ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳು ಯಾರು ಗೊತ್ತಾ..?

By Infoflick Correspondent

Updated:Saturday, September 3, 2022, 11:32[IST]

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳು ಯಾರು ಗೊತ್ತಾ..?

ಕಳೆದ ಒಂದು ವಾರದಿಂದ ಮುರುಘಾ ಮಠದ ಸುದ್ದಿಯೇ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಮುರುಘಾ ಮಠದ ಶ್ರೀಗಳಾದ ಶ್ರೀ ಡಾ.ಶಿವಮೂರ್ತಿ ಸ್ವಾಮಿಗಳು ಮಠದಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪ ಸಂಬಂಧ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನು ಶ್ರೀಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.   

ಅಷ್ಟಕ್ಕೂ ಈ ಮುರುಘಾ ಮಠದ ಶ್ರೀಗಳು ಯಾರು..? ಅವರ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ ಬನ್ನಿ..

ಚಿತ್ರದುರ್ಗದ ಗೋದಬನಹಾಳ ಗ್ರಾಮದಲ್ಲಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಜನಿಸಿ ದರು. ಅದು 1958, ಏಪ್ರಿಲ್ 11ರಂದು. ಚಿತ್ರದುರ್ಗದಲ್ಲೇ ಶರಣರು ಶಾಲಾ ವಿದ್ಯಾಬ್ಯಾಸವನ್ನು ಪೂರೈಸಿದರು. ನಂತರ ಮೈಸೂರು ವಿವಿಯಲ್ಲಿ ಪದವಿಯನ್ನು ಪಡೆದರು. ಈ ವೇಳೆ ಶರಣರು ಆಧ್ಯಾತ್ಮಿಕತೆ, ಬುದ್ಧಿವಂತಿಕೆಯಲ್ಲಿ ಬಹಳ ಜಾಣರಾಗಿದ್ದರು. ಇವರನ್ನು ಗಮನಿಸಿದ ಅಂದಿನ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶರಣರು ಇವರನ್ನು ಮೆಚ್ಚಿಕೊಂಡರು. ಹಾಗಾಗಿ ತಮ್ಮ ನಂತರ ಮುಂದಿನ ಉತ್ತಾರಾಧಿಕಾರಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಎಂದು ಘೋಷಿಸಿದರು. 

ಅಲ್ಲಿಂದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹಾವೇರಿಯ ಮುರುಘರಾಜೇಂದ್ರ ಮಠ ಸೇರಿದಂತೆ ಹಲವು ಶಾಖಾ ಮಠಗಳಲ್ಲಿ ತರಬೇತಿಯನ್ನು ಸಹ ಪಡೆದರು. ಬಳಿಕ 1991 ಜನವರಿ 31ರಂದು ಮುರುಘಾಮಠದ ಪೀಠಾಧಿಪತಿಯಾದರು. ಇನ್ನು ಇವರು ಕೇವಲ ಆಧ್ಯಾತ್ಮಿಕತೆಯಷ್ಟೇ ಅಲ್ಲದೇ,ರಾಜಕೀಯ, ಜಾತಿ ವಿಚಾರಗಳಲ್ಲಿ ವೈಚಾರಿಕತೆಗೆ ಸುದ್ದಿಯಾದವರು ಕೂಡ. ಪರಿಸರ ಪ್ರೇಮಿಯೂ ಆಗಿದ್ದಾರೆ. ಜಾತಿ ಭೇದವಿಲ್ಲದೆ ಸರ್ವ ಜನಾಂಗಕ್ಕೂ ಶಿಕ್ಷಣ ನೀಡುವಲ್ಲಿ ಈ ಮಠ ಸಹಾಯ ಮಾಡಿದೆ.