23 ರ ಹರೆಯದ ಯುವತಿ 11 ಮಕ್ಕಳ ತಾಯಿ..! ಸೆಂಚುರಿ ಬಾರಿಸುವ ಕನಸಂತೆ..! ಕಾರಣವೇನು ಗೊತ್ತಾ

Updated: Wednesday, February 17, 2021, 22:36 [IST]

ಭಾರತದಲ್ಲಿ ಒಂದು ಬೇಕು ಎರಡು ಸಾಕು ಎನ್ನುವ ನಿಯಮ ಇದೆ. ಇತ್ತೀಚಿನ ಖರ್ಚುಗಳನ್ನು ನೋಡಿದ್ರೆ ಹೆಚ್ಚು ಮಕ್ಕಳು ಬೇಡ ಎನಿಸುತ್ತದೆ. ಆದರೆ ರಷ್ಯಾ ಮೂಲದ ಮಹಿಳೆ ಒಬ್ಬರು, 11 ಮಕ್ಕಳನ್ನು ಈಗಾಗ್ಲೇ ಪಡೆದುಕೊಂಡಿದ್ದು, ಇನ್ನೂ ಕೂಡ ಮಕ್ಕಳು ಬೇಕು ಎಂದು ಹೇಳಿದ್ದಾರೆ. ಹೌದು ನೂರಕ್ಕೂ ಹೆಚ್ಚು ಮಕ್ಕಳನ್ನು ಹೊಂದಬೇಕು ಎನ್ನುವ ಕನಸೊಂದು ಇವರಿಗೆದೆಯಂತೆ.ಈ ರೀತಿ ವಿಷಯ ಜಾರ್ಜಿಯಾದಲ್ಲಿ ನಡೆದಿದೆ. ರಷ್ಯಾ ಮೂಲದ ಕೋಟ್ಯಾಧೀಶೆ, 23 ಹರೆಯದ ಕ್ರಿಸ್ಟಿನಾ ಒಜ್ತುರ್ಕ್‌ ಎಂಬಾಕೆ ರಷ್ಯಾ ಮೂಲದವರು ಆಗಿದ್ದು, ಅಗರ್ಭ ಶ್ರೀಮಂತರಂತೆ, ಕೋಟ್ಯಾದಿಶಿಯಂತೆ. ಈಗಾಗಲೇ 11 ಮಕ್ಕಳನ್ನು ಹೊಂದಿದ್ದು, 100ಕ್ಕೂ ಹೆಚ್ಚು ಮಕ್ಕಳನ್ನು ಪಡೆಯುವ ಕನಸಿದೆ ಎಂದು ತಿಳಿಸಿದ್ದಾರೆ. ಕೇವಲ ಮಕ್ಕಳಿರುವ ಲೋಕದಲ್ಲಿ ಬದುಕಲು ಇಷ್ಟವಿದೆ ಎಂದು  ಸೋಷಿಯಲ್ ಮಿಡಿಯಾದಲಿ ಹೇಳಿದ್ದು 11 ಮಕ್ಕಳನ್ನು ಹೊಂದಿರುವ ಈ ಮಹಿಳೆ, 100 ಕ್ಕೂ ಹೆಚ್ಚು ಮಕ್ಕಳು ಪಡೆಯುವ ಕನಸಿರುವುದಾಗಿ ಹೇಳಿದ್ದಾರೆ. 

Advertisement

11 ಮಕ್ಕಳ ಪೈಕಿ 10 ಬಾಡಿಗೆ ತಾಯಿಯರಿಂದ 10  ಮಕ್ಕಳನ್ನ ಪಡೆದಿದ್ದು, ಕೇವಲ ಒಂದು ಹೆಣ್ಣು ಮಗುವಿಗೆ ಇವರೇ ಜನ್ಮ ನೀಡಿರುವ ವುದಾಗಿ ಹೇಳಿದ್ದಾರೆ. 23 ರ ಸಣ್ಣ ಹರೆಯದ ಕ್ರಿಸ್ಟಿನಾ ಒಜ್ತುರ್ಕ್‌ ಅವರು, ಬಾಡಿಗೆ ತಾಯಿಯ ಮೂಲಕ ಅಥವಾ ಸರೋಗೇಟ್‌ ಮದರ್‌ ಮೂಲಕ ಮಕ್ಕಳನ್ನು, ಪಡೆಯಬೇಕಾದರೆ ಪ್ರತಿಯೊಂದು ಮಗುವಿಗೆ 7 ಲಕ್ಷ ಹಣ ಖರ್ಚು ಮಾಡಿ ನೀಡಿರುವುದಾಗಿ ಕ್ರಿಸ್ಟಿನಾ ಹೇಳಿಕೊಂಡಿದ್ದಾರೆ. ಮತ್ತು ಕ್ರಿಸ್ಟಿನಾ ಒಜ್ತುರ್ಕ್‌ ಪತಿಯಾಗಿರುವ 'ಗಲಿ ಒಜ್ತುರ್ಕ್‌' ಅವರು ದೊಡ್ಡ ದೊಡ್ಡ ಹೋಟೆಲ್‌ಗಳನ್ನು ಹೊಂದಿದ್ದಾರೆ ಮತ್ತು ಇವರಿಬ್ಬರು  ಅಗರ್ಭ ಶ್ರೀಮಂತರು ಎಂದು ತಿಳಿದುಬಂದಿದೆ. 

Advertisement

ಹಾಗೇನೇ ಇದರ ಬಗ್ಗೆ ಸೋಷಿಯಲ್ ಮಿಡಿಯಾದಲಿ ಮಾತನಾಡಿರುವ ಕ್ರಿಸ್ಟಿನಾರವರು "ನಾವು ಕೇವಲ 10 ಮಕ್ಕಳಗೆ ಇದನ್ನು ನಿಲ್ಲಿಸುವುದಿಲ್ಲ.. ಇನ್ನು ಹಲವು ಮಕ್ಕಳನ್ನು ಹೊಂದುವ ಆಸೆ ನಮಗಿದೆ. 100ಕ್ಕೂ ಹೆಚ್ಚು ಮಕ್ಕಳು ಬೇಕೆನ್ನುವ ಬಯಕೆಯಿದೆ. ಅಲ್ಲದೇ ಸದ್ಯಕ್ಕೆ ಎಷ್ಟು ಮಕ್ಕಳು ಹೊಂದಲಿದ್ದೇವೆ ಎಂದು ನಿಖರವಾಗಿ ಹೇಳುವುದು ಕಷ್ಟ" ಎಂದು ಹೇಳಿದ್ದಾರೆ ಎನ್ನಲಾಗಿದೆ. ಮತ್ತು ಈಕೆಯ ಪತಿ ಕೂಡ, ಈಕೆಯ ಆಸೆಗೆ ಸಾಥ್‌ ನೀಡುತ್ತಿದ್ದು, 'ಮಕ್ಕಳನ್ನು ಸಾಕುವುದು ನಮಗೇನು ಕಷ್ಟದ ವಿಷಯವಲ್ಲ' ಎಂದು ಹೇಳಿದ್ದಾರಂತೆ. ಈಗಿನ ಕಂಪ್ಯೂಟರ್ ಯುಗದಲಿ ಒಂದು ಮಕ್ಕಳ ಓದು ಅವರ ಬೆಳೆಯುವ ಖರ್ಚು ಹೇಗಪ್ಪಾ ಎನ್ನುವ ದಂಪತಿಗಳು ಇವರ ಮಕ್ಕಳ ಆಸೆಯನ್ನ ನೋಡಿ, ಬಳಿಕ  ಶಾಕ್‌ ಆದರೂ ಆಗಬಹುದೇನೋ? ಗೊತ್ತಿಲ್ಲ....