ಶೇನ್ ವಾರ್ನ್ ಕೋಣೆಯಲ್ಲಿ ರಕ್ತ ಪತ್ತೆ! ಸಾಯುವ ಕೊನೆಕ್ಷಣ ಆಗಿದ್ದಾದರೂ ಏನು ?
Updated:Monday, March 7, 2022, 21:36[IST]

ಹಠಾತ್ ನಿಧನರಾದ ಲೆಗ್ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ಕೋಣೆಯ ನೆಲದಲ್ಲಿ ಮತ್ತು ಅವರು ಬಳಸುತ್ತಿದ್ದ ಸ್ನಾನದ ಟವೆಲ್ನಲ್ಲಿ ಸಾಕಷ್ಟು ಪ್ರಮಾಣದ 'ರಕ್ತದ ಕಣಗಳು' ಪತ್ತೆಯಾಗಿರುವುದಾಗಿ ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ವಾರ್ನ್ ದೇಹದ ತೂಕ ಇಳಿಸಲು 14 ದಿನಗಳಿಂದ ವಾರ್ನ್ ಕಠಿಣ ಲಿಕ್ವಿಡ್ ಡಯೆಟ್ ಆರಂಭಿಸಿದ್ದರು ಮಾಡುತ್ತಿದ್ದರು. ನಿಧನದ 2 ದಿನ ಮೊದಲು ಡಯೆಟ್ ನಿಲ್ಲಿಸಿದ್ದರು’ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಫೀಟ್ ಆಗಿ ಇದ್ದ ವ್ಯಕ್ತಿ ಸಾವನ್ನಪ್ಪಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಬೆಳಿಗ್ಗೆ ಟ್ವೀಟ್ ಮಾಡಿದ ಶೇನ್ ಸಂಜೆ ಇಲ್ಲವಾಗಿರುವುದನ್ನೇ ಅರಗಿಸಿಕೊಳ್ಳದ ಅಭಿಮಾನಿಗಳಿಗೆ ಶೇನ್ ವಾರ್ನ್ ಅವರ ಕೋಹ್ ಸಾಮಯಿ ದ್ವೀಪದಲ್ಲಿರುವ ವಿಲ್ಲಾದಲ್ಲಿ ಪರಿಶೀಲನೆ ವೇಳೆ ರಕ್ತದ ಕಲೆಗಳು ಕಂಡುಬಂದಿರುವು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕುತೂಹಲ ಹೆಚ್ಚಿಸಿದೆ.
ಆದರೆ ಈಗ ಪೋಲಿಸರು ಎಲ್ಲ ಅನುಮಾನಗಳಿಗೆ , ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ವಾರ್ನ್ ಸಾವನ್ನಪ್ಪಿದ್ದ ವಿಲ್ಲಾವನ್ನು ಪರಿಶೀಲನೆ ನಡೆಸಿರುವ ಪೋಲಿಸರು ಅವರ ಕೊಠಡಿಯ ನೆಲ ಮತ್ತು ಅವರು ಬಳಸುತ್ತಿದ್ದ ಸ್ನಾನದ ಟವೆಲ್ಗಳಲ್ಲಿ ಕೋಣೆಯಲ್ಲಿ ದೊಡ್ಡ ಪ್ರಮಾಣದ ರಕ್ತ ಪತ್ತೆಯಾಗಿದೆ. ರಕ್ತದ ಕಲೆಗಳನ್ನು ಪೋಲಿಸರು ಗಮನಿಸಿ, ಪರೀಕ್ಷೆ ನಡೆಸಿ ವಾರ್ನ್ ಕೆಮ್ಮಿದಾಗ ರಕ್ತ ಬಂದಿದೆ ಹೃದಯಾಘಾತ ವೇಳೆ ತೀವ್ರ ಕೆಮ್ಮಿನಿಂದಾಗಿ ರಕ್ತಸ್ರಾವವಾಗಿದೆ’ ಎಂದು ಪೋಲಿಸರು ತಿಳಿಸಿದ್ದಾರೆ.