‌ಇಲ್ಲಿ ಸಾರಾಯಿ ಶೀಷೆಯಲಿ ದೇವಿ ಕಾಣುವಳು; ಇಷ್ಟಾರ್ಥ ಫಲಿಸಲು ಈ ಊರಿನ ದೇವಸ್ಥಾನಕ್ಕೆ ಸಾರಾಯಿ ಹರಕೆ ಕಟ್ಟುತ್ತಾರೆ  !

By Infoflick Correspondent

Updated:Monday, March 28, 2022, 20:17[IST]

‌ಇಲ್ಲಿ ಸಾರಾಯಿ ಶೀಷೆಯಲಿ ದೇವಿ ಕಾಣುವಳು; ಇಷ್ಟಾರ್ಥ ಫಲಿಸಲು ಈ ಊರಿನ ದೇವಸ್ಥಾನಕ್ಕೆ ಸಾರಾಯಿ ಹರಕೆ ಕಟ್ಟುತ್ತಾರೆ  !

ಸಾಮಾನ್ಯವಾಗಿ ದೇವರಿಗೆ ಹೂ, ಹಣ್ಣು ಕಾಯಿ, ಸಿಹಿ ತಿಂಡಿ  ತಿನಿಸುಗಳು ಸೇರಿದಂತೆ ಇತರೆ ವಸ್ತುಗಳನ್ನು ನೈವೇದ್ಯವಾಗಿ ಇಡುತ್ತಾರೆ.  ಕಷ್ಟಗಳಿಗೆ ಹರಕೆ ಹೊತ್ತಿದರೂ ತೆಂಗಿನಕಾಯಿ ಒಡೆಯುವುದು ಅಥವಾ ಅಭಿಷೇಕ ಮಾಡಿಸುವ ಹರಕೆ ಹೊತ್ತಿರುತ್ತಾರೆ ಆದರೆ ಈ ಊರಿನಲ್ಲಿ  ಈ ದೇವರಿಗೆ ಮಾತ್ರ ಸಾರಾಯಿ ನೈವೇದ್ಯ ಮಾಡುತ್ತಾರೆ. ಮತ್ತು ಸಾರಾಯಿ ಹರಕೆ ಹೊತ್ತಿದರೆ ಕಷ್ಟ ಪರಿಹಾರ ಆಗುತ್ತದೆ ಎಂದು ನಂಬಿದ್ದಾರೆ. ಆಶ್ಚರ್ಯವಲ್ಲವೇ ? ನಿಮ್ಮ ಕಷ್ಟಕ್ಕೂ ಈ ದೇವರ ಬಳಿ ಸಾರಾಯಿ ಹರಕೆ ಹೊರುವಿರೆ ?  ಇಲ್ಲಿದೆ ನೋಡಿ ಮಾಹಿತಿ 

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ. ಸಾರಾಯಿ ಹರಕೆ ಕಟ್ಟುತ್ತಾರೆ. ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಇಲ್ಲಿ ಜಾತ್ರೆ ನಡೆಯುತ್ತದೆ, ಆಗ ಇಲ್ಲಿಗೆ ಬರುವ ಜನತೆ  ಹರಕೆ ಕಟ್ಟುತ್ತಾರೆ ಮತ್ತು ಕಟ್ಟಿದ ಹರಕೆ ತೀರಿಸಲು ಬರುತ್ತಾರೆ. ಇಲ್ಲೊಂದು ನಂಬಿಕೆ ಇದೆ. ಸಾರಾಯಿ ಹರಕೆ ಕಟ್ಟಿದರೆ ಕಷ್ಟನಿವಾರಣೆ ಆಗುತ್ತದೆ ಮತ್ತು ಇಷ್ಟಾರ್ಥ ನೆರವೇರುತ್ತದೆ ಎಂದು.  

ಹರಕೆ ಈಡೇರಿದರೆ ರಂಗನಾಥ ಸ್ವಾಮಿ ದೇವರಿಗೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತವರು  ಮದ್ಯದ ಬಾಟಲಿ ನೀಡುತ್ತಾರೆ. ಇಲ್ಲಿನ ಜನತೆ  ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಸಲ್ಲಿಸಿ, ತೀರ್ಥ ಸೇವನೆ ಮಾಡುವುದನ್ನು ನಾವು ಇ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಮದ್ಯಪ್ರಿಯ ದೇವರು ಎಂದು, ಸಾರಾಯಿ ಬಾಟಲ್  ತೆಗೆದುಕೊಂಡು ಬಂದು ದೇವರಿಗೆ ನೀಡುತ್ತಾರೆ.