ಕೊಪ್ಪಳದ ಈ ಯುವತಿ ಭಾರತೀಯ ಸೇನೆಗೆ ಆಯ್ಕೆ..! ಗೌರವ ನೀಡಿ ಸೈನ್ಯಕ್ಕೆ ಕಳುಹಿಸಿದ ಗ್ರಾಮಸ್ಥರು..!

Updated: Thursday, April 1, 2021, 10:06 [IST]

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳೇಕಲ್​ ಎಂಬ ಚಿಕ್ಕ ಹಳ್ಳಿಯ ವೀಣಾ ಎನ್ನುವ ಯುವತಿ ಇದೀಗ ನಮ್ಮ ಭಾರತೀಯ ಸೇನೆಗೆ ಆಯ್ಕೆಯಗಿದ್ದಾರೆಂದು ಮಾದ್ಯಮ  ಮೂಲಕ ತಿಳಿದುಬಂದಿದೆ.ಹಾಗೆ ಈ ಕುರಿತು ಗ್ರಾಮಸ್ಥರು ಯುವತಿಯನ್ನು ಗೌರವಿಸಿ ಸೈನ್ಯಕ್ಕೆ ಸೇರಲು ಕಳುಹಿಸಿ ಕೊಟ್ಟಿದ್ದಾರೆ..  

ಭಾರತೀಯ ಸೇನೆಯ ಹೆಸರು ಕೇಳಿದ ತಕ್ಷಣವೇ ದೇಶದ ಪ್ರತಿಯೊಬ್ಬ ಪ್ರಜೆಗೆ ಮೈ ಝುಂ ಎನಿಸುತ್ತದೆ. ಹೌದು ಇಲ್ಲಿ ಹಗಲು ರಾತ್ರಿ ಎನ್ನದೇ, ದೇಶ ಸೇವೆ ಮಾಡುತ್ತಾ, ಅವರ ಪ್ರಾಣವನ್ನ ಪಣಕ್ಕಿಟ್ಟು ಹೋರಾಡೋ ಸೈನಿಕರನ್ನ ಪ್ರತಿಯೊಬ್ಬರು ಸಹ ಗೌರವಿಸುತ್ತಾರೆ. ಸಾಮಾನ್ಯವಾಗಿ ಹೆಚ್ಚಾಗಿ ಕಾರ್ಯ ನಿರ್ವಹಿಸುವುದು, ಸೇನೆಯಲ್ಲಿ ಸೇವೆ ಮಾಡುವುದು ಪುರುಷರು,,

ಆದ್ರೆ ಈ ಕೆಲ ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶವೂ ನಮ್ಮ  ಮಹಿಳೆಯರಿಗೂ ಸಿಕ್ಕಿದೆ. ಈ ಅವಕಾಶ ಸದುಪಯೋಗ ಪಡಿಸಿಕೊಂಡ ಮಹಿಳೆಯರು, ದೇಶ ಸೇವೆ ಮಾಡಲು ಕೆಲವರು ನಿರ್ಧಾರ ಮಾಡಿದ್ದು, ತಮ್ಮನ್ನ ತಾವು ಈ ಕಾರ್ಯದಲ್ಲಿ ತೊಡಗಿಸಿಕೊಂಡು ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ...  

ಹೌದು ಇದೆ ಸಾಲಿಗೆ ಇದೀಗ ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಯುವತಿಯೊಬ್ಬರು ದೇಶದ ಸೇನೆಗೆ ಆಯ್ಕೆಯಾಗಿದ್ದಾರೆ. ಹೌದು ವೀಣಾ ಎನ್ನವ ಯುವತಿಗೆ ಗ್ರಾಮಸ್ಥರು ಎಲ್ಲರೂ ಸೇರಿ, ಇವರ ಕುಟುಂಬದವರು ಸಹ ಗೌರವ ಸೂಚಿಸಿ, ದೇಶ ಸೇವೆ ಮಾಡಲು ಸೇನೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ದೇಶ ಸೇವೆಗೆ ಮಗಳನ್ನ ಕಳುಹಿಸಿಕೊಡತ್ತಿರುವ ವೇಳೆ ಕಣ್ಣಂಚಲ್ಲಿ ನೀರನ್ನ ತುಂಬಿಕೊಂಡು, ಹೆಮ್ಮೆಯ ಭಾವವನ್ನ ಹೊತ್ತ ಈ ಯುವತಿಯ ತಂದೆ ತಾಯಿಯ ದೃಶ್ಯ ಸೋಷಿಯಲ್ ಮಿಡಿಯಾದಲಿ ಸದ್ದು ಮಾಡುತ್ತಿದೆ. ಹಾಗೆ ಯುವತಿಯ ಈ ಸಾಧನೆ ಮಹಿಳೆಯರಿಗೆ ಆದರ್ಶವಾಗಿದಂತಾಗಿದ್ದು, ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ....