ರೇವ್ ಪಾರ್ಟಿಯಲ್ಲಿದ್ದ ಯುವಕ ಯುವತಿಯರಿಗೆ ಶಾಕ್ ಕೊಟ್ಟ ಪೊಲೀಸರು..! ವಿಡಿಯೋ ವೈರಲ್

Updated: Sunday, September 19, 2021, 17:20 [IST]

ರೇವ್ ಪಾರ್ಟಿಯಲ್ಲಿದ್ದ ಯುವಕ ಯುವತಿಯರಿಗೆ ಶಾಕ್ ಕೊಟ್ಟ ಪೊಲೀಸರು..! ವಿಡಿಯೋ ವೈರಲ್

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ರಾಜ್ಯದಲ್ಲಿ ಮತ್ತು ದೇಶದಲ್ಲಿ ಹಲವು ಕಡೆ ರಾತ್ರಿಯ ವೇಳೆ ರೇವ್ ಪಾರ್ಟಿ  ಅಲ್ಲಲ್ಲಿ ನಡೆಯುತ್ತಿವೆ. ಇದಕ್ಕೆ ಸಂಬಂಧಿತವಾಗಿ ನಿನ್ನೆ ಬೆಂಗಳೂರಿನ ಆನೇಕಲ್ನ ಖಾಸಗಿ ರೆಸಾರ್ಟ್ ಒಂದರಲ್ಲಿ ರೇವ್ ಪಾರ್ಟಿ ಮಾಡುತ್ತಿರುವುದಾಗಿ ಕಂಡುಬಂದಿದೆ. ಹೌದು ಪೊಲೀಸರು ಆನೇಕಲ್ ಖಾಸಗಿ ರೆಸಾರ್ಟ್ ಮೇಲೆ ರೈಡ್ ಮಾಡಿ ಇದ್ದಕ್ಕಿದ್ದಂತೆ ರೇವ್ ಪಾರ್ಟಿಯಲ್ಲಿ ಮಗ್ನರಾಗಿದ್ದ ಒಟ್ಟು 28 ಜನರನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದು ಬಂದಿದೆ.

ಪೊಲೀಸರು ಈಗ ಅಲ್ಲಿ ಸಿಕ್ಕ ಒಟ್ಟು ಆ 28 ಜನರ ವಿಳಾಸವನ್ನು ಕೆದುಕುತ್ತಿದ್ದಾರೆ. ಜೊತೆಗೆ ಇವರು ಯಾವ ರಾಜ್ಯದವರು, ಮತ್ತು ಬೆಂಗಳೂರಿನ ಈ ರೆಸಾರ್ಟ್ ನಲ್ಲಿ ಯಾರ ಮುಖಾಂತರ ಪಾರ್ಟಿ ಮಾಡುತ್ತಿದ್ದರು.? ಮತ್ತು ಪಾರ್ಟಿಯಲ್ಲಿ ಏನೆಲ್ಲಾ ಸೇವನೆ ಮಾಡಿದ್ದರು. ಯಾವ ರೀತಿ ವಹಿವಾಟು ನಡೆಸಿದ್ದರು ಎಂಬುದಾಗಿ ಇದೀಗ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗೇನೇ ರೇವ್ ಪಾರ್ಟಿ ನಡೆಯುತ್ತಿದ್ದ ರೆಸಾರ್ಟ್ ಆಯೋಜಕನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೇಳಿ ಬಂದಿದೆ.

ಹೌದು ಇಲ್ಲಿಗೆ ಬಂದವರು ಯಾವ ರಾಜ್ಯದವರು.? ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದವರಾ.?  ಅಥವಾ ಯಾವುದಾದರೂ ಬೇರೆ ರೀತಿಯ ವಹಿವಾಟು ನಡೆಸುತ್ತಿದ್ದಾರಾ.? ಹಾಗೆ ಇವರು ಪೆಡ್ಲರ್ ಇರಬಹುದೆ ಎಂದು ಶಂಕಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೌದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕಗಳನ್ನು ಕಮೆಂಟ್ ಮಾಡಿ ತಿಳಿಸಿ...(ವಿಡಿಯೋ ಕೃಪೆ : ಟಿವಿ ೯ ಕನ್ನಡ   )