ಮಗಳ ಆರೋಪಕ್ಕೆ ಕಣ್ಣೀರಿಟ್ಟ ಸತ್ಯಜಿತ್ ಹೇಳಿದ ಸತ್ಯಾಂಶವೇನು ವಿಡಿಯೋ ನೋಡಿ

Updated: Saturday, February 13, 2021, 09:16 [IST]

ಸತ್ಯ ಜಿತ್ ಮಗಳು ಅವಳ ತಂದೆಯ ವಿರುದ್ಧವೇ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾಳೆ ಅದು ಏನಂದ್ರೆ ನಮ್ಮ ತಂದೆ ನನಗೆ ಮಾನಸಿಕ ಕಿರುಕಳ ಕೊಡುತ್ತಿದ್ದಾರೆ .ಮತ್ತು ನನಗೆ ಅನೇಕ ಜನರಿಂದ ಜೀವ ಬೆದರಿಕೆ ಬಂದಿದೆ ಇದು ನನ್ನ ತಂದೆಯೇ ಮಾಡಿಸಿರ ಬಹುದು ಎಂಬ ಅನುಮಾನ ಇದೆ .ಎಂದು. ಅದಕ್ಕೆ ಕಣ್ಣೀರಿಟ್ಟ ಸತ್ಯಜಿತ್ ಅವಳು ಹೇಳುವುದು ಎಲ್ಲ ಸುಳ್ಳು  ಯಾರಾದರೂ ತಂದೆಯೇ ತನ್ನ ಮಗಳಿಗೆ ಈ ರೀತಿ  ಮಾಡುತ್ತಾರೆ ನೀವೇ ಹೇಳಿ ಎಂದು ಮಾಧ್ಯಮ ಮುಂದೆ ಕಣ್ಣೀರು ಇಟ್ಟಿದಾರೆ .

ನಾನು ಓದಿಸಿ ಬೆಳೆಸಿದ ಮಗಳೇ ಈಗ ನಮ್ಮ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಆಕೆಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ವಂತ ಮನೆ ಮಾರಿ ಈಗ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ' ಎಂದು ನಮ್ಮ ಕನ್ನಡ ಸಿನಿಮಾ ರಂಗದ ಹಿರಿಯ ನಟ ಸತ್ಯಜಿತ್​ ಅವರು ಮಾಧ್ಯಮ ಒಂದರ ಎದುರು ಹೇಳಿ ಕಣ್ಣೀರಿಟ್ಟಿದ್ದಾರಂತೆ..   

Advertisement

'ಮಗಳು ಸ್ವಲೇಹಾಗಾಗಿ ನಾನು ನನ್ನ ಪತ್ನಿ ಮನೆಯನ್ನ ಮಾರಿ ಅಮೆರಿಕಗೆ ಕಳಿಸಿ, ಓದಿಸಿ ಪೈಲಟ್ ಮಾಡಿದ್ದೀವಿ. ನಮ್ಮ ಮಗಳು ನಮ್ಮ ಜೊತೆ ಇದ್ದಾಗ ಚೆನ್ನಾಗಿ ಇದ್ದಳು. ಒಂದು ದಿನ ಬಂದು ಆರ್ಕಿಟೆಕ್ಚರ್​ ಒಬ್ಬನನ್ನು ಪ್ರೀತಿ  ಮಾಡಿದ್ದೇನೆ ಮದುವೆಯಾಗುತ್ತೇನೆ ಎಂದಳು. ನಾನು ಕೂಡ ಸಣ್ಣ ಮಕ್ಕಳು ಹೋದ್ರೆ ಹೋಗ್ಲಿ ಎಂದು ಸುಮ್ಮನೆ ಆದೇ. ಮದುವೆ ನಂತರ ನನ್ನ ಮಗಳು ಹೆಚ್ಚಿನದಾಗಿ ಬದಲಾಗಿದ್ದಾಳೆ, ಎಂದು ನಟ ಸತ್ಯಜಿತ್​ ಅವರು ಅತ್ತ ದೂರಿನಲ್ಲಿ ಹೇಳಿದ್ದಾರೆ..'ಕಾರಿನ ಸಾಲ, ಮನೆ ಸಾಲ, ಕ್ರೆಡಿಟ್​ ಕಾರ್ಡ್​, ಹಾಗೂ ಪರ್ಸನಲ್ ಲೋನ್​, ಎಲ್ಲವೂ ಮಗಳ ಹೆಸರಿನಲ್ಲಿದೆ. ನನ್ನ ಮಗಳು ಸ್ವಲೇಹಾ ಹೆಸರಿನಲ್ಲಿ, ಆಕೆಯ ಪತಿ ಲೋನ್ ಸಹ ತೆಗೆದುಕೊಂಡಿದ್ದಾನೆ. ಹಾಗಾಗಿ ನಮ್ಮ  ಮಗಳಿಗಾಗಿ ನಾವು ಎಲ್ಲವನ್ನ ಕಳೆದುಕೊಂಡಿದ್ದೇವೆ. ಇದ್ದ ಸ್ವಂತ ಮನೆಯನ್ನ ಮಾರಿ, ಇದೀಗ ಬಾಡಿಗೆ ಮನೆಯಲ್ಲಿ ಇದ್ದೇವೆ.   

Advertisement

ಮನೆ ಬಾಡಿಗೆ ಆದ್ರೂ ಕೊಡು ಎಂದು ನಾವು ಮನವಿ ಮಾಡಿದ್ವಿ. ಆದರೆ ನಮ್ಮ ಪುತ್ರಿ ಯಾವುದಕ್ಕೂ  ಸ್ಪಂದಿಸುತ್ತಿಲ್ಲ' ಎಂದು ಹಿರಿಯ ನಟ ಸತ್ಯಜಿತ್ ಅವರು ಹೇಳಿದ್ದಾರೆ.ಆದ್ರೆ ಈ ತಂದೆಯ ಮಾತಿಗೆ ಸ್ವಲೇಹಾ ಹೇಳೋದೆ ಬೇರೆ...ತಂದೆ ಮಾಡಿದ ಆರೋಪಕ್ಕೆ ಮಗಳು ಸ್ವಲೇಹಾ ಕೂಡ ಉತ್ತರಿಸಿದ್ದಾರೆ. 'ನನ್ನ ಓದಿಗೆ ತಂದೆ ಯಾವುದೇ ಹಣ ನೀಡಿಲ್ಲ. ನನ್ನ ಸ್ವಂತ ಹಣದಿಂದ ಓದಿಕೊಂಡಿದ್ದೇನೆ. ನನ್ನ ಗಂಡ ನಮ್ಮ ತಂದೆಗೆ ಯಾವುದೇ ಮಾಟ, ಮಂತ್ರ ಮಾಡಿಲ್ಲ' ಎಂದು ಹೇಳಿದ್ದಾರೆ ಎನ್ನಲಾಗಿದೆ..

ಈ ಮಾತಿಗೆ ಗರಂ ಆದ ನಟ ಸತ್ಯಜಿತ್​ ಅವರು, 'ನನ್ನ ಮಗಳು ಸ್ವಲೇಹಾ ಹೇಳುವುದೆಲ್ಲಾ ಸುಳ್ಳು, ನಾನು 40 ಲಕ್ಷ ರೂ. ಲೋನ್ ಕಟ್ಟಿದ್ದೇನೆ. ನನಗೆ ನನ್ನ ಮಗಳಿಂದ ಯಾವ ವಿಚಾರವೂ ಬೇಕಿಲ್ಲ. ತಿಂಗಳಿಗೆ ಒಂದು ಲಕ್ಷ ಹಣ ಕೊಟ್ಟಿರುವುದಾಗಿ ಅವಳು ಹೇಳುತ್ತಿದ್ದಾಳೆ. ಆದ್ರೆ ದುಡ್ಡು ಕೊಟ್ಟಿರುವುದಕ್ಕೆ ದಾಖಲೆಗಳಾದ್ರೂ ಇರಬೇಕಲ್ಲವೆ'  ಎಂದು ಆಕ್ರೋಶ ಹೊರ ಹಾಕಿದ್ದಾರೆ...