ಶೆರೆಗೆ ಬರಗಾಲ; ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್

By Infoflick Correspondent

Updated:Wednesday, April 6, 2022, 08:23[IST]

ಶೆರೆಗೆ ಬರಗಾಲ; ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಎಣ್ಣೆ ನಮ್ಮದು ಊಟ ನಿಮ್ಮದು ಎಂದು ಕೆಲವರು ದಿನಾ ಹಾಡು ಹೇಳಿ ಎಣ್ಣೆ ಪಾರ್ಟಿ ಮಾಡುತ್ತಾರೆ. ಇನ್ನು ಕೆಲವರಿಗಂತೂ ಎಣ್ಣೆ ಇಲ್ಲದೆ ಇರಲು ಸಾಧ್ಯವಿಲ್ಲ ಎನ್ನುತ್ತಾರೆ. ಲಾಕ್ ಡೌನ್ ಆದಾಗ ಎಣ್ಣೆಪ್ರಿಯರಿಗಂತೂ ಎಣ್ಣೆ ಸಿಗದೆ ಪರದಾಡಿದ್ದಾರೆ. ಈಗಲೂ ಅಂತಹದೇ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ. ಉಪಾವಾಸ ವೃತದಂತೆ ಶೆರೆ ಉಪವಾಸ ಕೈಗೊಳ್ಳುವುದಗಬಹುದು!    

ನಿನ್ನೆಯಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಕೆಲ ಅಂಗಡಿಗಳಲ್ಲಿ ಅಲ್ಪ ಸ್ಪಲ್ಪ ಎಣ್ಣೆ ಇದೆ. ಏಪ್ರಿಲ್ 5 ಸಂಜೆ ವೇಳೆಗೆ ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ. ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ ಗಳಲ್ಲಿ ಮಧ್ಯಕ್ಕೆ ಬರಗಾಲ ಉಂಟಾಗಿದೆ. 

ಮದ್ಯಕ್ಕೆ ಬರಗಾಲವೇ ? ಹೌದು ಏಕೆಂದರೆ ನೂತನ ಸಾಫ್ಟ್​ವೇರ್​ ಅಪ್​ಡೇಟ್ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. ಹಾಗಾಗಿ ಕೆಎಸ್​​ಬಿಸಿಎಲ್​ನಿಂದ​ (KSBCL ) ಬಾರ್​ಗಳಿಗೆ ಮದ್ಯ ಪೂರೈಕೆಯಾಗುತ್ತಿಲ್ಲ. 

ಕೆಎಸ್​ಬಿಸಿಎಲ್​ನಿಂದ ನಿಂದ ಪ್ರತಿದಿನ ಪೂರೈಕೆ ಆಗುತ್ತಿತ್ತು.  ಆದರೆ ಬಿಲ್ ಸಮಸ್ಯೆಯಿಂದ ಮದ್ಯ ಖರೀದಿಸಲು ಸನ್ನದುದಾರರಿಗೆ ತೊಂದರೆಯಾಗುತ್ತಿದೆ.  ಹಾಗಾಗಿ ನಿನ್ನೆಯಿಂದ ಕೆಎಸ್​ಬಿಸಿಎಲ್​ನಿಂದ ನಿಂದ ಪ್ರತಿದಿನ ಪೂರೈಕೆ ಆಗುತ್ತಿತ್ತು. ರಾಜ್ಯದ ಯಾವುದೇ CL-9 ಬಾರ್ ಅಂಡ್ ರೆಸ್ಟೋರೆಂಟ್, CL- 2 ವೈನ್ ಸ್ಟೋರ್, CL- 11C ಎಂಎಸ್‌ಐಎಲ್​ಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಸಪ್ಲೈ ಆಗುತ್ತಿಲ್ಲ.  

ಮದ್ಯ ಮಾರಾಟಗಾರರು ಇದರಿಂದ ನಷ್ಟಕ್ಕೆ ಒಳಗಾಗುತ್ತಿದ್ದು ಪ್ರತಿಭಟನೆ ನಡೆಸಲು ಬೆಂಗಳೂರು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ತೀರ್ಮಾನಿಸಿದೆ.