ವೀಕೆಂಡ್ ಲಾಕ್ ಡೌನ್ ಓಪನ್: ಶಾಲೆಗಳ ಬಗ್ಗೆ ಸಚಿವರು ಹೇಳಿದ್ದೇನು..??
Updated:Friday, January 21, 2022, 17:25[IST]

ರಾಜ್ಯದಲ್ಲಿ ಕಳೆದೆರಡು ವಾರಗಳಿಂದ ವೀಕೆಂಡ್ ಕರ್ಫ್ಯೂ ಅನ್ನು ಜಾರಿ ಮಾಡಲಾಗಿತ್ತು. ಒಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ವೀಕೆಂಡ್ ಕರ್ಫ್ಯೂಯಿಂದಾಗಿ ಕಷ್ಟವಾಗುತ್ತಿದೆ ಎಂದು ಜನ ಆಕ್ರೋಷಗೊಂಡಿದ್ದರು. ರಾಜ್ಯದಲ್ಲಿ ಕೊರೊನಾ ಹರಡುವಿಕೆ ಸಂಖ್ಯೆ ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ವೀಕೆಂಡ್ ಕರ್ಫ್ಯೂ ಅನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ನೈಟ್ ಕರ್ಫ್ಯೂ ಅನ್ನು ಹಾಗೇ ಮುಂದುವರಿಸಲಾಗಿದೆ.
ರಾಜ್ಯದಲ್ಲಿ 50:50 ರೂಲ್ಸ್ ಮುಂದುವರಿಯಲಿದ್ದು, ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಗಳಲ್ಲಿ ಟಪ್ ರೂಲ್ಸ್ ಇರಲಿದೆ. ಥಿಯೇಟರ್, ದೇವಸ್ಥಾನಗಳಲ್ಲಿ ಶೇ. 50 ರಷ್ಟು ಜನರಿಗೆ ಮಾತ್ರ ಪ್ರವೇಶವಿರಲಿದೆ. ಮದುವೆ ಹಾಗೂ ಸಮಾರಂಭಗಳಿಗೆ ಕೇವಲ 100-200 ಜನರಿಗೆ ಮಾತ್ರ ಅವಕಾಶವಿರಲಿದೆ. ವೀಕೆಂಡ್ ಕರ್ಫ್ಯೂ ಇರದಿದ್ದರೂ ರಾಜ್ಯದಲ್ಲಿ ಟಫ್ ರೂಲ್ಸ್ ಇರಲಿದೆ. ಇನ್ನು ಶಾಲೆಗಳನ್ನು ತೆರೆಯುವ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಏನ್ ಹೇಳಿದ್ದಾರೆ ಗೊತ್ತಾ..?
ಕೊರೊನಾ ಸೋಂಕು ಇರುವ ಜಿಲ್ಲೆಗಳು ಹಾಗೂ ಬೆಂಗಳೂರು ಹೊರತುಪಡಿಸಿ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಒಂದು ವಾರಗಳ ಕಾಲ ಶಾಲೆಗಳು ಬಂದ್ ಆಗಿರಲಿವೆ. ಆಯಾ ಜಿಲ್ಲಾಧಿಕಾರಿಗಳು, ತಾಲೂಕು ಆಡಳಿತಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳು ಅವರ ವ್ಯಾಪ್ತಿಗೆ ಬರುವ ಶಾಲೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಶಾಲೆಯಲ್ಲಿ 4-5 ಕ್ಕಿಂತ ಹೆಚ್ಚು ಮಕ್ಕಳಲ್ಲಿ, ಜ್ವರ, ಕೆಮ್ಮು, ನೆಗಡಿ ಹಾಗೂ ಕೋವಿಡ್ ಪಾಸಿಟಿವ್ ಬಂದರೆ, ಒಂದು ವಾರಗಳ ಕಾಲ ಶಾಲೆಯನ್ನು ಮುಚ್ಚಬೇಕು. ಮತ್ತೆ ಪರಿಶೀಲಿಸಿ ಪ್ರಾರಂಭಿಸಬೇಕು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.