ಗರ್ಭಿಣಿ ಆಗಿದ್ದಾರಾ ಶಂಕ್ರಪ್ಪ ಅವರ ಪತ್ನಿ ಮೇಘನಾ..?

By Infoflick Correspondent

Updated:Tuesday, March 29, 2022, 17:11[IST]

ಗರ್ಭಿಣಿ ಆಗಿದ್ದಾರಾ ಶಂಕ್ರಪ್ಪ ಅವರ ಪತ್ನಿ ಮೇಘನಾ..?

25 ವರ್ಷದ ಮೇಘನಾ 45 ರ ಹರೆಯದ ಶಂಕ್ರಣ್ಣನನ್ನು ಮದುವೆಯಾಗಿ ಸೂಖವಾಗಿದ್ದರು. ಆದರೆ, ಈಗ ಮತ್ತೆ ಮೇಘನಾ ಒಂಟಿಯಾಗಿದ್ದಾರೆ. ಸೋಸೆಯ ಕಾಟ ತಡೆಯಲಾರದೇ ಮಗ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ಮೇಘನಾ ವಿರುದ್ಧ ಶಂಕ್ರಣ್ಣ ಅವರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತ ಪತಿ ಸಾವಿಗೆ ಅತ್ತೆಯೇ ಕಾರಣ ಅಂತ ಮೇಘನಾ ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಈ ಮೇಘನಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ. ಇದೇ ಸಂದರ್ಭದಲ್ಲಿ ಶಂಕ್ರಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದು ವಿಪರ್ಯಾಸ. 

ನಾನು, ನನ್ನ ಪತಿ ಇಬ್ಬರೂ ಚೆನ್ನಾಗಿದ್ವಿ. ಎರಡು ತಿಂಗಳಿಂದ ನನ್ನ ಜೊತೆಗೆ ಅತ್ತೆ ಪದೇ ಪದೆ ಜಗಳ ಮಾಡುತ್ತಿದ್ದರು. 15 ದಿನಕ್ಕೊಂದು ಸಲವಾದರೂ ಜಗಳ ಮಾಡುತ್ತಿದ್ದರು. ಗಂಡ-ಹೆಂಡತಿ ನಡುವೆ ಏನು ಸಮಸ್ಯೆ ಇರಲಿಲ್ಲ. ನಮ್ಮ ಅತ್ತೆ ಪದೇ ಪದೇ ಹೊರಗೆ ಹೋಗ್ತಾಳೆ ಅಂತ ನನ್ನ ವಿಚಾರಕ್ಕೆ ಜಗಳ ಮಾಡುತ್ತಿದ್ದರು. ನನ್ನ ತಂದೆ ತಾಯಿಯರ ಜೊತೆಗೂ ಮಾತನಾಡಲು ಬಿಡುತ್ತಿರಲಿಲ್ಲ. ಇನ್ನು ಇಬ್ಬರನ್ನು ಸಂಬಾಳಿಸಲು ಸಾಧ್ಯವಿಲ್ಲ ಅಂತ ನನ್ನ ಗಂಡ ಗೋಳಾಡುತ್ತಿದ್ದರು. ಅದಕ್ಕೆ ನಮ್ಮ ಅತ್ತೆ ನೀನು ಹೋಗಿ ಸಾಯಿ ಅಂತ ಮಗನಿಗೆ ಬೈದರು. ಆಗ ನನ್ನ ಪತಿ ಮನೆ ಬಿಟ್ಟು ಹೋದರು. ನನ್ನ ಪತಿ ರಾತ್ರಿಯಲ್ಲ ವಾಪಸ್ ಮನೆಗೆ  ಬರಲಿಲ್ಲ. ರಾತ್ರಿ ಫೋನ್ ಮಾಡಿದರೂ, ಕಾಲ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಸತ್ತಿರುವ ಸುದ್ದಿ ಕೇಳಬೇಕಾಯ್ತು. 

ಜಮೀನು, ಹಣ ಅಂತಸ್ತು ನೋಡಿ ಬರಲಿಲ್ಲ. ಹಾಗಿದ್ದಿದ್ದರೆ ಮದುವೆಗೂ ಮುಂಚೆಯೇ ಆಸ್ತಿ ನನ್ನ ಹೆಸರಿಗೆ ಬರೆಸಿಕೊಳ್ಳುತ್ತಿದ್ದೆ. ಇನ್ನು ಬೆಂಗಳೂರು, ಮೈಸೂರು ಅಂತ ಹೋಗೋ ಯೋಚನೇನೂ ನನಗಿರಲಿಲ್ಲ. ನಾನು ಅಮ್ಮ ಮಗನನ್ನು ದೂರ ಮಾಡುತ್ತಿದ್ದೇನೆ ಅಂತ ನಮ್ಮ ಅತ್ತೆ ಜಗಳ ಆಡುತ್ತಿದ್ದರು. ನಾನೀಗ ನಾಲ್ಕು ತಿಂಗಳ ಗರ್ಭಿಣಿ, ನನ್ನ ಪತಿಯ ಮಗು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಈ ಸಮಯದಲ್ಲಿ ಅವರು ನನ್ನನ್ನು ಬಿಟ್ಟು ಹೋಗಿದ್ದಾರೆ. ನಾನೇನು ಮಾಡಲಿ ಅಂತ ಮೇಘನಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.