ಯುವತಿಗೆ ರಮೇಶ್ ಜಾರಕಿಹೊಳಿ ಕೊಡೊಸಿದ್ದ ಉಡುಗೊರೆ ಏನು ಗೊತ್ತಾ..?

Updated: Tuesday, April 6, 2021, 15:42 [IST]

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ತನಿಖೆ ಮುಂದುವರಿದಿದೆ. ವಿಚಾರಣೆಯಲ್ಲಿ ಭಾಗಿ ಯಾಗಿದ್ದ ಸಿಡಿ ಲೇಡಿ ತನಿಖಾಧಿಕಾರಿಗಳ ಮುಂದೆ ಹಲವು ಸತ್ಯಗಳನ್ನು ಬಾಯಿಬಿಟ್ಟಿದ್ದಾಳೆ.

ವಿಚಾರಣೆ ವೇಳೆ, ರಮೇಶ್ ಜಾರಕಿಹೊಳಿ ಹಾಗೂ ಯುವತಿ ನಡುವಿನ ವಾಟ್ಸಪ್ ಚಾಟ್ ಸಂದೇಶಗಳನ್ನು ನೀಡಿದ್ದಾಳೆ. ಅಲ್ಲದೇ, ಸೀಡಿಲೇಡಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಲವು ರೀತಿಯ ಚಿನ್ನಾಭರಣ ಹಾಗೂ ಮೊಬೈಲ್ ಕೊಡಿಸಿದ್ದರು. ದುಬಾರಿ ಉಡುಗೊರೆಗಳನ್ನು ನೀಡಿದ್ದರು. ಸಲುಗೆಯಿಂದ ಇರುತ್ತಿದ್ದರೆಂದು ಆಕೆ ತನಿಖಾ ತಂಡದ ಮುಂದೆ ಹೇಳಿದ್ದಾಳೆ.  

ಆರ್ ಟಿ ನಗರದ ಚಿನ್ನದಂಗಡಿಯಲ್ಲಿ ಸಿಡಿ ಲೇಡಿಗೆ ರಮೇಶ್ ಜಾರಕಿಹೊಳಿ ಅವರು 18 ಲಕ್ಷ ಮೌಲ್ಯದ ಒಡವೆಯನ್ನು ಕೊಡೊಸೊದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ರಮೇಶ್ ಜಾರಕಿಹೊಳಿ ಅವರು ಯುವತಿಗೆ ನೀಡಿರುವ ಬೆಲೆಬಾಳುವ ಉಡುಗೊರೆ, ಮೊಬೈಲ್ ಕರೆಗಳ ಮಾತುಕತೆ ವಿವರಗಳು, ಇಬ್ಬರು ಜೊತೆಯಲ್ಲಿದ್ದ ಫೋಟೋಗಳ ದಾಖಲಾತಿಗಳನ್ನು ಸಹ ಪೊಲೀಸರಿಗೆ ಒಪ್ಪಿಸಲಾಗಿದೆ. 

ಇನ್ನು ಇಂದು ಕಿಡ್ನ್ಯಾಪ್ ಕೇಸ್ ಸಂಬಂಧ ಪ್ರಕರಣದ ಪ್ರಾಥಮಿಕ ತನಿಖೆ ಮುಗಿಸಿರುವ ತನಿಖಾಧಿಕಾರಿ ಎಸಿಪಿ ನಾಗರಾಜ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಅನುಮತಿ ಪಡೆದಿದ್ದರು. ಈ ವೇಳೆ ಹೇಳಿಕೆ ನೀಡಿರುವ ಸಿಡಿ ಲೇಡಿ, ಸಿಡಿ ಬಿಡುಗಡೆ ಆದ ನಂತರ ಭೀತಿಗೆ ಒಳಗಾಗಿ ನಾನು ರಾಜ್ಯವನ್ನೇ ಬಿಟ್ಟಿದ್ದೆ. ನಾನು ಬೇರೆ ಕಡೆ ಸ್ಥಳಾಂತರಗೊಂಡಾಗ ಕೆಲವರು ನನಗೆ ಸಹಾಯ ಮಾಡಿದ್ದಾರೆ. ತಾನು ಕಿಡ್ನ್ಯಾಪ್ ಆಗಿಲ್ಲ, ನನ್ನ ಪೋಷಕರು ಬೇರೆಯವರ ಒತ್ತಡದಿಂದ ಕಿಡ್ನ್ಯಾಪ್ ದೂರು ದಾಖಲಿಸಿದ್ದಾರೆ. 

ಕಳೆದ ಮಾರ್ಚ್ 2 ರಿಂದ ನಾನು ನಮ್ಮ ಪೋಷಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಕೇವಲ ನಾನು ಕುಟುಂಬಸ್ಥರ ಜೊತೆ ಎರಡು ಬಾರಿ ಪೋನ್ ನಲ್ಲಿ ಮಾತನಾಡಿದ್ದೆ. ನಮ್ಮ ಪೋಷಕರಿಗೆ ಜೀವ ಭಯ ಇರುವುದ್ದರಿಂದ ರಾಜ್ಯ ಸರ್ಕಾರ ಭದ್ರತೆ ಒದಗಿಸಬೇಕು ಎಂದು ಮೊಬೈಲ್ ವಿಡಿಯೋ ಮಾಡಿದೆ’ ಎಂದು ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.