ಕೊರೊನಾ ಎರಡನೇ ಅಲೆ ತಡೆಗೆ ಲಾಕ್ ಡೌನ್ ಒಂದೇನಾ ದಾರಿ: ಮಹತ್ವದ ಸಭೆ ಬಳಿಕ ಮೋದಿ ಕೊಡ್ತಾರಾ ಶಾಕ್..!

Updated: Wednesday, May 5, 2021, 10:45 [IST]

ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ತಡೆಗೆ ಲಾಕ್ ಡೌನ್ ಒಂದೇ ಮಾರ್ಗ ಎಂದು ಹಲವು ತಜ್ಞರು ಸಲಹೆ ನೀಡಿದ್ದಾರೆ. ನೈಟ್ ಕರ್ಫ್ಯೂ, ಜನತಾ ಕರ್ಫ್ಯೂನಂತಹ ನಿರ್ಬಂಧಗಲ ನಡುವೆಯೂ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಕೊರೊನಾ ಚೈನ್ ಬ್ರೇಕ್ ಮಾಡಲು ಲಾಕ್ ಡೌನ್ ಒಂದೇ ಮಾರ್ಗ ಎನ್ನಲಾಗಿದೆ.   

ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಲಾಕ್‌ ಡೌನ್ ಮಾಡಬೇಕೋ ಬೇಡವೋ ಎಂಬ ಬಗ್ಗೆ ಇಂದು ಬೆಳಿಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ ಎಂದು ತಿಳಿದುಬಂದಿದೆ. ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ ಡೌನ್‌ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ. 

ದೇಶದಲ್ಲಿ ಆಮ್ಲಜನಕ, ಕೊರೊನಾ ಲಸಿಕೆ, ವೆಂಟಿಲೇಟರ್, ಐಸಿಯು, ಬೆಡ್ ಮತ್ತಿತರ ಕೊರತೆಗಳು ಉಂಟಾಗಿವೆ. ಕೊರೋನಾ ವಿಷಯದಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಕೊರೋನಾ ‌ನಿಯಂತ್ರಣಕ್ಕೆ ಲಾಕ್ಡೌನ್ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಆದೇಶ ಹೊರಡಿಸಿದೆ.

ಆರೋಗ್ಯ ಕ್ಷೇತ್ರದ ತಜ್ಞರು ದೇಶದಲ್ಲಿ ಕೊರೊನಾದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ತಜ್ಞರು ಕೊರೋನಾದ 3ನೇ ಅಲೆಗೆ ಸಿದ್ದರಾಗಿ ಎಂಬ ಎಚ್ಚರಿಸಿದ್ದಾರೆ. ವಿದೇಶಿ ಅಧ್ಯಯನಗಳು ಕೂಡ ಇಂಥದೇ ಆತಂಕವನ್ನು ಹೊರಹಾಕಿವೆ. ಪರೋಕ್ಷವಾಗಿ ಅವರು ಕೂಡ ಲಾಕ್ಡೌನ್ ಮಾಡಿ ಎಂದೇ ಹೇಳಿವೆ.