ತದೆ, ಇನ್ನು ಮುಂದೆ ಹೋಗಿ, ಆ ಹೆಣಗಳು ಕೂಡ ಮೇಲೆ ಎದ್ದು ಬರುತ್ತವೆ ಹಾಗೆ ಹೀಗೆ ಎಂದು ಹೇಳಿಕೆ ಕೊಟ್ಟ ಶ್ರೀಗಳ ಭವಿಷ್ಯ ಕೆಲವರನ್ನ ಭಯಪಡಿಸುವಂತಿದ್ದವು ಎಂದೇ ಮಾಧ್ಯಮ ಮೂಲಕ ವರದಿಯಾಗಿತ್ತು. ಕೋಡಿಮಠದ ಶ್ರೀ ಗಳ ಭವಿಷ್ಯವನ್ನು ಕೆಲವರು ನಂಬುತ್ತಾರೆ. ಇನ್ನು ಕೆಲವರು ಅವರು ಹೇಳುವ ಭವಿಷ್ಯವನ್ನು ನಂಬುವುದೇ ಇಲ್ಲ. ಆದರೆ ಕುತೂಹಲಕ್ಕಾದರೂ ಅವ್ರನ್ನ ನೋಡುತ್ತಾರೆ ಹೆಚ್ಚು ಜನರು ಎಂದು ಹೇಳಬಹುದು. ಈ ಕೋಡಿಮಠದ ಶ್ರೀಗಳು ಇದೀಗ ರಾಜಕೀಯ ವಿಚಾರವಾಗಿ ಮತ್ತೊಂದು ಮಾತು ಹೊರಗಡೆ ಬಂದಿದ್ದು ರಾಜಕೀಯದಲ್ಲಿ ಈಗ ಎಲ್ಲರೂ ಗುಂಪು ಗುಂಪು ಆಗುತ್ತಾರೆ. ಈ ಬದಲಾವಣೆಯಿಂದ ಯಾರ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ನಮಗೆ ಹೇಳಲಿಕ್ಕಾಗದು ಎಂದು ಶ್ರೀಗಳು ಹೇಳಿದ್ದಾರೆ.    

ಹಾಗೆ ಕರೋನ ಇನ್ನು ಕೂಡ ಹೆಚ್ಚು ಸಂಭವಿಸಲಿದ್ದು, ಈಗಲೇ ಎಚ್ಚರಿಕೆಯಿಂದ ಇರಿ ಮುಂದಿನ ದಿನಗಳಲ್ಲಿ ಗಾಳಿಯಲ್ಲೂ ಅದು ಬರಬಹುದು. ಅದರ ಪರಿಣಾಮವು ಎಲ್ಲೆಲ್ಲೋ ಆವರಿಸಬಹುದು ಎಂದಿದ್ದಾರೆ. ಹಾಗೆ ರೈತರ ವಿಚಾರವಾಗಿ ಮಾತನಾಡಿದ ಕೋಡಿಮಠದ ಶ್ರೀಗಳು ಈ ಬಾರಿ ಮುಂಗಾರಿನ ಮಳೆ ಹೆಚ್ಚಾಗಿ ಹಾವಳಿ ಇಡುತ್ತಿವೆ. ಹಾಗೆ ಹಿಂಗಾರಿನ ಮಳೆಯೂ ಕೂಡ ತುಂಬಾನೇ ಜೋರಾಗಿ ಬರಲಿವೆಯಂತೆ. ಹೆಚ್ಚು ಮಳೆ ಈ ಬಾರಿ ಸುರಿಯಲಿದ್ದು ನಗರಗಳಲ್ಲಿ ಸಾಕಷ್ಟು ಜನರು ಇದರಿಂದ ತೊಂದರೆ ಒಳ ಪಡುತ್ತಾರೆ.  ಹೆಚ್ಚು ನೋವು ಅನುಭವಿಸುತ್ತಾರೆ ಎಂದು ಹೇಳಲಾಗಿ ಕೊಡಿ ಮಠದ ಶ್ರೀಗಳು ಹೇಳಿದ್ದಾರೆ ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಮಳೆಯಿಂದ ರೈತರು ಯಾವ ರೀತಿ ಉಪಯೋಗ ಪಡೆಯುತ್ತಾರೆ ಎಂಬುದಾಗಿ ತಿಳಿಯುತ್ತದೆ.  ನೋಡಿ ವಿಡಿಯೋ ಶೇರ್ ಮಾಡಿ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..( video credit ; zoom in kannada )