ಪತ್ನಿಯ ಕಾಟ ತಾಳಲಾರದೆ ನೇಣಿಗೆ ಶರಣಾದರೆ ಶಂಕರಪ್ಪ ನಿಜವಾದ ಕಾರಣ ಇಲ್ಲಿದೆ ನೋಡಿ
Updated:Tuesday, March 29, 2022, 12:00[IST]

ಪ್ರೀತಿ ಕುರುಡು ಎನ್ನುತ್ತಾರೆ. ಪ್ರೀತಿಗೆ ಜಾತಿ, ವಯಸ್ಸು ಯಾವ ಹಂಗೂ ಇಲ್ಲ ಮನಸ್ಸೊಂದಿದ್ದರೆ ಸಾಕು ಎಂದು ಹೇಳುವುದನ್ನ ನೀವೂ ಕೇಳಿರಬಹುದು ಹಾಗೆ ಎಂದುಕೊಂಡು 25 ವರ್ಷದ ಯುವತಿ ಮನೆಬಿಟ್ಟು 45 ವರ್ಷದ ತನ್ನ ಪ್ರೇಮಿಯ ಹತ್ತಿರ ಓಡೊಡಿ ಬರುತ್ತಾಳೆ. ಇವರಿಬ್ಬರ ಮದುವೆಯೂ ಸರಳವಾಗಿ ಜರುಗುತ್ತದೆ ಆದರೆ ನಂತರ ದುರಂತ ಅಂತ್ಯ ಕಾಣುತ್ತದೆ. ಕಾರಣ ದಾಂಪತ್ಯದ ಜಗಳವಲ್ಲ, ಹೆಣ್ಣಿನ ಮನೆಯಿಂದ ತೊಂದರೆಯೂ ಅಲ್ಲ! ಏನು ಗೊತ್ತೆ? ಇಲ್ಲಿದೆ ಓದಿ;
ಪ್ರೇಮಿಗಳ ದಿನದಂದು ಲವ್ ಬರ್ಡ್ ಆದ ಶಂಕರ(45) ಮೇಘನಾ (25) ಊರಿಗೆಲ್ಲ ಊಟ ಹಾಕಿಸಿ ಸರಳವಾಗಿ ಸಂತಸದಿಂದ ಮದುವೆಯಾಗುತ್ತಾರೆ. 20 ವರ್ಷ ಅಂತರವಿದ್ದರೂ ಮಾದರಿಯಾಗಿ ಬದುಕಬೇಕೆಂದು ನಿರ್ಧರಿಸಿಕೊಂಡು ಸಂತಸದಿಂದ ಫೋಟೊ ಶೂಟ್ ಕೂಡ ಮಾಡಿಸಿಕೊಂಡಿದ್ದರು. ಅದು ಎಲ್ಲೆಡೆ ವೈರಲ್ ಆಗಿತ್ತು. ಶುಭಾಶಯದ ಮಹಾಪೂರವೇ ಬಂದಿತ್ತು.
ಈದೀಗ ಪತ್ನಿಯನ್ನು ಒಂಟಿಮಾಡಿ ಪ್ರೀತಿಗೆ ವಿದಾಯ ಹೇಳಿಹೊರಟರು ಶಂಕ್ರಣ್ಣ! ಮಂಗಳವಾರ ಬೆಳ್ಳಂಬೆಳಗ್ಗೆ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ಬಂದಿದ್ದರು. ಹೊಲಕ್ಕೆ ಹೋದ ಶಂಕರಣ್ಣ ಮರಕ್ಕೆ ನೇಣುಬಿಗಿದುಕೊಂಡು ಆತ್ಮ *ಹ * ತ್ಯೆ ಮಾಡಿಕೊಂಡಿದ್ದಾರೆ! ಪ್ರೀತಿಸಿ ಮದುವೆಯಾಗಿ ಇದ್ದಕ್ಕಿದ್ದಹಾಗೆ ಬಿಟ್ಟು ಇಹಲೋಕ ತ್ಯಜಿಸಿದರು ಶಂಕರ್. ಅತ್ತೆ ಸೊಸೆ ಜಗಳ ಸಾಮಾನ್ಯ. ಗಂಡ ಹೆಂಡರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ, ಅತ್ತೆ ಸೊಸೆ ಜಗಳದಲ್ಲಿ ಗಂಡ ಪ್ರಾಣ ಕಳೆದುಕೊಂಡ.
ಶಂಕರನ ಹೆಸರಲ್ಲಿ 2.5 ಎಕರೆ ಜಮೀನಿದೆ. ಇದನ್ನು ಮಾರಾಟ ಮಾಡಿ ಬೆಂಗಳೂರು ಅಥವಾ ಮೈಸೂರಿಗೆ ಹೋಗೊಣ ಎಂದು ಮದುವೆ ಆದಾಗಿನಿಂದ ಮೇಘನಾ ಒತ್ತಾಯಿಸುತ್ತಿದ್ದಳಂತೆ. ಆಸ್ತಿ ಮಾರಾಟ ಮಾಡೋಕೆ ನಾನು ಬಿಡಲ್ಲ ಎಂದು ಶಂಕರನ ತಾಯಿ ಹಠ ಹಿಡಿದಿದ್ದರು. ಇದೇ ಕಾರಣಕ್ಕೆ ಮದವೆ ಆದಾಗಿನಿಂದ ಪದೇಪದೆ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಎಲ್ಲೂ ಹೋಗೋದು ಬೇಡ, ಇಲ್ಲೇ ತಾಯಿ ಜತೆ ಹಳ್ಳಿಯಲ್ಲೇ ಇರೋಣ ಆಸ್ತಿ ಮಾರುವುದು ಬೇಡ ಎಂದು ಶಂಕರ ಹೇಳಿದರೂ ಮೇಘನಾ ಒಪ್ಪದೆ ಬೇರೆಡೆ ಹೋಗೋಣ ಎಂದು ಗಂಡನನ್ನು ಒತ್ತಾಯ ಮಾಡುತ್ತಿದ್ದಳಂತೆ.
ಇದೇ ವಿಚಾರವಾಗಿ ರಾತ್ರಿ ಶಂಕರ ಅವರ ತಾಯಿ ಮತ್ತು ಪತ್ನಿ ನಡುವೆ ಗಲಾಟೆ ನಡೆದಿತ್ತಂತೆ. ಅತ್ತೆ-ಸೊಸೆಯ ಗಲಾಟೆಗೆ ಬೇಸತ್ತ ಶಂಕರಣ್ಣ, ನೀವಿಬ್ಬರೂ ಪ್ರತಿನಿತ್ಯ ಇದೆ ರೀತಿ ಗಲಾಟೆ ಮಾಡುತ್ತಿದ್ದರೆ ನಾನು ಸಾಯುತ್ತೇನೆ ಎಂದು ಶಂಕರ ಹೇಳಿದ್ದರಂತೆ, ಜಗಳದ ಮುಕ್ತಾಯ ಲಕ್ಷಣ ಕಾಣದೇ ಮುಂಜಾನೆ ಹೊಲಕ್ಕೆ ಹೋಗಿ ನೇಣು ಬಿಗಿದು ಸತ್ತಿದ್ದಾರೆ. ಈಗ ಅತ್ತೆ, ಸೊಸೆಯ ಆಕ್ರಂದನ ಮುಗಿಲು ಮುಟ್ಟಿದೆ.
ಜಗಳ ಎಲ್ಲರ ಮನೆಯಲ್ಲೂ ಸಹಜ ಹಾಗೆಂದು ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಹೋಗುವುದೇ ? ಅರ್ಡ್ಜೆಸ್ಟ್ ಮಾಡಿಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರಲಿಲ್ಲ ತಾಯಿ ನಿಮ್ಮಿಬ್ಬರ ಜಗಳಕ್ಕೆ ಪಾಪ ಶಂಕರಣ್ಣ ಬಲಿಯಾಗಿಬಿಟ್ಟ. ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.