ಅಸಲಿಗೆ ಮೇಘನಾ ಗಂಡ ಶಂಕ್ರಣ್ಣನಿಗೆ ಏನಾಗಿತ್ತು..? ಆಡಿಯೋ ಕಾಲ್ ಮೂಲಕ ರೋಚಕ ಸುದ್ದಿ ಬಯಲು

By Infoflick Correspondent

Updated:Tuesday, March 29, 2022, 20:53[IST]

ಅಸಲಿಗೆ ಮೇಘನಾ ಗಂಡ ಶಂಕ್ರಣ್ಣನಿಗೆ ಏನಾಗಿತ್ತು..? ಆಡಿಯೋ ಕಾಲ್ ಮೂಲಕ ರೋಚಕ ಸುದ್ದಿ ಬಯಲು

ಇಂದು ಬೆಳಿಗ್ಗೆ ತುಮಕೂರಿನ ಫೇಮಸ್ ಜೋಡಿಯಾದ ಮೇಘನಾ ಹಾಗೂ ಶಂಕ್ರಣ್ಣ ಅವರು ಕಳೆದ ನಾಲ್ಕು ತಿಂಗಳ ಹಿಂದೆ ಸರಳವಾಗಿ ವಿವಾಹವಾಗಿದ್ದರು. ಹೌದು ಈ ಜೋಡಿ ನೋಡಿ ಇಡೀ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದು, ಇನ್ನೊಂದು ಕಡೆ ಖುಷಿಯನ್ನು ಕೂಡ ವ್ಯಕ್ತಪಡಿಸಿದ್ದರು. ಹಾಗೆ 25 ವರ್ಷದ ಮೇಘನಾ 45 ವರ್ಷದ ಶಂಕರಣ್ಣ ಅವರ ಬಳಿ ಪ್ರೇಮನಿವೇದನೆ ಹೇಳಿಯೇ ಮದುವೆಯಾಗಿದ್ದರು ಎಂದು ನಮಗೂ ತಿಳಿದುಬಂದಿತ್ತು. ಈ ಜೋಡಿ ಆರಂಭದಲ್ಲಿ ತುಂಬಾ ಚೆನ್ನಾಗಿತ್ತು. ಹಾಗೆ ಎಲ್ಲಿ ನೋಡಿದರೂ ಅವರ ಮದುವೆ ಫೋಟೋ ಹೆಚ್ಚು ವೈರಲ್ ಆಗಿತ್ತು.

ಕೆಲವರು ಇವರ ಮದುವೆ ನೋಡಿ ಖುಷಿಪಟ್ಟರು, ಇನ್ನು ಕೆಲವರು ದುಡ್ಡು ಇದೆ ಅದಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುವ ಟೀಕೆ ಮಾತುಗಳನ್ನು ಕೂಡ ಆಡಿದ್ದರು. ಆದರೆ ಇಂದು ಅದೇ ಮೇಘನಾ ಅವರ ಪತಿ 45 ವರ್ಷದ ಶಂಕರಣ್ಣ ಅವರು ಅವರ ಮನೆ ಹೊಲದ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವನ್ನಪ್ಪಿದ್ದಾರೆ. ಶಂಕ್ರಣ್ಣ ಅವರ ಸಾವಿಗೆ ಅಸಲಿಗೆ ಕಾರಣವಾದರೂ ಏನು ಎಂದು ಇನ್ನು ಯಾವ ಮಾಹಿತಿ ಹೊರಬಿದ್ದಿಲ್ಲ. ಶಂಕರಣ್ಣ ಅವರನ್ನು ಕಳೆದುಕೊಂಡು ಅವರ ತಾಯಿ ಕಣ್ಣೀರು ಇಡುತ್ತಿದ್ದು, ಪತ್ನಿ ಮೇಘನಾ ಅವರು ಕೂಡ ಗಂಡನನ್ನು ಕಳೆದುಕೊಂಡ ನೋವಿನಲ್ಲಿ ಮಾಧ್ಯಮದ ಎದುರು ಮಾತನಾಡಿದ್ದಾರೆ.   

ಅಸಲಿಗೆ ಶಂಕರಣ್ಣ ಅವರು ಆತ್ಮಹತ್ಯೆ ಮಾಡಿಕೊಂಡರಾ. ಅಥವಾ ಬೇರೆ ಏನಾದರೂ ನಡೆದಿತ್ತ ಏನು ಎಲ್ಲವನ್ನು ಈಗ ಪೊಲೀಸರು ಮಾಹಿತಿ ಕಲೆಹಾಕುತ್ತಾ ತನಿಖೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಇದರ ನಡುವೆ ಇಲ್ಲೊಂದು ಆಡಿಯೋ ಕಾಲ್ ಬಾರಿ ವೈರಲ್ ಆಗುತ್ತಿದೆ. ಈ ಆಡಿಯೋ ಕಾಲ್ ನಲ್ಲಿ ಮೇಘನಾ ಬಗ್ಗೆ ಶಂಕರಣ್ಣ ಅವರ ಆಪ್ತ ಎಂದು ಹೇಳಲಾದ ವ್ಯಕ್ತಿ ಹೇಳಿದ್ದೇನು. ? ಈ ವಿಡಿಯೋ ನೋಡಿ. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ...( video credit : kannada light )