ಇದ್ದಕ್ಕಿದ್ದಂತೆ ಟಿಕ್‌ ಟಾಕ್‌ ಬೆಡಗಿ ಸೋನಾಲಿ ಫೋಗಟ್ ಗೆ ಹೃದಯಾಘಾತ..!!

By Infoflick Correspondent

Updated:Tuesday, August 23, 2022, 16:50[IST]

ಇದ್ದಕ್ಕಿದ್ದಂತೆ ಟಿಕ್‌ ಟಾಕ್‌ ಬೆಡಗಿ ಸೋನಾಲಿ ಫೋಗಟ್ ಗೆ ಹೃದಯಾಘಾತ..!!

ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಸೋಮವಾರ ರಾತ್ರಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 41 ವರ್ಷದ ನಾಯಕಿ ಸೋಮವಾರ ತನ್ನ ಸಿಬ್ಬಂದಿಗೆ ಅಸ್ವಸ್ಥತೆಯ ಬಗ್ಗೆ ತಿಳಿಸಿದ್ದರು. ಆಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೃದಯಾಘಾತ ಸಂಭವಿಸಿ ಸೋನಾಲಿ ಪೋಗಟ್‌ ಅವರು ಸಾವನ್ನಪ್ಪಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸ್ಥಳೀಯ ಪೊಲೀಸರು ಆಸ್ಪತ್ರೆಗೆ ತೆರಳುತ್ತಿದ್ದಾರೆ. ನಟಿ ಎರಡು ದಿನಗಳ ಕಾಲ ಚಿತ್ರೀಕರಣಕ್ಕಾಗಿ ಗೋವಾಗೆ ಹೋಗಿದ್ದರು ಎನ್ನಲಾಗಿದೆ. ಸೋನಾಲಿ ಫೋಗಟ್ ಅವರ ಪೋಷಕರು ಹರಿಯಾಣದ ಭೂತಾನ್ ಗ್ರಾಮದಿಂದ ಗೋವಾಗೆ ತೆರಳುತ್ತಿದ್ದಾರೆ. ಹಿಸಾರ್ ಬಿಜೆಪಿ ಜಿಲ್ಲಾಧ್ಯಕ್ಷ ಕ್ಯಾಪ್ಟನ್ ಭೂಪೇಂದರ್ ಮಾತನಾಡಿ, ಸೋನಾಲಿ ಗೋವಾದಲ್ಲಿದ್ದರು. ನಾನು ಅವಳ ಸಹಾಯಕರೊಂದಿಗೆ ಮಾತನಾಡಿದೆ ಮತ್ತು ಅವರು ಹೃದಯಾಘಾತದಿಂದ ನಿಧನರಾದರು ಎಂದು ಹೇಳಿದರು.  

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದಂಪುರ ವಿಧಾನಸಭಾ ಕ್ಷೇತ್ರದಿಂದ ಕುಲದೀಪ್ ಬಿಷ್ಣೋಯ್ ವಿರುದ್ಧ ಫೋಗಟ್ ಸ್ಪರ್ಧಿಸಿ ಸೋತಿದ್ದರು. ಆಗ ಕಾಂಗ್ರೆಸ್ ನಲ್ಲಿದ್ದ ಬಿಷ್ಣೋಯ್ ಇತ್ತೀಚೆಗೆ ಬಿಜೆಪಿ ಸೇರಿದ್ದರು. ಇನ್ನು 2016ರಲ್ಲಿ ಆಕೆಯ ಪತಿ ಸಂಜಯ್ ಫೋಗಟ್ ಫಾರ್ಮ್‌ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. 

ಜನಪ್ರಿಯ ಟಿಕ್ ಟಾಕ್ ತಾರೆ ಫೋಗಟ್ ಬಿಗ್ ಬಾಸ್ 14 ನೇ ಆವೃತ್ತಿಯಲ್ಲಿಯೂ ಕಾಣಿಸಿಕೊಂಡಿದ್ದರು. ಸಾವಿಗೂ ಮುನ್ನ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಅವರು ಟ್ವಿಟರ್ ಖಾತೆಯಲ್ಲಿ ತನ್ನ ಪ್ರೊಫೈಲ್ ಚಿತ್ರವನ್ನು ಸಹ ಬದಲಾಯಿಸಿದ್ದರು.ಏತನ್ಮಧ್ಯೆ, ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.