ಲಂಡನ್ ಗೆ ಹಾರಿ ಹೋಗಲು ಯತ್ನಿಸಿದ್ದರಾ ಮುರಘಾ ಮಠದ ಶ್ರೀಗಳು..??

By Infoflick Correspondent

Updated:Thursday, September 1, 2022, 16:08[IST]

ಲಂಡನ್ ಗೆ ಹಾರಿ ಹೋಗಲು ಯತ್ನಿಸಿದ್ದರಾ ಮುರಘಾ ಮಠದ ಶ್ರೀಗಳು..??

ಚಿತ್ರದುರ್ಗದ ಮುರಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಕಳೆದ ಐದು ದಿನಗಳಿಂದ ಇದೇ ವಿಚಾರ ತೀರಾ ಚರ್ಚೆಗೆ ಗ್ರಾಸವಾಗಿದೆ. ಮುರುಘಾ ಮಠದ ಶ್ರೀಗಳು ವಿದ್ಯಾರ್ಥಿನಿಯರ ಮೇಲೆ ಲೈಂಗಿಕದೌರ್ಜನ್ಯ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಫೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಇದರ ವಿಚಾರಣೆ ನಡೆಯುತ್ತಿದ್ದು, ಅಪರಾಧ ಸಾಭೀತಾದರೆ, ಶ್ರೀಗಳನ್ನು ಅರೆಸ್ಟ್ ಮಾಡಬಹುದು ಎಂದು ಹೇಳಲಾಗುತ್ತಿದೆ. 

ಹೀಗಾಗಿ ಈಗಾಗಲೇ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯರು ಈಗಾಗಲೇ  ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ತಮ್ಮಗಾದ ಅನುಭವಗಳನ್ನು ಹೇಳಿದ್ದಾರೆ. ಇದು ದಾಖಲಾಗಿದ್ದು, ಪೊಲೀಸರ ಕೈ ಸೇರಲಿದೆ. ಬಳಿಕ ಮುರುಘಾ ಶ್ರೀಗಳ ಹೇಳಿಕೆಯನ್ನು  ದಾಖಲಿಸಿಕೊಳ್ಳಲಿದ್ದಾರೆ. ಇನ್ನು ನಿನ್ನೆ ರಾತ್ರಿ ಮುರುಘಾ ಮಠದ ಎಲ್ಲಾ ದ್ವಾರಗಳನ್ನು ಬಂದ್ ಮಾಡಲಾಗಿದೆ. ಒಂದೇ ಒಂದು ಗೇಟ್‌ ಓಪನ್‌ ಇದ್ದು, ಒಳ ಹೋಗುವವರು ಹಾಗೂ ಹೊರ ಬರುವವರನ್ನು ಪರಿಶೀಲಿಸಲಾಗುತ್ತಿದೆ.  

ಮುರುಘಾ ಮಠದ ಶ್ರೀಗಳು ಇದಕ್ಕೂ ಮುನ್ನ ಲಡನ್‌ ಗೆ ಹಾರಿ ಹೋಗಲು ಪ್ರಯತ್ನಿಸಿದ್ದರಂತೆ. ಹೀಗಾಗಿ ಮಾಸ್ಕ್‌ ಧರಿಸಿ, ಯಾರಿಗೂ ತಿಳೀಯದಂತೆ ಬೆಳಗಾವಿಯತ್ತ ಸಾಗಿದ್ದರಂತೆ. ಇದರ ಮಾಹಿತಿ ತಿಳಿದ ಪೊಲೀಸರು ಅವರು ಹುಡುಕಿ ಕರೆದು ತಂದಿದ್ದಾರೆ. ಮಠದ ಸುತ್ತ ಹೆಚ್ಚುವರಿಯಾಗಿ 25 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮಠದ ಸುತ್ತಲೂ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ. ಇನ್ನು ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಮುರುಘಾ ಶರಣರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. 

ಮುರುಘಾ ಮಠದ ಶ್ರೀಗಳ ವಿರುದ್ಧ ದೂರು ದಾಖಲಾಗಿದೆ. ಶ್ರೀಗಳು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ದೂರು ದಾಖಲಿಸಲಾಗಿದೆ. ಮುರುಘಾ ಮಠದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಮೇಲೆ ಶ್ರೀಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಒಡನಾಡಿ ಸಂಸ್ಥೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.( VIDEO CREDIT : THIRD EYE )