ಶಿರೂರು ಟೋಲ್ ಗೇಟ್ ಆಂಬುಲೆನ್ಸ್ ಅಪಘಾತದ ಬಗ್ಗೆ ಡ್ರೈವರ್ ಹೇಳಿದ್ದೇನು..?

By Infoflick Correspondent

Updated:Thursday, July 21, 2022, 16:17[IST]

ಶಿರೂರು ಟೋಲ್ ಗೇಟ್ ಆಂಬುಲೆನ್ಸ್ ಅಪಘಾತದ ಬಗ್ಗೆ ಡ್ರೈವರ್ ಹೇಳಿದ್ದೇನು..?

ಉಡುಪಿ ಜಿಲ್ಲೆಯ ಶಿರೂರು ಟೋಲ್ ಗೇಟ್ ನಲ್ಲಿ ನಿನ್ನೆ ಆಂಬುಲೆನ್ಸ್ ಅಪಘಾತದಲ್ಲಿ ಮೂವರು ದಾರುಣ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಆಂಬುಲೆನ್ಸ್‌ ಚಾಲಕ ಗಣೇಶ್ ಅವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಹೊನ್ನಾವರದ ಖಾಸಗಿ ಆಸ್ಪತ್ರೆಯಿಂದ ಉಡುಪಿ ಆಸ್ಪತ್ರೆಗೆ ಸಾಗಿಸುವಾಗ ಟೋಲ್‌ ನಲ್ಲಿ ಅಪಘಾತ ಸಂಭವಿಸಿದೆ. ಇನ್ನು ಈ ಅಪಘಾತಕ್ಕೆ ಟೋಲ್‌ ಸಿಬ್ಬಂದಿ ಬೇಜವಾಬ್ದಾರಿಯೇ ಕಾರಣ ಎಂದು ಹೇಳಿದ್ದಾರೆ.


ಆಂಬ್ಯುಲೆನ್ಸ್‌ ಮಳೆಯಲ್ಲಿ ತುಂಬಾ ಸ್ಪೀಡ್‌ ಆಗಿ ಬರುತ್ತಿತ್ತು. ಟೋಲ್‌ ನಲ್ಲಿ ಸಿಬ್ಬಂದಿ ಗೇಟ್‌ ತೆಗೆಯಲು ಬಂದಿದ್ದು, ಈ ವೇಳೆ ಆಂಬ್ಯುಲೆನ್ಸ್ ಪಿಲ್ಲರ್‌ ಗೆ ಡಿಕ್ಕಿ ಹೊಡೆದು, ಪಲ್ಟಿ ಹೊಡೆದಿದೆ. ಆಗ ಟೋಲ್‌ ಸಿಬ್ಬಂದಿ ಸೇರಿದಂತೆ ಪೇಶಂಟ್‌ ಮತ್ತು ಮತ್ತೋರ್ವರು ಮೃತಪಟ್ಟಿದ್ದಾರೆ. ಮೊದಲಿಗೆ ಡೃವರ್‌ ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ, ಅದೃಷ್ಟವಶಾತ್‌ ಡ್ರೈವರ್‌ ಬದುಕಿದ್ದು, ಅಪಘಾತಕ್ಕೆ ಟೋಲ್‌ ಸಿಬ್ಬಂದಿ ಕಾರಣ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಸ್ಪೀಡ್‌ ಆಗಿ ಬರುತ್ತಿದ್ದ ಆಂಬುಲೆನ್ಸ್‌ ಟೋಲ್‌ ನಲ್ಲಿದ್ದ ಹಸುವನ್ನು ಕಂಡಿದ್ದಾರೆ. ಇದೇ ಸ್ಪೀಡ್‌ ನಲ್ಲಿ ಹೋದರೆ, ಹಸುಗೆ ಗುದ್ದಿ ಆಂಬುಲೆನ್ಸ್‌ ಪಲ್ಟಿ ಹೊಡೆಯುತ್ತದೆ ಎಂದು ಬ್ರೇಕ್‌ ಹಾಕಿದ್ದಾರೆ. ಬ್ರೇಕ್‌ ಹಾಕಿದ್ದಾಗ ಮಳೆ ಬಂದಿದ್ದರಿಂದ ಆಂಬ್ಯುಲೆನ್ಸ್‌ ಸ್ಕಿಡ್‌ ಆಗಿ ಟೋಲ್‌ ಪಿಲ್ಲರ್‌ ಗೆ ಡಿಕ್ಕಿ ಹೊಡೆದಿದೆ. ಆಗ ಟೋಲ್‌ ಸಿಬ್ಬಂದಿ, ಪೇಶಮಟ್‌ ಹಅಗೂ ಮತ್ತೋರ್ವರು ಸ್ಪಾಟ್‌ ಡೆತ್‌ ಆಗಿದೆ. ಇದಕ್ಕೆ ಟೋಲ್‌ ಸಿಬ್ಬಂದಿಯ ಬೇಜವಾಬ್ದಾರಿಯೇ ಕಾರಣ ಎಂದು ಗಣೇಶ್ ಹೇಳಿದ್ದಾರೆ. ಹಸು ತಪ್ಪಿಸಲು ಈ ಅಪಘಾತ ಸಂಭವಿಸಿದ್ದು, ಮೂವರು ಪ್ರಾಣ ಬಿಡುವಂತಾಗಿದೆ. ಈ ಘಟನೆಯನ್ನು ನೋಡಿದ ಹವಲರು ಬೇಸರ ವ್ಯಕ್ತಪಡಿಸಿದ್ದಾರೆ.