ಸ್ವಾಮೀಜಿಗಳಿಂದ ದೌರ್ಜನ್ಯ ವಿಷಯವಾಗಿ ಮಹಿಳೆಯರಿಬ್ಬರ ಆಡಿಯೋ ವೈರಲ್ ! ಏನಿದೆ ಇದರಲ್ಲಿ

By Infoflick Correspondent

Updated:Saturday, September 3, 2022, 21:19[IST]

ಸ್ವಾಮೀಜಿಗಳಿಂದ ದೌರ್ಜನ್ಯ ವಿಷಯವಾಗಿ ಮಹಿಳೆಯರಿಬ್ಬರ ಆಡಿಯೋ ವೈರಲ್ ! ಏನಿದೆ ಇದರಲ್ಲಿ

ರಾಜ್ಯದ ಹಲವು ಮಠಗಳ ಸ್ವಾಮೀಜಿಗಳೂ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹೆಣ್ಣುಮಕ್ಕಳನ್ನು ಹಾಳು ಮಾಡಿದ್ದಾರೆ. ಬಹಳಷ್ಟು ಜನ ಕೆಟ್ಟವರೇ...' ಎಂದು ಮಹಿಳೆಯರಿಬ್ಬರು ಮಾತನಾಡಿಕೊಂಡ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ರಾಜ್ಯದ ಬೇರೆಬೇರೆ ಮಠಗಳು, ಪೀಠಗಳ ಹಾಗೂ ಸಮುದಾಯ ನಾಯಕತ್ವದಲ್ಲಿ ಗುರುತಿಸಿಕೊಂಡ ಸ್ವಾಮೀಜಿಗಳ ಹೆಸರನ್ನೂ ಈ ಮಹಿಳೆಯ ಹೆಸರಿಸಿದ್ದಾರೆ. ಈ ಆಡಿಯೊ ಮುದ್ರಿಕೆ ಎಲ್ಲಿಯದು ಎಂದು ಖಚಿತವಾಗಿಲ್ಲ. ಆದರೆ ಅವರಾಡಿದ ಮಾತುಗಳು ಹೀಗಿವೆ

ಈಗ ಈ ಸ್ವಾಮೀಜಿಯ ಘಟನೆ ಸುಳ್ಳು ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ, ಅವರ ಬಳಿ ಇದ್ದ ಹೆಣ್ಣುಮಕ್ಕಳಿಗೇ ಗೊತ್ತು ಅವರು ಎಂಥವರು ಎಂಬುದು' ಎಂದು ಮಹಿಳೆ ಆರೋಪಿಸಿದ್ದಾರೆ.

ನನಗೆ ಆಶ್ರಮಗಳಲ್ಲಿ 18 ವರ್ಷ ಅನುಭವವಿದೆ. ಕೆಲವು ಹೆಣ್ಣುಮಕ್ಕಳ ಅಕೌಂಟ್ ಗೆ ಪ್ರತಿತಿಂಗಳು ಹಣ ಹೋಗುತ್ತದೆ. ಕೌಟುಂಬಿಕವಾಗಿ ಹಿಂದುಳಿದ ಹೆಣ್ಣುಮಕ್ಕಳನ್ನು ಈ ರೀತಿಯಾಗಿ ಬಳಸಿಕೊಳ್ಳುತ್ತಾರೆ ಸ್ವಾಮಿಗಳು ಎಂದು ಮಹಿಳೆ ಮಾತನಾಡಿದ್ದಾಳೆ. 

'ಒಬ್ಬ ಸ್ವಾಮೀಜಿ ನನಗೇ ಆಫರ್‌ ಕೊಟ್ಟಿದ್ದರು. ಮಧುರೈನಲ್ಲಿ ನಮ್ಮ ಪೀಠದ ಐದು ಎಕರೆ ಜಮೀನಿ ಇದೆ. ನನ್ನೊಂದಿಗೆ ಚೆನ್ನಾಗಿ ಇರು. ಎಲ್ಲ ವ್ಯವಸ್ಥೆ ಮಾಡುತ್ತೇನೆ ಅಂದಿದ್ದರು. ಎಲ್ಲ ಹೊರಗೆ ಹಾಕಬಹುದು. ಆದರೆ ಸೇಫ್ಟಿ ಇಲ್ಲ...' ಎಂದೂ ಬೆಳಗಾವಿಯ ಮಹಿಳೆ ಆರೋಪಿಸಿದ ಧ್ವನಿ ಇದೆ.