ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡ ಶಿಕ್ಷಕ ಸಾವು: ಅಷ್ಟಕ್ಕೂ ಈ ಐಡಿಯಾ ಕೊಟ್ಟವರಾರು ಗೊತ್ತಾ..? ವಿಡಿಯೋ ನೋಡಿ

Updated: Thursday, April 29, 2021, 13:41 [IST]

ನಿಂಬೆ ರಸದ ಎರಡು ಹನಿಯನ್ನು ಮೂಗಿಗೆ ಹಾಕಿ ಕೊಂಡರೆ ಕೊರೊನಾ ಓಡಿ ಹೋಗುತ್ತೆ ಎಂದು ಹೇಳಲಾಗಿತ್ತು. ಇದನ್ನು ನಂಬಿದ ರಾಯಚೂರಿನ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ್, ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದಾರೆ.  ಬಳಿಕ ಕಡಿಮೆ ರಕ್ತದೊತ್ತಡ, ಹೃದಯಾಘಾತಕ್ಕೆ ಒಳಗಾಗಿ 43 ವರ್ಷದ ಬಸವರಾಜ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 


ನಿಂಬೆ ಹಣ್ಣಿನಲ್ಲಿ ಸಿ ಮತ್ತು ಎ ವಿಟಮಿನ್ಗಳಿವೆ.ನಿಂಬೆ ಹಣ್ಣಿನ ಹನಿಗಳನ್ನು ಮೂಗಿನಲ್ಲಿ ಬಿಟ್ಟುಕೊಂಡರೆ ದೇಹದ ಆಮ್ಲಜನಕ ವೃದ್ಧಿಯಾಗುತ್ತದೆ ಎಂದು ಇತ್ತೀಚೆಗೆ ಹೇಳಲಾಗುತ್ತಿದೆ

. ಇದರೊಂದಿಗೆ ಈ ವಿಚಾರಕ್ಕೆ ಪರ, ವಿರೋಧಗಳು ವ್ಯಕ್ತವಾಗುತ್ತಿವೆ.
ಇತ್ತೀಚೆಗೆ ವಿಆರ್ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಅವರು ಮೂಗಿನಲ್ಲಿ ನಾಲ್ಕು ಹನಿ ನಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯ ಬಳಿಕ ಹಲವರು ನಿಂಬೆ ರಸ ಪ್ರಯೋಗವನ್ನು ಮಾಡಿದ್ದರು.