ನಿಜವಾಗುತ್ತಾ 2022 ರ ಬಗ್ಗೆ ಕುರುಡು ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿ, ಭಾರತಕ್ಕೆ ಕಾದಿದೆಯಾ ಗಂಡಾತರ ಅಷ್ಟಕ್ಕೂ ಆಕೆ ಹೇಳಿದ್ದೇನು ಗೊತ್ತಾ..?

By Infoflick Correspondent

Updated:Tuesday, July 19, 2022, 15:22[IST]

ನಿಜವಾಗುತ್ತಾ 2022 ರ ಬಗ್ಗೆ ಕುರುಡು ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿ, ಭಾರತಕ್ಕೆ ಕಾದಿದೆಯಾ ಗಂಡಾತರ ಅಷ್ಟಕ್ಕೂ ಆಕೆ ಹೇಳಿದ್ದೇನು ಗೊತ್ತಾ..?

ಬಾಬಾ ವಂಗಾ  ನುಡಿದಿದ್ದರು ಎನ್ನಲಾದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ. ಬಲ್ಗೇರಿಯನ್ ಅತೀಂದ್ರಿಯ ಭವಿಷ್ಯಗಾರ್ತಿ  ಹಾಗೂ ಗಿಡಮೂಲಿಕೆಗಾರ್ತಿಯೂ ಆಗಿದ್ದ ಬಾಬಾ ವಂಗ ನುಡಿದಿದ್ದ ಭವಿಷ್ಯಗಳೆಲ್ಲವೂ ಈ ಹಿಂದೆ ನಿಜವಾಗಿವೆ ಎನ್ನುವುದು ಬಹುತೇಕರು ಹೇಳುವ ಮಾತು. ಮಹಾನ್ ನಿಗೂಢ ಮತ್ತು ಕುರುಡ ಮಹಿಳೆಯಾಗಿದ್ದ ಬಾಬಾ ವಂಗಾ ಕೆಲ ನಂಬಲು ಅಸಾಧ್ಯವಾದ ಭವಿಷ್ಯವಾಣಿಗಳನ್ನು ಮಾಡಿದ್ದಾಳೆ. ಅವುಗಳಲ್ಲಿನ ಎರಡು ಭವಿಷ್ಯವಾಣಿಗಳು ಈಗಾಗಲೇ ನಿಜ ಸಾಬೀತಾಗಿವೆ ಎನ್ನಲಾಗುತ್ತಿದೆ. ತನ್ನ ಭಯ ಹುಟ್ಟಿಸುವ ಭವಿಷ್ಯವಾಣಿಗಳಿಗಾಗ ಬಾಬಾ ವಂಗಾ, ನಾಸ್ಟ್ರಾಡೆಮಸ್ ರೀತಿಯಲ್ಲಿಯೇ ಖ್ಯಾತಿ ಪಡೆದಿದ್ದಾಳೆ. ಅವಳು ಮಾಡಿರುವ ಭವಿಷ್ಯವಾಣಿಗಳನ್ನು ಪ್ರಸ್ತುತ ವಿಶ್ವಾದ್ಯಂತ ನಡೆಯುತ್ತಿವೆ ಎಂಬಂತಿದೆ. ಹಲವು ವರ್ಷಗಳ ಹಿಂದೆಯೇ ಬಾಬಾ ವಂಗಾ ಈ ಭವಿಷ್ಯವಾಣಿ ನುಡಿದಿದ್ದಾಳೆ ಎನ್ನಲಾಗಿದೆ.  

ಉಗ್ರರು ಅಮೆರಿಕದ  ಮೇಲೆ ನಡೆಸಿದ ದಾಳಿ, ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು. ಇಂಥ ಹತ್ತು ಹಲವು ಘಟನೆಗಳನ್ನು ಬಹಳ ಮುಂಚೆಯೇ ಬಾಬಾ ವಂಗಾ ನುಡಿದಿದ್ದರು. ಇದೀಗ ಕೊರೋನಾದಿಂದ ತತ್ತರಿಸಿ ಜಗತ್ತು ಸುಧಾರಿಸಿ ಕೊಳ್ಳುತ್ತಿದೆ. ಈ ಹೊತ್ತಲ್ಲೇ ಬಾಬಾ ವಂಗಾ ನುಡಿದಿದ್ದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ.

ಭಾರತದ ಬಗ್ಗೆ ಬಾಬಾ ವಂಗಾ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ. ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಭಾರತದ ಅನೇಕ ನಗರಗಳು ನೀರಿನ ಕೊರತೆಯನ್ನು ನೋಡುತ್ತವೆ, ಅದು ರಾಜಕೀಯ ಪರಿಣಾಮವನ್ನು ಸಹ ಹೊಂದಿರುತ್ತದೆ ಅಂತ ಬಾಬಾ ವಂಗಾ ನುಡಿದಿದ್ದಾರೆ.

2023 ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ, 2028 ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಆಕೆಯ ಭವಿಷ್ಯದ ಭವಿಷ್ಯವಾಣಿಗಳು ಸೇರಿವೆ.

2046 ರಲ್ಲಿ ಮಾನವರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಾಗುತ್ತದೆ ಎಂದು ವಂಗಾ ಅವರ ಭವಿಷ್ಯವಾಣಿಗಳು ಸೂಚಿಸುತ್ತವೆ. 2100 ರ ಹೊತ್ತಿಗೆ ಕತ್ತಲೆಯು ಹೋಗಲಿದೆ ಮತ್ತು ಭೂಮಿಯ ಇತರ ಪ್ರದೇಶವು ಪ್ರಕಾಶಿಸಲ್ಪಡುತ್ತದೆ ಎಂದು ಬಾಬಾ ವಂಗಾ ಸೂಚಿಸಿದ್ದಾರೆ ಎನ್ನಲಾಗಿದೆ.

2046ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದೂ ಆಕೆ ಹೇಳಿದ್ದಾರೆ. 2100 ರಲ್ಲಿ ರಾತ್ರಿಯು ಕಣ್ಮರೆಯಾಗುತ್ತದೆ ಮತ್ತು ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ ಎಂದು ಆಕೆ ಭವಿಷ್ಯ ನುಡಿದಿದ್ದಾರೆ.

5079ರಲ್ಲಿ ಪ್ರಪಂಚ ಕೊನೆಗೊಳ್ಳುತ್ತದೆ ಅನ್ನೋದು ಆಕೆಯ ಭವಿಷ್ಯವಾಣಿ. ನಾವೀಗ 2022ರ ಅರ್ಧದಾರಿ ಕ್ರಮಿಸಿದ್ದೇವೆ. ಅಷ್ಟರಲ್ಲಾಗಲೇ ಈ ವರ್ಷ ಬಾಬಾ ವಂಗಾ ನುಡಿದಿರೋ 6 ಭವಿಷ್ಯವಾಣಿಗಳ ಪೈಕಿ ಎರಡು ನಿಜವಾಗಿವೆ. 

ಬಾಬಾ ವಂಗಾ ಅವರು 12 ವರ್ಷದವಳಿದ್ದಾಗ ನಿಗೂಢವಾಗಿ ದೃಷ್ಟಿ ಕಳೆದುಕೊಂಡರು. ಭವಿಷ್ಯವನ್ನು ನೋಡಲು ಇದು ದೇವರು ತನಗೆ ಕೊಟ್ಟ ಉಡುಗೊರೆ ಎಂದೇ ಆಕೆ ಹೇಳಿಕೊಂಡಿದ್ದರು. 1996 ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಾಬಾ ವಂಗಾ ಸಾವನ್ನಪ್ಪಿದ್ದಾರೆ. ಆದ್ರೆ ಆಕೆಯ ಶಿಷ್ಯರು ಹೇಳುವ ಪ್ರಕಾರ 5079 ರವರೆಗೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರಂತೆ.