25 ವರ್ಷದ ಮೇಘನಾಳ ಕೈ ಹಿಡಿದಿದ್ದ 45 ವರ್ಷದ ಶಂಕ್ರಣ್ಣ ಇಂದು ಸಾವು..! ಕಾರಣ ಇಲ್ಲಿದೆ ನೋಡಿ

By Infoflick Correspondent

Updated:Tuesday, March 29, 2022, 10:21[IST]

25 ವರ್ಷದ ಮೇಘನಾಳ ಕೈ ಹಿಡಿದಿದ್ದ 45 ವರ್ಷದ  ಶಂಕ್ರಣ್ಣ ಇಂದು ಸಾವು..! ಕಾರಣ ಇಲ್ಲಿದೆ ನೋಡಿ

ಕಳೆದ ನಾಲ್ಕು ತಿಂಗಳ ಹಿಂದೆ ತುಮಕೂರಿನ ಒಂದು ಜೋಡಿ 20ವರ್ಷ ಅಂತರ ಇದ್ದು ಮದುವೆಯಾಗಿದ್ದ ವಿಷಯ ಇಡೀ ದೇಶದಾದ್ಯಂತ ತುಂಬಾನೇ ಚರ್ಚೆಯಾಗಿತ್ತು. 25ವರ್ಷದ ಮೇಘನಾ 45 ವರ್ಷದ ಶಂಕ್ರಣ್ಣ ಅವರನ್ನು ಪ್ರೀತಿಯ ಮಾಡಿರುವುದಾಗಿ ಹೇಳಿ ನಂತರ ಮದುವೆ ಆದ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಹೌದು ಮೇಘನಾಳ ಕೈಹಿಡಿದಿದ್ದ ಶಂಕರಣ್ಣ ಜೋಡಿ ಆರಂಭದ ದಿನಗಳಲ್ಲಿ ತುಂಬಾನೇ ಚೆನ್ನಾಗಿತ್ತು ಎಂದು ಹೇಳಲಾಗುತ್ತಿದೆ. ಮಾಧ್ಯಮದವರ ಜೊತೆ ಮಾತನಾಡುತ್ತಾ ಅವರ ಮದುವೆ ವಿಷಯವನ್ನು ಹಂಚಿಕೊಂಡಿದ್ದರು. ಹಾಗೆ ಪ್ರೀತಿ ಮಾಡುವುದಕ್ಕೆ ವಯಸ್ಸು ಮುಖ್ಯವಲ್ಲ, ನನಗೆ ಅವರ ಆಸ್ತಿ ಮುಖ್ಯವಲ್ಲ ಅವರ ಒಳ್ಳೆಯ ಮನಸ್ಸನ್ನು ನೋಡಿ ನಾನು ಮದುವೆಯಾಗಿದ್ದೇನೆ ಎಂದಿದ್ದಳು ಮೇಘನಾ.

ಆದರೆ ಇದೀಗ ಮದುವೆಯಾಗಿ ನಾಲ್ಕು ತಿಂಗಳು 20 ದಿನದ ಬಳಿಕ ಶಂಕರಣ್ಣ ಅವರು, ಅವರ ಹಳ್ಳಿಯ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾರೆ. ಇಂದು ಬೆಳಗ್ಗೆ ಈ ಫೋಟೋ ಹೆಚ್ಚು ವೈರಲ್ ಆಗಿದ್ದು, ಅಸಲಿಗೆ ಇದಕ್ಕೆ ಕಾರಣ ಏನು ಎಂಬುದಾಗಿ ಇದೀಗ ಪೊಲೀಸರು ತನಿಖೆ ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಮೇಘನಾ ಮದುವೆಯಾದ ನಂತರ ಹಳ್ಳಿಯಲ್ಲಿ ಇರಲು ಆಗುತ್ತಿಲ್ಲ ಸಿಟಿಗೆ ಹೋಗೋಣ ಎಂದಿದ್ದರಂತೆ. ಇದೇ ವಿಚಾರವಾಗಿ ಶಂಕ್ರಣ್ಣ, ಅವರ ತಾಯಿ ಬಳಿ ತಮ ಆಸ್ತಿ ಮಾರುವ ವಿಚಾರವಾಗಿಯೂ ಕೂಡ ಪ್ರಸ್ತಾಪ ಪಡಿಸಿದ್ದರು ಎಂದು ಕೇಳಿ ಬಂದಿದೆ. ಅಸಲಿಗೆ 20ವರ್ಷ ಅಂತರ ಇದ್ದರೂ ಮೇಘನಾ ಶಂಕರಣ್ಣ ಅವರನ್ನು ಮದುವೆಯಾಗಿದ್ದರು.    

ಈಗ ಏನಾಯಿತು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀರಾ ಆಕ್ರೋಶ ವ್ಯಕ್ತವಾಗಿ ಕೆಲವರು ಹೆಚ್ಚು ಈ ಜೋಡಿಯ ಮದುವೆ ಫೋಟೋವನ್ನು ವೈರಲ್ ಮಾಡಿದ್ದೆ ಈ ಸಾವಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಶಂಕರಣ್ಣ ಅವರು ಈ ರೀತಿ ಸಾವನ್ನಪ್ಪಲು ಕಾರಣವೇನು ಎಂಬುದಾಗಿ ಇನ್ನಷ್ಟೇ ತಿಳಿಯಬೇಕಿದೆ. ಅಸಲಿಗೆ ಇದರ ಹಿಂದೆ ಯಾರಾದರೂ ಇದ್ದಾರ ಎಂದು ತಿಳಿಯಬೇಕಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಶಂಕರಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ...