ಕೋಡಿ ಮಠದ ಶ್ರೀಗಳು ನುಡಿದ ಮತ್ತೊಂದು ಭವಿಷ್ಯ: ಭಾರತಕ್ಕೆ ಕಾದಿದೆ ಗಂಡಾಂತರ
Updated:Monday, April 18, 2022, 21:14[IST]

ಕೋಡಿ ಮಠದ ಶ್ರೀಗಳು ಕೊರೊನಾ ಮಹಾಮಾರಿ ಶುರುವಾಗುವ ಮುನ್ನವೇ ಭವಿಷ್ಯ ನುಡಿದಿದ್ದರು. ಒಂದು ಮಹಾಖಾಯಿಲೆ ಬರುತ್ತದೆ ಅದರಿಂದ ಇಡೀ ವಿಶ್ವವೇ ತಲ್ಲಣಿಸುತ್ತದೆ ಎಂದು ಹೇಳಿದ್ದರು. ಹಾಸನ ತಾಲೂಕಿನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ನುಡಿದಿರುವ ಭವಿಷ್ಯಗಳು ಸತ್ಯವಾಗಿದ್ದು, ಈಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಇದನ್ನು ಕೇಳಿದರೆ ನೀವು ಶಾಕ್ ಆಗ್ತೀರಿ.. ಈ ಭವಿಷ್ಯದ ಪ್ರಕಾರ ಭಾರತಕ್ಕೆ ದೊಡ್ಡ ಗಂಡಾಂತರ ಕಾದಿದೆಯಂತೆ.
ಭಾರತದಲ್ಲಿ ಬಹುದೊಡ್ಡ ಗಂಡಾಂತರ ನಡೆಯುತ್ತದೆ ಎಮದು ಹೇಳಿದ್ದಾರೆ. ಇದರಿಂದ ಎಲ್ಲೆಡೆ ಗಲಭೆ-ದೊಂಬಿಗಳು ಉಂಟಾಗುತ್ತವೆಯಂತೆ. ಎಲ್ಲರಲ್ಲೂಅಶಾಂತಿ ಜಗಳಗಳು ಉಂಟಾಗುತ್ತವೆ. ವಿದ್ಯುತ್ ನಿಂದಾಗಿ ಅಪಾಯಗಳು ಸಂಭವಿಸುತ್ತವೆ. ನೋವು ಹೆಚ್ಚಾಗುತ್ತದೆ. ದೇಶದ ಸುಂದರ ಹೆಣ್ಣುಮಕ್ಕಳಿಗೆ ಅಪಾಯವಿದೆಯಂತೆ. ಸುಂದರವಾದ ಹಂಗಳೆಯರ ಅಂಗಾಂಗಗಳನ್ನು ಕಿತ್ತು ತಿನ್ನುತ್ತಾರಂತೆ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಬೆಂಕಿಯಿಂದ ಅನಾಹುತಗಳು ನಡೆಯುತ್ತವೆ. ಗುಡುಗು ಸಿಡಿಲು ಗಾಳಿ ಸಹಿತ ಮಳೆಯಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಕಳೆದ ಬಾರಿ ಹೇಳಿದ ಭವಿಷ್ಯದಲ್ಲಿ ʼಕುಂಭದಲಿ ಗುರು ಬರಲು ತುಂಬುವುದು ಕೆರೆಕಟ್ಟೆ, ಶಂಬುವಿನ ಪದ ಸಾಕ್ಷಿ ಡಂಬವೆನ್ನಲು ಬೇಡುವೆನಾʼ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಹಾಗೆಂದರೆ, ಕುಂಭ ರಾಶಿಯಲ್ಲಿ ಗುರು ಗ್ರಹ ಬಂದರೆ ಭೂಮಿ ಮೇಲೆ ಹೆಚ್ಚು ಮಳೆಯಾಗುತ್ತದಂತೆ. ಇದರಿಂದ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತವೆ ಎಂದರ್ಥ. ಆದರೆ ಇದರ ಹಿಂದಿನ ವಿಚಾರವೇನೆಂದರೆ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ ಎಂದು. ಹೌದು.. ಅತಿವೃಷ್ಟಿಯಿಂದಾಗಿ, ಭೂ ಕುಸಿತ, ಭು ಕಂಪನವಾಗುತ್ತದೆ. ಭೀಕರ ಪ್ರವಾಹಕ್ಕೆ ಕರ್ನಾಟಕ ತತ್ತರಿಸಿ ಹೋಗಲಿದೆ. ಜನರ ಆಸ್ತಿ-ಪಾಸ್ತಿ, ಮನೆ-ಮಠಗಳು ನೀರಿನಲ್ಲಿ ಕೊಚ್ಚಿ ಹೋಗಲಿವೆ. ನೀರಿನಲ್ಲಿ ಜನ ಕೊಚ್ಚಿ ಹೋಗುತ್ತಾರೆ ಎಂದು ಶ್ರೀಗಳು ಹೇಳಿದ್ದರು.
ಇಷ್ಟೇ ಅಲ್ಲದೇ, ಸಂಕ್ರಾಂತಿ ಹಬ್ಬ ಕಳೆದ ಮೇಲೆ ಇನ್ನಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಹಾಮಾರಿ ಕೊರೊನಾಗಿಂತಲೂ ದೊಡ್ಡ ಖಾಯಿಲೆ ಒಂದು ಬರುತ್ತದೆ. ಪ್ರೇತಾತ್ಮಗಳು ಮಾತನಾಡುತ್ತವೆ. ಆತ್ಮಗಳು ಮಾತನಾಡುವುದು ಮನುಷ್ಯರು ಕೇಳಿಸಿಕೊಳ್ಳುವುದಿಲ್ಲ. ಪ್ರೇತಾತ್ಮಗಳು ಭೂಮಿಯಿಂದ ಎದ್ದು ಬರುವುದನ್ನು ಜನ ನೋಡುತ್ತಾರೆ. ಈಗ ಕೊರೊನಾದಿಂದ ಸತ್ತಿರುವವರೆಲ್ಲಾ ಬದುಕಿ ಎದ್ದು ಬರುತ್ತಾರೆ. ಎಚ್ಚರವಾಗಿರಿ. ಜನರು ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಬಿದ್ದು ಸಾಯುತ್ತಾರೆ. ಅಲ್ಲಲ್ಲಿ ಹೆಣಗಳು ಕಾಣಿಸುತ್ತವೆ ಎಂದು ಭವಿಷ್ಯವಾಣಿ ನುಡಿದಿದ್ದರು.