ಬ್ರೇಕಿಂಗ್ ನ್ಯೂಸ್; ಸಚಿನ್ ತೆಂಡೂಲ್ಕರ್ ಆರೋಗ್ಯದಲ್ಲಿ ಏರುಪೇರು..! ಕ್ವಾರೆಂಟೈನ್ ಅಲ್ಲಿ ಆಗಿದ್ದೇನು..?

Updated: Friday, April 2, 2021, 11:39 [IST]

ಹೌದು ಸ್ನೇಹಿತರೆ ಮಾಧ್ಯಮ ಮೂಲಕ ಈಗ ಬಂದಿರುವ ಮಾಹಿತಿ ಪ್ರಕಾರ, ಭಾರತದ ಹಿರಿಯ ಆಟಗಾರ, ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಅವರ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ. ಇತ್ತೀಚಿಗೆ ಸಚಿನ್ ಅವರಿಗೆ ಕೊರೊನ ಸೋಂಕು ತಗುಲಿತ್ತು ಎಂದು ಮಾಧ್ಯಮ ಮೂಲಕ ತಿಳಿದುಬಂದಿತ್ತು. ಬಳಿಕ ವೈದ್ಯಕೀಯ ಸಲಹೆ ಮೇರೆಗೆ ಸಚಿನ್ ತೆಂಡೂಲ್ಕರ್ ಅವರನ್ನ ಕ್ವಾರೆಂಟೈನ್ ಮಾಡಲಾಗಿತ್ತು. 

ಇದೀಗ ಕ್ವಾರೆಂಟೈನ್ ಅಲ್ಲಿ ಇದ್ದ ವೇಳೆಯೇ ಇದ್ದಕಿದ್ದಂತೆ ಸಚಿನ್ ತೆಂಡೂಲ್ಕರ್ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ಕೇಳಿ ಬಂದಿದೆ. ಬಳಿಕ ಸಚಿನ್ ಅವರನ್ನ ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆಯಂತೆ. ಚಿಕಿತ್ಸೆಯನ್ನ ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಈಗ ಮಾಧ್ಯಮ ಒಂದು ವರದಿ ಮಾಡಿದೆ...