ಅ*ತ್ಯಾಚಾರ ಆರೋಪಿಯನ್ನು ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗೆ ದಂಗಾದ ಜನ..!

Updated: Monday, March 1, 2021, 19:08 [IST]

ಹಳೆ ಕಾಲದಲ್ಲಿ ಯುವತಿ ಮೇಲೆ ಅ*ತ್ಯಾಚಾರ ಎಸಗಿದ ವ್ಯಕ್ತಿಗೆ ಸಂತ್ರಸ್ತೆಯನ್ನು ಕೊಟ್ಟು ಮದುವೆ ಮಾಡಿಸುತ್ತದ್ದು ಎಲ್ಲರಿಗೂ ಗೊತ್ತೇ ಇದೆ. ಇದನ್ನು ಎಲ್ಲರೂ ಸಿನಿಮಾಗಳಲ್ಲೂ ನೋಡಿದ್ದೀವಿ. ಆದರೆ ಸುಪ್ರೀಂಕೋರ್ಟ್ ಇಂತಹ ಒಂದು ತೀರ್ಪನ್ನು ನೀಡಿದ್ದು, ಎಲ್ಲರನ್ನು ದಂಗಾಗುವಂತೆ ಮಾಡಿದೆ. 

ಹೌದು.. ಆರೋಪಿ ಮೋಹಿತ್ ಸುಭಾಷ್ ಚೌಹಾಣ್ ಮಹರಾಷ್ಟ್ರದ ವಿದ್ಯುತ್ ಉತ್ಪಾದನಾ ಕಂಪನಿಯ ಉದ್ಯೋಗಿ. ಈತ ಶಾಲಾ ಬಾಲಕಿಯ ಮೇಲೆ ಅ*ತ್ಯಾಚಾರ ವೆಸಗಿದ್ದಾನೆಂಬ ಆರೋಪವನ್ನು ಎದುರಿಸುತ್ತಿದ್ದಾನೆ. ಈತನ ವಿರುದ್ಧ ಫೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿದೆ.   

ಆರೋಪಿ ಚೌಹಾಣ್, ತಾನು ಸರ್ಕಾರಿ ನೌಕರಿಯಾಗಿದ್ದು, ತನ್ನನ್ನು ಬಂಧನದಿಂದ ರಕ್ಷಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ಈ ಅರ್ಜಿ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರು  ನಡೆಸುತ್ತಿದ್ದಾರೆ. ಈ ವೇಳೆ, ಆರೋಪಿಯನ್ನು ಸಂತ್ರಸ್ತೆಯನ್ನು ನೀವು ಮದುಯಾಗುತ್ತೀರಾ ಎಂದು ಪ್ರಶ್ನಿಸಿದ್ದಾರೆ.   

ನೀವು ಆಕೆಯನ್ನು ಮದುಯಾಗಲು ಇಚ್ಛಿಸಿದರೆ, ನಿಮಗೆ ನಾವು ಸಹಾಯ ಮಾಡಬಹುದು. ಇಲ್ಲವಾದಲ್ಲಿ ನೀವು ನಿಮ್ಮ ಕೆಲಸವನ್ನು ಕಳೆದುಕೊಂಡು ಜೈಲಿಗೆ ಹೋಗುವಿರಿ. ನೀವು ಆಕೆಯನ್ನು ಮೋಹಿಸಿ, ಅತ್ಯಾಚಾರವ್ಯಸಗಿದ್ದೀರಿ ಎಂದು ಮುಖ್ಯ ನ್ಯಾಯಮೂರ್ತಿಗಳು ಆರೋಪಿಗೆ ಆಯ್ಕೆಗಳನ್ನು ನೀಡಿದ್ದಾರೆ. 

ಆದರೆ, ಆರೋಪಿ ಆಕೆಯನ್ನು ಮದುವೆಯಾಗಲಾರೆ. ನನಗೆ ಈಗಾಗಲೆ ಮದುವೆಯಾಗಿದೆ ಎಂದು ಉತ್ತರಿಸಿದ್ದಾನೆ. ವಿಚಾರಣೆ ಮುಂದುವರೆದಿದ್ದು, ಸದ್ಯ ಮುಂದಿನ 4 ವಾರಗಳ ಕಾಲ ಆರೋಪಿಯನ್ನು ಬಂಧನದಿಂದ ರಕ್ಷಿಸಲಾಗಿದೆ. ಆದರೆ, ಮುಖ್ಯ ನ್ಯಾಯಮೂರ್ತಿಗಳ ತೀರ್ಪು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.