5 ಕೋಟಿ ಹಣ ಗೆದ್ದು ಬೀಗಬೇಕಿದ್ದವನು ಕೆಲವೇ ವರ್ಷಗಳಲ್ಲಿ ಬೀದಿಗೆ ಬಂದ‌ ಸುಶೀಲ್‌ ಕುಮಾರ್ ಜೀವನದ ಬಗ್ಗೆ ನೀವು ಕೇಳಲೇ ಬೇಕು..

By Infoflick Correspondent

Updated:Monday, August 8, 2022, 19:09[IST]

5 ಕೋಟಿ ಹಣ ಗೆದ್ದು ಬೀಗಬೇಕಿದ್ದವನು ಕೆಲವೇ ವರ್ಷಗಳಲ್ಲಿ ಬೀದಿಗೆ ಬಂದ‌ ಸುಶೀಲ್‌ ಕುಮಾರ್ ಜೀವನದ ಬಗ್ಗೆ ನೀವು ಕೇಳಲೇ ಬೇಕು..
ಅಯ್ಯೋ.. ನಿತ್ಯ ದುಡಿಬೇಕು.. ದುಡಿದ ಹಣದಿಂದಲೇ ಬದುಕಬೇಕು. ಎಲ್ಲಾದರೂ ಈಸಿಯಾಗಿ ಹಣ ಸಿಕ್ಕರೆ ಸಾಕಪ್ಪ. ಆ ಹಣದಲ್ಲಿ ಒಂದು ಮನೆಯನ್ನು ಖರೀದಿಸಿ. ಜೀವನಕ್ಕೆ ಹಣ ಉಳಿಸಿಕೊಂಡು ಆರಾಮಾಗಿ ಜೀವನ ಮಾಡಬೇಕು ಎನ್ನು ಜನರೇ ಹೆಚ್ಚಿರುವಾಗ. ಕೋಟಿಗಟ್ಟಲೆ ಹಣ ಗೆದ್ದು, ಬದಿಗೆ ಬಂದವರು ಉದಾಹರಣೆಯಾಗಿ ನಿಲ್ಲುತ್ತಾರೆ. ಅರೆ ಅಂದು ಹೇಗೆ ಸಾಧ್ಯ ಕೋಟಿ ಕೋಟಿ ಹಣ ಗೆದ್ದ ಮೇಲೆ ಆತ ಬೀದಿಗೆ ಯಾಕೆ ಬಂದ ಅಂತ ಯೋಚಿಸುತ್ತಿದ್ದೀರಾ..? ಮಿಸ್‌ ಮಾಡದೇ ಈ ಸುದ್ದಿ ಓದಿ., ಇದು ಪೂರಾ ಸತ್ಯ ಕಥೆ. 
 
ಸುಶೀಲ್‌ ಕುಮಾರ್.‌ ಈ ಹೆಸರನ್ನು ನೀವು ಕೇಳಿ ಮರೆತಿರಬಹುದು.  ನಾವು ಈಗ  ನೆನಪು ಮಾಡುತ್ತೇವೆ. ಅಮಿತಾಭ್ ಬಚ್ಚನ್ ಅವರು ನಡೆಸಿಕೊಟ್ಟ ಹಿಂದಿಯ ಕೌನ್ ಬನೇಗಾ ಕರೋಡ್ಪತಿ ರಿಯಾಲಿಟಿ ಕ್ವಿಜ್ ಶೋನಲ್ಲಿ ಸುಶೀಲ್‌ ಕುಮಾರ್‌ ಅವರು ಭಾಗವಹಿಸಿದ್ದರು. ಚೆನ್ನಾಗಿ ಆಡಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಬರೋಬ್ಬರಿ 5 ಕೋಟಿ ಬಹುಮಾನದ ಹಣವನ್ನೂ ಗೆದ್ದಿದ್ದರು. ಬಿಹಾರ ಮೂಲದ ಇವರು 2011ರಲ್ಲಿ ಗೆದ್ದು ಸುದ್ದಿಯಾಗಿದ್ದರು. ನರೇಗಾ ಯೋಜನೆಯಲ್ಲಿ ಕಂಪ್ಯೂಟರ್ ಇನ್ಸ್ಟ್ರಕ್ಟರ್ ಆಗಿದ್ದ ಸುಶೀಲ್‌ ಅವರ ಸಂಬಳ ಆಗ ಕೇವಲ 6 ಸಾವಿರ ರೂಪಾಯಿ. ಆದರೆ ಆಟವಾಡಿ ಜೀವನ ಪೂರ್ತ ದುಡಿದರೂ ಸಿಗದ ಮೊತ್ತವನ್ನು ಕೆಲವೇ ದಿನಗಳಲ್ಲಿ ಗಳಿಸಿದ್ದರು.     
 
ಇದರಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿ ಸೆಲಬ್ರಿಟಿ ಕೂಡ ಆಗಿ ಬಿಟ್ಟರು. ಎರಡು ವರ್ಷ ಸುಖವಾಗಿದ್ದ ಇವರ ಬದುಕಲ್ಲಿ ಸಮಸ್ಯೆಗಳು ಶುರುವಾದವು. 2015-16ರ ವರ್ಷದಲ್ಲಿ ಸವಾಲಿನ ದಿನಗಳನ್ನು ಎದುರಿಸಬೇಕಾಯ್ತು. ಸೆಲಬ್ರಿಟಿಯಾಗಿದ್ದ ಇವರನ್ನು ಸಂದರ್ಶನ ಮಾಡಲು ಕರೆಗಳು ಬರುತ್ತಿದ್ದವಂತೆ. ಓದಿರದ ಇವರು ತಿಳೂವಳಿಕೆ ಇಲ್ಲದೆ ಸಂದರ್ಶನದಲ್ಲಿ ತಮ್ಮ ವ್ಯವಹಾರದ ಬಗ್ಗೆ ಹೇಳಿಕೊಳ್ಳುತ್ತಿದ್ದರಂತೆ. ಇದರಿಂದ ತಮಗೆ ಸಹಾಯವಾಗುತ್ತದೆ ಎಂದುಕೊಂಡಿದ್ದರು. ಆದರೆ ಇದೇ ಅವರಿಗೆ ನಷ್ಟವನ್ನು ತಂದುಕೊಡುತ್ತಿತ್ತಂತೆ. ದುಷ್ಟ ಚಟಗಳ ವ್ಯಸನಿಯಾಗಿದ್ದ ಇವರು, ದಾನಗಳನ್ನು ಮಾಡುತ್ತಿದ್ದರಂತೆ. ಸಿನಿಮಾ ಮಾಡುವ ಹುಚ್ಚು ಹಿಡಿದು ಸದಾ ಸಿನಿಮಾ ನೋಡುತ್ತಿದ್ದರಂತೆ. ಇದರಿಂದ ಪತ್ನಿ ಕಿರುಚಾಡುತ್ತದ್ದಳಂತೆ. ಒಮ್ಮೆ ಪತ್ರಕರ್ತರ ಜೊತೆಗೆ  ಮಾತನಾಡುವಾಗ ನನ್ನ ಬಳಿ ಹಣವೆಲ್ಲಾ ಖಾಲಿಯಾಗಿದೆ. ನನ್ನ ಬಳಿ ಈಗ ಎರಡು ಹಸು ಇದೆ. ಇದರ ಹಾಲಿನಿಂದ ಬಂದ ಹಣದಲ್ಲಿ ಜೀವಿಸುತ್ತಿದ್ದೇನೆ ಎಂದು ಹೇಳಿದರಂತೆ. ಈ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ಮೇಲೆ ಜನ ಸುಶೀಲ್‌ ಕುಮಾರ್‌ ಬಳಿ ಬರುವುದನ್ನೇ ನಿಲ್ಲಿಸಿ ಬಿಟ್ಟರಂತೆ. 
 
ಸಿನಿಮಾ ನಿರ್ಮಾಪಕನಾಗುವ ಕನಸಿನಲ್ಲಿ ಹೆಚ್ಚೆಚ್ಚು ಸಿನಿಮಾ ನೋಡಿ ಕಿರುತೆರೆಗೆ ಎಂಟ್ರಿಕೊಟ್ಟರಂತೆ. ಅಲ್ಲಿಯೂ ತೊಂದರೆಯಾಗಿ, ಸೀದಾ ಮುಂಬೈಗೆ ಬಂದು ನಿರ್ದೇಶಕನಾಗಬೇಖು, ನಿರ್ಮಾಪಕನಾಗಬೇಕು ಎಂದು ಹುಚ್ಚು ಹಿಡಿದವರಂತೆ ಅಲೆದಾಡಿದರಂತೆ. ಚೈನ್‌ ಸ್ಮೋಕರ್‌ ಆದರಂತೆ. ಇವರ ಪತ್ನಿ ಇನ್ನು ನಿಮ್ಮ ಸಹವಾಸ ಸಾಕು  ನಾನು  ಡಿವೋರ್ಸ್‌ ಕೊಡುತ್ತೇನೆ ಎಂದು ಹೇಳಿದರಂತೆ. ಮುಂಬೈನಿಂದ ವಾಪಸ್‌ ಬಂದ ಸುಶೀಲ್‌ ಕುಮಾರ್‌ ಅವರು ವಾಸ್ತವಕ್ಕೆ ಮರಳಿದರಂತೆ. ಎಲ್ಲಾ ದುಷ್ಚಟಗಳನ್ನು ತ್ಯೆಜಿಸಿ, ಈ ಹಾಸಿಗೆ ಇದ್ದಷ್ಟು ಬದುಕಬೇಕು ಎಂದು ಅರ್ಥ ಮಾಡಿಕೊಂಡಿದ್ದಾರಂತೆ. ನೋಡಿ.. ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕುಳಿತರೆ ಹೀಗೆ ಆಗುವುದು. ಸೋ ನೀವು ಯೋಚಿಸಿ ನಿರ್ಧಾರ ಕೈಗೊಳ್ಳಿ.