ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರ ಸಾವು: ತನ್ನದೇನು ತಪ್ಪಿಲ್ಲ ಎಂಬಂತಿರುವ ಸಚಿವ ಸುರೇಶ್ ಕುಮಾರ್..!

Updated: Monday, May 3, 2021, 12:51 [IST]

ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಕೊರೋನಾ ರೋಗಿಗಳು ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ. ಆದರೆ, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಉಡಾಫೆ ಉತ್ತರ ಕೊಟ್ಟಿದ್ದಾರೆ. ಇವರ ನಡವಳಿಕೆಗೆ ಜನ ಾಕ್ರೋಶ ವ್ಯಕ್ತಪಡಿಸಿದ್ದಾರೆ.   

ಈ ಬಗ್ಗೆ ಮಾತನಾಡಿರುವ ಸಚಿವರು, ಕಳೆದ 24 ಗಂಟೆಯಲ್ಲಿ 24 ಸಾವು ಸಂಭವಿಸಿವೆ. ಈ ಸಾವುಗಳನ್ನ ಸಂಖ್ಯೆಯ ದೃಷ್ಟಿಯಲ್ಲಿ ನಾವು ನೋಡಲ್ಲ. ಒಂದು ಸಾವಾದರೂ ನಮಗೆ ದುಃಖದ ಸಂಗತಿ. 24 ಸಾವುಗಳು ಆಮ್ಲಜನಕ ಕೊರತೆಯಿಂದ ಆಗಿದೆ ಅನ್ನೋದು ಸರಿಯಲ್ಲ.

ಆಮ್ಲಜನಕ ಕೊರತೆ ಆಗಿರುವುದು ರಾತ್ರಿ 12.30 ನಂತರ. ನಿನ್ನೆ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಆಗಿತ್ತು.   ಕೊರೋನಾ ರೋಗಿಗಳು ಸಾವನ್ನಪ್ಪಿರಲು ಸಾಧ್ಯವಿಲ್ಲ, ಬೇರೆ ಬೇರೆ ರೋಗಗಳಿಂದ ಆಸ್ಪತ್ರೆಗೆ ಬಂದು ದಾಖಲಾದವರು ಇದ್ದಾರೆ. ಅಷ್ಟೇ ಅಲ್ಲದೇ, ಕೊನೆ ಗಳಿಗೆಯವರೆಗೆ ಮನೆಯಲ್ಲಿಯೇ ಕುಳಿತು ಆ ಮೇಲೆ ಬರಬೇಡಿ, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದ ಕೂಡಲೇ ಆಸ್ಪತ್ರೆಗೆ ಬಂದು ದಾಖಲಾದರೆ ಈ ರೀತಿ ಸಾವಿನ ಘಟನೆಯನ್ನು ತಪ್ಪಿಸಿಕೊಳ್ಳಬಹುದು ಎಂದಿದ್ದಾರೆ.

ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿರಬಹುದು. ಆದ್ರೆ, ಕೊಡಗು, ಚಾಮರಾಜನಗರ ಜಿಲ್ಲೆಗೆ ಬೇಕಾದ ಆಕ್ಸಿಜನ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ಆ ಮೂಲಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಆಕ್ಸಿಜನ್ ಪೂರೈಕೆ ಮಾಡಿಲ್ಲ ಎಂಬ ಆರೋಪವನ್ನು ಮಾಡಿದರು. ಇನ್ನು 12 ಗಂಟೆಯೊಳಗೆ ಡೆತ್ ರಿಪೋರ್ಟ್ ಆಡಿಟ್ ಬರುತ್ತದೆ. ಅದಕ್ಕಾಗಿ ನಾವು ಕಾಯತ್ತಿದ್ದೇವೆ ಎಂದು ತಿಳಿಸಿದರು.