ಮಮತಾ ಬ್ಯಾನರ್ಜಿ ದೇಶದ ಪ್ರಧಾನಿ ಮೋದಿಯ ಮೇಲೆ ಏಕೆ ಕೋಪಗೊಂಡರು !!

Updated: Tuesday, May 4, 2021, 08:48 [IST]

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಭರ್ಜರಿ ಜಯದ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ತನಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆ ಬಂದಿಲ್ಲ. ನಾನು ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಪ್ರಧಾನಿ ನನಗೆ ಶುಭ ಕೋರಿಲ್ಲ ಎಂದು ಬಿಜೆಪಿ ಎದುರು ಜಯಸಾಧಿಸಿರುವ ದೀದಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.  

ಇನ್ನು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ಮೋದಿ ಅವರು ಟ್ವೀಟರ್ ಮೂಲಕ ಶುಭ ಕೋರಿದ್ದರು. ಮಮತಾ ಬ್ಯಾನರ್ಜಿ ಅವರಿಗೆ ಅಭಿನಂದನೆಗಳು, ಜನರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಕೇಂದ್ರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ಹೇಳಿದ್ದರು. 

ಆದರೆ, ಅವರು ದೇಶದ ಪ್ರಧಾನಿಯಾಗಿ ರಾಜ್ಯದಲ್ಲಿ ಚುನಾವಣೆಯಲ್ಲಿ ಗೆದ್ದಿರುವ ನನಗೆ ವಿಷ್ ಮಾಡಿಲ್ಲ. ಇದಕ್ಕೆ ಬಹುಶಃ ನಾನು ಬಿಜೆಪಿ ವಿರುದ್ಧ ಗೆದ್ದಿರುವುದಕ್ಕೆ ಅವರಿಗೆ ಮುಖಭಂಗವಾಗಿದೆ ಅಂದಕ್ಕೆ ನನಗೆ ಕರೆ ಮಾಡಿಲ್ಲ ಎಂದು ಹೀಯಾಳಿಸಿದ್ದಾರೆ. 
ಹಾಲಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿರುವ ಟಿಎಂಸಿ 212 ಸ್ಥಾನ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ಇತ್ತ ಬಿಜೆಪಿ ಕೂಡ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದು, 78 ಸ್ಥಾನಕ್ಕೆ ಪಡೆದಿದೆ.