106 ದಾಟಿದೆ ಪೆಟ್ರೋಲ್ ಬೆಲೆ..! ಯಾಕೆ ನಮ್ಮ ಸರ್ಕಾರ ಪೆಟ್ರೋಲ್ ರೇಟ್ ಕಮ್ಮಿ ಮಾಡಕಾಗಲ್ವಾ..?

Updated: Friday, February 19, 2021, 11:37 [IST]

ಹೌದು ಕೆಲವು ದಿನಗಳ ಹಿಂದೆ ಇಡೀ ದೇಶದಲ್ಲೆಡೆ ಈ ಪೆಟ್ರೋಲ್ ದರ ಹೆಚ್ಚಾಗಿದ್ದು, ವಾಹನ ಓಡಿಸುವ ಮತ್ತು ಪೆಟ್ರೋಲ್ ಖರೀದಿ ಮಾಡುವ ಗ್ರಾಹಕರು ಹೆಚ್ಚಿನದಾಗಿ ಪರದಾಡುವಂತಾಗಿದೆ. ಮತ್ತು ಇತ್ತೀಚಿಗಷ್ಟೇ ನೂರರ ಗಡಿ ದಾಟಿದ ಪೆಟ್ರೋಲ್ ದರ ಇಂದು ಶೆಲ್ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ದರ 106 ರ ಗಡಿ ದಾಟಿದೆ ಎಂದು ತಿಳಿದುಬಂದಿದೆ.ಹೌದು ಅಷ್ಟಕ್ಕೂ ನಮ್ಮ ಸರ್ಕಾರ ಪೆಟ್ರೋಲ್ ರೇಟ್ ಕಮ್ಮಿ ಮಾಡೋಕಾಗಲ್ವಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಾ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಪೆಟ್ರೋಲ್ ರೇಟ್ ಇಷ್ಟು ಹೆಚ್ಚಿಗೆ ಮಾಡಿದ್ದಾರೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. 

ಮತ್ತು ಮೋದಿಯವರಿಗೂ ಕೂಡ ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಸಮಯದಲ್ಲಿ ಪೆಟ್ರೋಲ್ ರೇಟ್ ಇಷ್ಟು ಹೆಚ್ಚಿಗೆ ಆಗಿರಲಿಲ್ಲ, ಇದೀಗ ಬಿಜೆಪಿ ಸರ್ಕಾರದಲ್ಲಿ ಗ್ರಾಹಕರ ಮೇಲೆ ಪೆಟ್ರೋಲ್ ದರ ಹೆಚ್ಚಿಗೆ ಹಾಕಿ, ಹಣ ವಸೂಲಿ ಮಾಡುತ್ತಿದ್ದಾರೆ ಎನ್ನೊ ಮಾತುಗಳೂ ಕೇಳಿ ಬರುತ್ತಿವೆ. ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಸಾರ್ವಜನಿಕರು ಪ್ರಶ್ನೆ ಮಾಡಿದ್ದು, ಪೆಟ್ರೋಲ್ ದರ ಬಂಕ್ಗಳಲ್ಲಿ 40 ರೂಪಾಯಿಗೆ ದೊರಕುತ್ತದೆ. ಹಾಗಿದ್ದಲಿ ಯಾವ ಕಾರಣಕ್ಕಾಗಿ ₹60 ನಮ್ಮ ಮೇಲೆ ಟ್ಯಾಕ್ಸ್ ಹಾಕಿ ನೂರು ರೂಪಾಯಿಗೆ ದರವನ್ನ ತಂದು ನಿಲ್ಲಿಸಿದ್ದಿರ ಎಂದು ಪ್ರಶ್ನೆ ಮಾಡಿದ್ದಾರೆ. 

ಹೀಗೆ ಆದರೆ ನಾವು ಗಾಡಿ ಓಡಿಸುವುದು ಹೇಗೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇತ್ತೀಚಿಗಷ್ಟೇ ಮೇಘಾಲಯದಲ್ಲಿ ಪೆಟ್ರೋಲ್ ದರವನ್ನು ಕಡಿಮೆ ಮಾಡಿರುವ ಅಲ್ಲಿಯ ರಾಜ್ಯ ಸರ್ಕಾರ, ಮಹತ್ತರವಾದ ನಿರ್ಧಾರ ಕೈಗೊಂಡಿದೆ. ಆದರೆ ನಮ್ಮ ರಾಜ್ಯಗಳಲ್ಲಿ ಏಕೆ ಇದೇಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತು ನಾರ್ಮಲ್ ಪೆಟ್ರೋಲ್ ದರ 93 ರೂಪಾಯಿ ಹಾಗೂ 96 ರೂಪಾಯಿಗೆ ಲಭ್ಯವಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ, ಮತ್ತು ಈ ಪೆಟ್ರೋಲ್ ದರ ಹೆಚ್ಚಿಗೆ ವಿಷಯವಾಗಿ ಸರ್ಕಾರ ಯಾವ ಬದಲಾವಣೆ ತರಬೇಕು ಎಂಬುದಾಗಿಯೂ ಕೂಡ ನಿಮ್ಮ ಅಭಿಪ್ರಾಯವನ್ನು ಹೇಳಿ, ಧನ್ಯವಾದಗಳು...