ಬೆಂಗಳೂರು ಮೈಸೂರು ಪ್ರಯಾಣಿಕರ ಗಮನಕ್ಕೆ ಮೈಸೂರು ಬೆಂಗಳೂರು ಮಾರ್ಗದಲ್ಲಿ ಈ ಬದಲಾವಣೆ

By Infoflick Correspondent

Updated:Sunday, August 28, 2022, 09:39[IST]

ಬೆಂಗಳೂರು ಮೈಸೂರು ಪ್ರಯಾಣಿಕರ ಗಮನಕ್ಕೆ ಮೈಸೂರು ಬೆಂಗಳೂರು ಮಾರ್ಗದಲ್ಲಿ ಈ ಬದಲಾವಣೆ

ರಾಮನಗರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ಹಲವು ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಈ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಅನೇಕ ಕಡೆಯಲ್ಲಿ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. 

ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಜಲಾವೃತಗೊಂಡಿರುವುದರಿಂದ ಬೆಂಗಳೂರು ಮೈಸೂರು ರಸ್ತೆಯಲ್ಲಿ ಸುಮಾರು 38 ಕಿ.ಮೀ. ಉದ್ದ ಟ್ರಾಫಿಕ್ ಜಾಮ್ ಆಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕಿಲೋಮೀಟರ್ ಗಟ್ಟಲೆ ಉದ್ದ ವಾಹನಗಳು ನಿಲ್ಲುವಂತಾಗಿದೆ.ಉದ್ಘಾಟನೆಗೆ ಸಿದ್ಧವಾಗಿದ್ದ ಕುಂಬಳಗೋಡು ಬಳಿಯ ಟೋಲ್ ಕೂಡ ಜಲಾವೃತ್ತಗೊಂಡಿದೆ.  

ಹೀಗಾಗಿ ಬೆಂಗಳೂರು ಟು ಮೈಸೂರು ಪ್ರಯಾಣಿಸುವಂತ ವಾಹನ ಸವಾರರು ಪರ್ಯಾಯ ಮಾರ್ಗದ ಮೂಲಕ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಮನಗರ ಜಿಲ್ಲಾಡಳಿತವು, ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಕೆರೆ ಕಟ್ಟೆಗಳು ತುಂಬಿದ ಪರಿಣಾಮ, ಕೋಡಿಗಳು ಬಿದ್ದು, ನೀರು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದಂತೆ ಉಂಟಾಗಿದೆ ಎಂದು ಹೇಳಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿಯುತ್ತಿರೋ ಪರಿಣಾಮ, ಸಂಚಾರ ದಟ್ಟಣೆ ಉಟ್ಟಾಗಿದ್ದು, ಸುಗಮ ಪ್ರಯಾಣಕ್ಕೆ ತೊಂದರೆಯಾಗುವ ಸಂಭವವಿದೆ. ಹೀಗಾಗಿ ವಾಹನ ಸವಾರರು ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರು -ಮೈಸೂರು ಮಾರ್ಗವಾಗಿ ಪ್ರಯಾಣಿಸುವವರು, ಬೆಂಗಳೂರು - ಕನಕಪುರ - ಮೈಸೂರು ಮಾರ್ಗವಾಗಿ ಅಥವಾ ಬೆಂಗಳೂರು, ಕುಣಿಗಲ್, ಮೈಸೂರು ಮಾರ್ಗವಾಗಿ ಪ್ರಯಾಣ ಮಾಡಲು ಮನವಿ ಮಾಡಿದೆ.