ಉತ್ತರ ಪ್ರದೇಶದಲ್ಲಿ  ಹೊಸ ಇತಿಹಾಸ ಸೃಷ್ಟಿಸುತ್ತಾರಾ ಯೋಗಿ ? ; ಹಿಂದಿನ ಇತಿಹಾಸ ಏನು ಗೊತ್ತೆ ?

By Infoflick Correspondent

Updated:Thursday, March 10, 2022, 13:20[IST]

ಉತ್ತರ ಪ್ರದೇಶದಲ್ಲಿ  ಹೊಸ ಇತಿಹಾಸ ಸೃಷ್ಟಿಸುತ್ತಾರಾ ಯೋಗಿ ? ; ಹಿಂದಿನ ಇತಿಹಾಸ ಏನು ಗೊತ್ತೆ ?

ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ.! ಮತ ಎಣಿಕೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಬಹುಮತವನ್ನೂ ಮೀರಿ,‌ಸಂಭ್ರಮ ಆಚರಿಸುತ್ತಿದೆ. ಅಂತಿಮ ಫಲಿತಾಂಶದಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗದಿದ್ದರೆ, ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಕುರ್ಚಿ ಅಲಂಕರಿಸಲಿದ್ದಾರೆ. 

ಉತ್ತರ ಪ್ರದೇಶದಲ್ಲಿ ಬಿಜೆಪಿ ಯೇ ಬರುತ್ತದೆ ಎಂಬ ನಿಖರತೆಯಿಂದ ಜನತೆ ಈಗಲೇ ಸಿಹಿ ತಿಂಡಿಗಳನ್ನು ಭರ್ಜರಿಯಾಗಿ ತಯಾರಿಸಿ ಹಂಚುತ್ತಿದ್ದಾರೆ ! 

ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಐದು ವರ್ಷಗಳ ಅವಧಿ ಮುಗಿದ ತಕ್ಷಣ ಮುಂದಿನ ಚುನಾವಣಾ ಫಲಿತಾಂಶದಲ್ಲಿ ಯಾವ ಮುಖ್ಯಮಂತ್ರಿಯೂ ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗ ಯೋಗಿ ಆದಿತ್ಯನಾಥ್ ಗೆಲುವಿನ ನಗೆಯಿಂದ ಪುನಃ ಮುಖ್ಯಮಂತ್ರಿಯಾದರೆ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. 

ಗಣಿತದಲ್ಲಿ ಅಪಾರ ಆಸಕ್ತಿ ಹೊಂದಿದ ಯೋಗಿಯವರ ಲೆಕ್ಕಾಚಾರ ಸರಿಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬಂದಿದ್ದು , ವಿರೋಧ ಪಕ್ಷದ ದಂಗಾಬಲ ಅಡಗಿಹೋಗುತ್ತಿದೆ.