ಈ ಕೊರೊನ ಒಂದು ಗ್ರಾಂ ಅಷ್ಟೇ ಎಂದ ಶ್ರೀಗಳು..! ಮತ್ತೆ ನುಡಿದ ಭವಿಷ್ಯ ಭಯನಕವಾಗಿದೆ ನೋಡಿ

Updated: Wednesday, September 15, 2021, 12:22 [IST]

ಕರೋನಾ ಎಂಬುದು ಕೇವಲ ಒಂದು ಗ್ರಾಮ್ ಅಷ್ಟೇ ಆದರೆ ಜಗತ್ತಿನ 800 ಕೋಟಿ ಜನರನ್ನು ಅಲ್ಲಾಡಿಸಿತು, ಎಲ್ಲ ಕಡೆಯೂ ಈ ಮನುಷ್ಯ ವಿಫಲವಾಗಿ ಬಿಟ್ಟಿದ್ದಾನೆ, ಸಮಾಚಾರ, ವಿಚಾರ, ಪ್ರಚಾರದ ಜೊತೆಗೆ ಅಪಪ್ರಚಾರ ಹುಟ್ಟಿಕೊಂಡಿದೆ. ಇನ್ನು ಎಂಟು ವರ್ಷಗಳು ಹೀಗೆಯೇ ಸಾವು-ನೋವುಗಳು ಇದ್ದೇ ಇರುತ್ತವೆ' ಎಂಬುದಾಗಿ ಇದೀಗ ಕೋಡಿಮಠದ ಶ್ರೀಗಳಾದ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹೇಳಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದು ಬಂದಿದೆ.

ಹೌದು ವೇಮಗಲ್ ನಲ್ಲಿ ಮೊನ್ನೆ ಸೋಮವಾರವಷ್ಟೇ ಮಾತನಾಡಿದ ಕೋಡಿಮಠದ ಶ್ರೀಗಳು, ''ಮೇಲೆ ಮಾತ್ರ ಜೀವನ ನಡೆಯುತ್ತಿದೆ, ಮನುಷ್ಯ ಸಂಪಾದನೆ ಮಾಡಿದ್ದನ್ನೆಲ್ಲ ಆಸ್ಪತ್ರೆಗಳಿಗೆ ಕಟ್ಟುತ್ತಿದ್ದಾನೆ, ಇದಕ್ಕೆಲ್ಲಾ ನಮ್ಮ ಜೀವನಶೈಲಿಯ ಬದಲಾವಣೆಯೇ ಕಾರಣ, ಪ್ರಕೃತಿ ಮುನಿಸಿಕೊಂಡಿದೆ, ಹಣ ಮದದಿಂದ, ದೈವಭಕ್ತಿ ತಂದೆ-ತಾಯಿ, ಗುರುಹಿರಿಯರು, ಮಾನವೀಯತೆಯನ್ನು ಮರೆಯುತ್ತಿರುವುದು ಇದಕ್ಕೆ ಕಾರಣ" ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.

ಜೊತೆಗೆ ಶ್ರೀಗಳು ಮೈಸೂರಿನಲ್ಲಿ ದೇವಾಲಯಗಳನ್ನು ಒಡೆದು ಹಾಕುತ್ತಿರುವ ಕುರಿತು ಸಹ ಪ್ರತಿಕ್ರಿಯಿಸಿದ್ದು, "ರಾಜರುಗಳು ದೇವಾಲಯಗಳನ್ನು ನಿರ್ಮಾಣ ಮಾಡಿದ್ದರು, ಈಗ ರಾಜರ ಸ್ಥಾನದಲ್ಲಿರುವ ಸರ್ಕಾರವೇ ದೇವಾಲಯಗಳನ್ನು ಕೆಡವಿದರೆ, ಯಾರಿಗೆ ಹೇಳಬೇಕು. ನೈಜವಾದ ಜ್ಞಾನ ಕಡಿಮೆಯಾಗಿದೆ, ಜಾತಿಯ ಬಣ್ಣಗಳು, ಮತಾಂಧತೆ ಬೆಳೆಯುತ್ತಿದೆ. ಜಾತಿ ಜಾತಿಗಳ ಕೀಳರಿಮೆಯೇ ಕಾರಣವಾಗಿದ್ದು, ಮೊದಲು ಇದು ಬದಲಾಗಬೇಕಿದೆ" ಎಂದು ಶ್ರೀಗಳು ಹೇಳಿದರು....(ವಿಡಿಯೋ ಕೃಪೆ :  ಏಷ್ಯಾ ನೆಟ್ ಸುವರ್ಣ ನ್ಯೂಸ್   )