ದಿವಂಗತ ಡಿಕೆ ರವಿ ಹಾಗೂ ರೋಹಿಣಿ ಸಿಂಧೂರಿ ಸಿನಿಮಾ ಬಿಡುಗಡೆಗೆ ಮುಂದಾದ ಶಾಸಕ: ಏನಿದು ಕಥೆ..?

Updated: Friday, June 11, 2021, 13:41 [IST]

ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾರಾ ಮಹೇಶ್ ಇಬ್ಬರ ನಡುವಿನ ಗುದ್ದಾಟ ಕಳೆದ ಏಳು ತಿಂಗಳಿಂದಲೂ ನಡೆಯುತ್ತಲೇ ಇದೆ. ಇದೀಗ ಇವರ ಕಿತ್ತಾಟ ಹೆಚ್ಚಾಗಿದ್ದು, ಡಿಕೆ ರವಿ ಕುರಿತು  ಸಾರಾ ಮಹೇಶ್ ಅವರು ನೀಡಿರುವ ಹೇಳಿಕೆ ವೈರಲ್ ಆಗಿದೆ. 
ಮೈಸೂರಿಗೆ ಬಂದ ಏಳು ತಿಂಗಳಲ್ಲೇ ರೋಹಿಣಿ ಸಿಂಧೂರಿ ಅವರು ಜನ ಮನ ಗೆದ್ದಿದ್ದಾರೆ. ಅವರು ಮತ್ತೆ ಮೈಸೂರು ಜಿಲ್ಲಾಧಿಕಾರಿಯಾಗಿ ಬರಬೇಕೆಂಬ ಕೂಗು ಎಲ್ಲೆಲ್ಲೂ ಕೇಳಿ ಬರುತ್ತಿದೆ. ಆದರೆ, ಜೆಡಿಎಸ್ ಶಾಸಕ ಸಾರಾ ಮಹೇಶ್ ಮಾತ್ರ ರೋಹಿಣಿ ಸಿಂಧೂರಿ ಮೈಸೂರಿಗೆ ಬಂದ ದಿನದಿಂದಲೂ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.  

ಇದೀಗ ಭಾರತ ಸಿಂಧೂರಿ ಎಂಬ ಹೆಸರಿನಲ್ಲಿ ರೋಹಿಣಿ ಸಿಂಧೂರಿ ಜೀವನಾಧಾರಿತ ಸಿನಿಮಾ ನಿರ್ಮಿಸಲು ಕೆಲವರು ಮುಂದಾಗಿದ್ದಾರೆ ಈ  ವಿಚಾರವಾಗಿ ವ್ಯಂಗ್ಯವಾಡಿರುವ ಶಾಸಕ ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿ ಕತೆಯಾಧಾರಿಯ ಸಿನಿಮಾ ಬಿಡುಗಡೆಯಾದ ಮೇಲೆ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಬಡ ರೈತನ ಮಗ ಐಎಎಸ್ ಅಧಿಕಾರಿಯಾಗಿ ಆಂಧ್ರದ ಅಧಿಕಾರಿಯ ಸಹವಾಸ ಮಾಡಿ ಏನೆಲ್ಲ ಆದ ಎಂಬುದನ್ನು ಸಿಬಿಐ ವರದಿ ಆಧರಿಸಿ ನಾನೇ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು 2014 ರ ಸೆಪ್ಟೆಂಬರ್ 15ರಿಂದ 2015 ರ ಮಾರ್ಚ್ 15 ರ ತನಕ ಡಿಕೆ ರವಿ ಹಾಗೂ ರೋಹಿಣಿ ಸಿಂಧೂರಿ ಸಂಪರ್ಕದಲ್ಲಿದ್ದರು. ರೋಹಿಣಿ ಸಿಂಧೂರಿ ಡಿಕೆ ರವಿ ಗೆ ಒಂದು ವರ್ಷ ಅವಧೀಯಲ್ಲಿ 239 ಸಲ ಕರೆ ಮಾಡಿದ್ದಾರೆ. ಇನ್ನು ಡಿಕೆ ರವಿ ಡಿಕೆ ರವಿ 108 ಕರೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. 

ಇನ್ನು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈಗ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ಡಾ.ಬಗಾದಿ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.