ನಾನು ನಾಯಿಯನ್ನೆ ಮದುವೆ ಆಗುತ್ತೇನೆಂದ ಈ 18 ವರ್ಷದ ಹುಡುಗಿಯ ಅಸಲಿ ಕಥೆ ಏನು ಗೊತ್ತಾ..?

By Infoflick Correspondent

Updated:Wednesday, March 30, 2022, 20:43[IST]

ನಾನು ನಾಯಿಯನ್ನೆ ಮದುವೆ ಆಗುತ್ತೇನೆಂದ ಈ 18 ವರ್ಷದ ಹುಡುಗಿಯ ಅಸಲಿ ಕಥೆ ಏನು ಗೊತ್ತಾ..?

ಜೀವನದಲ್ಲಿ ಎಲ್ಲರೂ ಕೂಡ ಹಂತಹಂತವಾಗಿ ಒಂದೊಂದು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಗೆ ಎಲ್ಲವನ್ನು ತಿಳಿದುಕೊಳ್ಳುವ ಶಕ್ತಿ ಮಟ್ಟ ಹೆಚ್ಚಾದಲ್ಲಿ, ಬುದ್ಧಿ ಬಂದ ಮೇಲೆ ಜೀವನದಲ್ಲಿ ಹೇಗೆಲ್ಲಾ ಇರಬೇಕು ಎಂಬುದಾಗಿ ಅವರೇ ನಿರ್ಧಾರ ಮಾಡುತ್ತಾರೆ. ಕೆಲವೊಂದು ಬಾರಿ ಅವರ ಕನಸುಗಳು ಕೂಡ ಅವರಿಗಿಂತ ತುಂಬಾ ಅತಿ ಎತ್ತರದಲ್ಲಿ ಇರುತ್ತವೆ. ಮದುವೆ ಎನ್ನುವುದು ಒಂದು ವಿಶೇಷ. ಎಲ್ಲರೂ ಕೂಡ ಜೀವನದಲ್ಲಿ ಮದುವೆ ಆಗುತ್ತಾರೆ. ದೇವರು ಒಬ್ಬರಿಗೆ ಒಬ್ಬರು ಎಂದು ಮೊದಲೇ ಸೃಷ್ಟಿ ಮಾಡಿರುತ್ತಾನೆ ಎಂದು ನಾವು ಕೂಡ ನಂಬಿದ್ದೇವೆ. ಆದ್ರೆ ಕೆಲವರು ಈ ಮಾತಿಗೆ ತದ್  ವಿರುದ್ಧವಾಗಿ ಮದುವೆಯಾಗದೆ ವೈಯಕ್ತಿಕ ಯಾವುದೋ ಕಾರಣಗಳಿಂದ ಜೀವನವನ್ನು ಹಾಗೆ ಸಾಗಿಸುತ್ತಾರೆ.

ಹೌದು ಮದುವೆ ಎನ್ನುವುದು ತುಂಬಾನೇ ಪರಿಪೂರ್ಣವಾದ ಒಂದು ಸಂಬಂಧ. ಇದು ಒಂದು ಸವಿಯ ಸಂಬಂಧ ಎಂದು ಹೇಳಬಹುದು. ಹುಡುಗ ಆಗಲಿ, ಹುಡುಗಿ ಆಗಲಿ, ನಾನು ಮದುವೆ ಆಗುವವರು ಹೀಗೆಯೇ ಇರಬೇಕು,, ಈ ತರಹದ ಹುಡುಗ-ಹುಡುಗಿ ಇರಬೇಕು ಎಂದು ಆಲೋಚಿಸುತ್ತಾರೆ. ಕೆಲವರು ಹುಡುಗನ ಗುಣ ಮತ್ತು ಒಳ್ಳೆ ಮನಸ್ಥಿತಿ ನೋಡಿ ಮದುವೆಯಾದರೆ, ಇನ್ನೂ ಕೆಲ ಹುಡುಗಿಯರು ನೋಡಲು ಹುಡುಗ ಚಂದ ಇರಲಿ ಬಿಡಲಿ ದುಡ್ಡು ಇದ್ದರೆ ಸಾಕು ಎನ್ನುವ ಮನಸ್ಥಿತಿ ಹೊಂದಿರುತ್ತಾರೆ. ಆದರೆ ಜಾರ್ಖಂಡ್ನ ಹದಿನೆಂಟು ವರ್ಷದ ಈ ಹುಡುಗಿ ಕಥೆಯೇ ಬೇರೆಯಾಗಿದೆ. ಹುಡುಗಿರು ಹುಡುಗನನ್ನೇ ಮದುವೆ ಆದರೆ, ಈ 18 ವರ್ಷದ ಹುಡುಗಿ ಒಂದು ಬೀದಿ ನಾಯಿಯನ್ನು ಮದುವೆಯಾಗಿದ್ದಾರೆ. 

ಇದಕ್ಕೆ ಬಲವಾದ ಕಾರಣ ಕೂಡ ಇದ್ದು, ಈಕೆ ಜಾತಕದಲ್ಲಿ ಒಂದು ದೋಷ ಇತ್ತಂತೆ. ಹುಡುಗನೊಟ್ಟಿಗೆ ಈಕೆ ಮದುವೆ ಆಗಬೇಕು ಎಂದಲ್ಲಿ ಮೊದಲಿಗೆ ಅದು ಒಂದು ನಾಯಿಯ ಜೊತೆ ಆಗಬೇಕು, ನಂತರ ಆ ವರನ ಜೊತೆ ಆಗಬಹುದು ಎಂದು ಜಾತಕದಲ್ಲಿ ಕೇಳಿ ಬಂದಿತಂತೆ. ಅದೇ ರೀತಿ ಹೆಚ್ಚು ಜಾತಕವನ್ನು ನಂಬುವ ನಮ್ಮ ಜನರ ನಡುವೆ ಈ ಹುಡುಗಿ ಮನೆಯವರು ಕೂಡ, ಒಂದು ಬೀದಿನಾಯಿ ಜೊತೆ ಮದುವೆ ಮಾಡಿಸಿ ನಂತರ ಅದೇ ಊರಿನ ಒಬ್ಬ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...