ಹಿಜಾಬ್ ಕುರಿತು ಖೇಲ್ ಕಥಮ್ ನಾಟಕ್ ಬಂದ್ ಎಂದ ಮಾಳವಿಕಾ..! ನಟಿ ತಾರಾ ಹೇಳಿದ್ದೆ ಬೇರೆ..?

By Infoflick Correspondent

Updated:Friday, March 18, 2022, 17:56[IST]

ಹಿಜಾಬ್ ಕುರಿತು ಖೇಲ್ ಕಥಮ್ ನಾಟಕ್ ಬಂದ್ ಎಂದ ಮಾಳವಿಕಾ..! ನಟಿ ತಾರಾ ಹೇಳಿದ್ದೆ ಬೇರೆ..?

ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಶಾಲೆಯ ಕಾಲೇಜಿನ ಸಮವಸ್ತ್ರ ವಿಚಾರವಾಗಿ ಸಾಕಷ್ಟು ಗಲಾಟೆ ಘಟನೆಗಳು ಸಂಭವಿಸಿದ್ದವು. ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಅನ್ನು ಧರಿಸಿಕೊಂಡೇ ಬರುವುದಾದರೆ ಸಮಾನತೆ ಎಲ್ಲಿದೆ, ಅವರು  ಅದನ್ನೇ ಮುಂದುವರಿಸಿದರೆ, ನಾವು ಕೂಡ ನಮ್ಮ ಹಿಂದೂ ಶಾಲನ್ನು ಹಾಕಿಕೊಂಡೇ ಶಾಲೆಗೆ ಬರುತ್ತೇವೆ ಎಂದಿದ್ದರು. ಈ ವಿಚಾರವಾಗಿ ಕೆಲವು ಕಡೆ ಸಾಕಷ್ಟು ಉದ್ವಿಗ್ನ ಪರಿಸ್ಥಿತಿ ಕೂಡ ಎದುರಾಗಿತ್ತು. ಬಳಿಕ ಈ ವಿಚಾರವಾಗಿ ಮೊನ್ನೆ ಹೈಕೋರ್ಟ್ ಒಂದು ತೀರ್ಪನ್ನು ನೀಡಿದೆ. ಇನ್ನು ಮುಂದೆ ಶಾಲೆಗಳಲ್ಲಿ ಅಥವಾ ಕಾಲೇಜಿನಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ತೀರ್ಪು ನೀಡಿ ಆಜ್ಞೆ ಹೊರಡಿಸಿದ್ದರು.

ಮುಸ್ಲಿಂ ಬಾಂಧವರು ಈ ಹೈಕೋರ್ಟ್ ತೀರ್ಪನ್ನು ಕೆಲವರು ವಿರೋಧಿಸಿದರೆ, ಇನ್ನೂ ಕೆಲವರು ಒಪ್ಪಿಕೊಂಡಿದ್ದಾರೆ. ಈಗ ಕನ್ನಡದ ರಾಜಕಾರಣಿ ಹಾಗೂ ಹಿರಿಯ ನಟಿ ತಾರಾ  (Tara ) ಅವರು ಹೈಕೋರ್ಟ್ ತೀರ್ಪಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಾಧ್ಯಮದ ಎದುರು, ಎಲ್ಲರಿಗೂ ಅವರವರದೇ ಧರ್ಮ ಶ್ರೇಷ್ಠ. ಆದರೆ ಆ ಧರ್ಮವನ್ನು ಆಚರಣೆ ಮಾಡುವುದಕ್ಕೆ ಮನೆ ಇದೆ, ದೇವಸ್ಥಾನ ಇದೆ, ಅಲ್ಲಿ ಬೇಕಾದರೆ ಆಚರಣೆ ಮಾಡಿಕೊಳ್ಳಿ. ಅದನ್ನು ಬಿಟ್ಟು ಶಾಲೆ ಮತ್ತು ಕಾಲೇಜುಗಳಲ್ಲಿ ಆಚರಿಸಿದರೆ ಮಕ್ಕಳಲ್ಲಿ ಸಮಾನತೆ ಎಲ್ಲಿ ಇರುತ್ತದೆ. ಹೌದು ಶಾಲೆಯಲ್ಲಿ ಎಲ್ಲರೂ ಸಮವಾಗಿರಲಿ ಎಂದು ಹೇಳುತ್ತಲೇ ಬಂದಿದೆ. ಶಾಲೆಯಲ್ಲಿ ಸಮವಸ್ತ್ರ ಸಮವಾಗಿರಲಿಲ್ಲ ಎಂದರೆ ಮಕ್ಕಳಲ್ಲಿ ಭೇದಭಾವ ಹುಟ್ಟುತ್ತದೆ.    

ಮೇಲು-ಕೀಳು ತಾರತಮ್ಯ ಹೆಚ್ಚಾಗುತ್ತದೆ. ಇದೀಗ ಹಿಜಾಬ್ ಧರಿಸುವ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪು ಸೂಕ್ತವಾಗಿದೆ. ಎಲ್ಲರೂ ಶಾಲೆಯಲ್ಲಿ ಸಮವಸ್ತ್ರ ಧರಿಸಲಿ, ಹಾಗೆ ಸಮನಾಗಿರಲಿ, ಮಕ್ಕಳಲ್ಲಿ ಸಮಾನತೆ ಇರುತ್ತದೆ ಎಂದು ಇನ್ನುಮುಂದೆ ಹಿಜಾಬ್ ಹಾಕಿಕೊಳ್ಳುವುದಕ್ಕೆ ನಿಷೇಧ ನೀಡಿರುವುದು ಹೈಕೋರ್ಟ್ ತೀರ್ಪಿನ ಒಂದು ಒಳ್ಳೆಯ ತೀರ್ಪು ಆಗಿದೆ ಎಂದು ಧನ್ಯವಾದ ತಿಳಿಸಿದ್ದಾರೆ. ಇನ್ನೊಂದು ಕಡೆ ನಟಿ ಮಾಳವಿಕಾ  (Malavika) ಅವರು ಕೂಡ ಕೇಲ್ ಕತಂ ನಾಟಕ್ ಬಂದ್ ಎಲ್ಲರೂ ಶಾಲೆಯಲ್ಲಿರುವ ಸಮವಸ್ತ್ರವನ್ನು ಧರಿಸಿ ಶಾಲೆಗೆ ನಡೆಯಿರಿ, ನಿಮ್ಮ ನಿಮ್ಮ ಧಾರ್ಮಿಕ ಆಚರಣೆಗಳು ಶಾಲೆಯ ಒಳಗೆ ನಿಜಕ್ಕೂ ಸೂಕ್ತವಲ್ಲ. ಹೈಕೋರ್ಟ್ ಒಳ್ಳೆಯ ತೀರ್ಪನ್ನ ತೆಗೆದುಕೊಂಡಿದೆ ಧನ್ಯವಾದಗಳು ಎಂದಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ, ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..