ಶೀರ್ಘದಲ್ಲೇ ದೇಶದಲ್ಲಿ ಪೆಟ್ರೋಲ್ ನಿಷೇಧ! ಪೆಟ್ರೋಲ್ ಬದಲು ಇದೇ ಪರ್ಯಾಯ ವ್ಯವಸ್ಥೆ
Updated:Saturday, July 23, 2022, 12:23[IST]

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ನಡುವೆ ಕೇಂದ್ರ ಸಾರಿಗೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಶಾಕಿಂಗ್ ಹೇಳಿಕೆ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಲಿದೆ ಎಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ನಿಷೇಧಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಾಕಿಂಗ್ ಹೇಳಿಕೆ ಹೇಳಿದ್ದಾರೆ.
ಇನ್ನು ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಲಿದೆ ಎಂದ ಗಡ್ಕರಿ, ಎಥೆನಾಲ್ ಮೇಲೆ ತೆಗೆದುಕೊಂಡ ನಿರ್ಧಾರದಿಂದ ದೇಶಕ್ಕೆ ವಾರ್ಷಿಕ 20,000 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಹೇಳಿದರು. ಇನ್ನು ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಹಸಿರು ಜಲಜನಕ, ಎಥೆನಾಲ್ ಮತ್ತು ಸಿಎನ್ಜಿಯಿಂದ ಓಡುವ ದಿನ ದೂರವಿಲ್ಲ ಎಂದರು.
ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ಜೈವಿಕ ಎಥೆನಾಲ್ಗಳನ್ನು ತಯಾರಿಸಲಾಗುತ್ತಿದೆ. ಇದನ್ನು ವಾಹನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಆಳವಾದ ಬಾವಿಯ ನೀರಿನಿಂದ ಹಸಿರು ಹೈಡ್ರೋಜನ್ ತಯಾರಿಸಬಹುದು. ಇದನ್ನು ಕೆಜಿಗೆ 70 ರೂಪಾಯಿಗಳಂತೆ ಮಾರಾಟ ಕೂಡ ಮಾಡಬಹುದು. ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಖಾಲಿಯಾಗಲಿದೆ. ಹೀಗಾಗಿ ದೇಶದಲ್ಲಿ ನಾವು ಪಳೆಯುಳಿಕೆ ಇಂಧನಗಳನ್ನು ನಿಷೇಧ ಮಾಡುವ ದಿನ ಹೆಚ್ಚು ದೂರವಿಲ್ಲ ಎಂದು ಹೇಳಿದ್ದಾರೆ.
ಬಾವಿ ನೀರಿನಿಂದ ಹಸಿರು ಜಲಜನಕವನ್ನ ತಯಾರಿಸಬಹುದು. ಇನ್ನಿದರ ಬೆಲೆ ಕೆಜಿಗೆ 70 ರೂ. ರೈತರು ಇದರತ್ತಾ ಗಮನ ಹರಿಸಬೇಕು. ಹೊಲದಲ್ಲಿ ಗೋಧಿ, ಅಕ್ಕಿ, ಜೋಳ ಉತ್ಪಾದನೆಯಿಂದ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ರೈತರು ಅನ್ನದಾತರಾಗುವ ಬದಲು ಶಕ್ತಿ ದಾನಿಗಳಾಗಬೇಕು ಎಂದರು.