ಸರ್ಕಾರಿ ಬಸ್ಸಿನಲ್ಲಿ ಬಿಯರ್ ಬಾಟಲಿ ಎತ್ತಿದ ಶಾಲಾ ಬಾಲಕ ಬಾಲಕಿಯರು..! ವಿಡಿಯೋ ವೈರಲ್

By Infoflick Correspondent

Updated:Saturday, March 26, 2022, 12:53[IST]

ಸರ್ಕಾರಿ ಬಸ್ಸಿನಲ್ಲಿ ಬಿಯರ್ ಬಾಟಲಿ ಎತ್ತಿದ ಶಾಲಾ ಬಾಲಕ ಬಾಲಕಿಯರು..! ವಿಡಿಯೋ ವೈರಲ್

ಶಾಲಾ ವಿದ್ಯಾರ್ಥಿಗಳ ಗುಂಪೊಂದು ಬಸ್ಸಿನಲ್ಲಿ ಬಿಯರ್ ಕುಡಿಯುತ್ತಿರುವ ಬಾಲಕ ಬಾಲಕಿಯರ ವೀಡಿಯೋ ಇದೀಗ ಬಾರಿ ವೈರಲ್ ಆಗುತ್ತಿದ್ದು ಈ ಘಟನೆ ಕುರಿತು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಿದವರಾಗಿದ್ದು, ಇವರು ತಿರುಕುಳಕುಂಡ್ರಂನಿಂದ ತಾಚೂರಿಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೌದು ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳು ಸರ್ಕಾರಿ ಬಸ್ಸಿನಲ್ಲಿಯೇ ಬಿಯರ್ ಸೇವಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅತ್ತ ತಮಿಳುನಾಡು ಶಿಕ್ಷಣ ಇಲಾಖೆಯು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದು, ಈ ವಿದ್ಯಾರ್ಥಿಗಳು ರಾಜ್ಯದ ವಿದ್ಯಾರ್ಥಿಗಳು ಎಂದು ಕಂಡುಬಂದ ನಂತರ, ಹಾಗೆ ಈ ತನಿಖೆಯಲ್ಲಿ ವಿದ್ಯಾರ್ಥಿಗಳು ಚೆಂಗಲ್ಪಟ್ಟುವಿನ ಸರ್ಕಾರಿ ಶಾಲೆಗೆ ಸೇರಿದವರು ಎಂದು ಕಂಡುಬಂದಿದೆ. ಈ ವಿಷಯವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆಯಂತೆ.ಶಾಲೆಯ ಹೊರಗೆ ಈ ಘಟನೆ ನಡೆದಿದ್ದು, ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. 

ಅವರು ವರದಿ ನೀಡಿದ ನಂತರ ನಾವು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಚೆಂಗಲ್ಪಟ್ಟು ಜಿಲ್ಲಾ ಶಿಕ್ಷಣಾಧಿಕಾರಿಯಾದ ರೋಸ್ ನಿರ್ಮಲ ಅವ್ರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಘಟನೆ ಮಂಗಳವಾರ ನಡೆದಿದೆ ಎಂದೂ ಹೇಳಿದ್ದಾರೆ. ಈ ವಿಡೀಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ನೀವೂ ಸಹ ಒಮ್ಮೆ ಈ ಶಾಲಾ ವಿದ್ಯಾರ್ಥಿಗಳ ಬಿಯರ್ ಸೇವಿಸುವ ವಿಡಿಯೋ ನೋಡಿ. ಇದು ಬಸ್ಸಿನಲ್ಲಿ ಆಗಿರುವುದಕ್ಕೆ ಘಟನೆ ಸೀರಿಯಸ್ ಆಗಿಲ್ಲ ಜೊತೆಗೆ ಶಾಲಾ ಮಕ್ಕಳು ಈ ರೀತಿ ತಪ್ಪು ದಾರಿ ಹಿಡಿದರೆ ಹೇಗೆ ಎಂಬುದು ಸೀರಿಯಸ್ ಆಗಿದೆ. ಈ ವಿದ್ಯಾರ್ಥಿಗಳು ಮಾಡಿರೋದು ಸರಿಯಾ ತಪ್ಪಾ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು..