ಟ್ರಾಫಿಕ್ ಪೋಲಿಸರಿಗೆ ಖಡಕ್ ಸೂಚನೆ !ವಾಹನ ಸವಾರರಿಗೆ ಮಹತ್ವದ ಹಾಗು ಸಂತಸದ ಸುದ್ದಿ
Updated:Tuesday, June 28, 2022, 11:11[IST]

ಇನ್ಮುಂದೆ ಬೇಕಾಬಿಟ್ಟಿ ವಾಹನಗಳನ್ನು ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸುವಂತಿಲ್ಲ. ಸಿಕ್ಕಸಿಕ್ಕಲ್ಲಿ ಬೈಕ್ ಸೈಡಿಗೆ ಹಾಕಿ,ಕಾರು ಸೈಡಿಗೆ ಹಾಕಿ ಎಂದು ಸವಾರರಿಗೆ ಟ್ರಾಫಿಕ್ ಪೊಲೀಸರು ಹೇಳುವಂತಿಲ್ಲ.
ಎಲ್ಲೆಂದರಲ್ಲಿ ವಾಹನ ತಡೆದು ತಪಾಸಣೆ ಮಾಡಲಾಗ್ತಿದೆ ಎಂದು ಸಾರ್ವಜನಿಕರು ಟ್ವೀಟ್ ಮೂಲಕ ದೂರಿದ್ದರು ಹಾಗಾಗಿ ಇನ್ಮುಂದೆ ತಪಾಸಣೆ ನೆಪದಲ್ಲಿ ರಸ್ತೆಯ ಎಲ್ಲೆಂದರಲ್ಲಿ ಸುಮ್ ಸುಮ್ನೆ ವಾಹನ ತಡೆದು ಪರಿಶೀಲನೆ ನಡೆಸುವಂತಿಲ್ಲ ಎಂದು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಡಿಜಿ & ಐಜಿಪಿ ಪ್ರವೀಣ್ ಸೂದ್ ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡುವವರು, ತ್ರಿಬ್ಬಲ್ ರೈಡಿಂಗ್, ಸಿಗ್ನಲ್ ಜಂಪ್ ಮಾಡುವುದು ಮೊದಲಾದ ಕಣ್ಣಿಗೆ ಕಾಣುವಂತಹ ಟ್ರಾಫಿಕ್ ನಿಮಗಳನ್ನು ಉಲ್ಲಂಘಿಸಿದ ವೇಳೆ ಅಂತಹ ವಾಹನ ಸವಾರರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ. ಆದರೆ ತಪಾಸಣೆ ಹೆಸರಲ್ಲಿ ರಸ್ತೆಯಲ್ಲಿ ಬರುವ ಎಲ್ಲ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸಲು ಇನ್ನು ಮುಂದೆ ಅವಕಾಶವಿರುವುದಿಲ್ಲ.