ಪೆಟ್ರೋಲ್ ದರ ಏರಿಕೆಗೆ ಪ್ರಮುಖ ಕಾರಣ ತಿಳಿದ್ರೆ ನಿಮಗೆ ಆಶ್ಚರ್ಯದ ಮೇಲೆ ಆಶ್ಚರ್ಯ ಆಗೋದು ಖಚಿತ..

Updated: Thursday, June 10, 2021, 14:48 [IST]

2010 ರಿಂದ ಸುಮಾರು ವರ್ಷಗಳು ಪೈಸೆ ಲೆಕ್ಕದಲ್ಲಿ ಪೆಟ್ರೋಲ್ ದರ ಏರಿಕೆಯಾಗಿ ಇಳಿಕೆ ಕಂಡು 70-80 ರೂ.ಗಲ ಆಸುಪಾಸಿನಲ್ಲೇ ಇರುತ್ತಿತ್ತು. ಆದರೆ, ಈ ಮಹಾಮಾರಿ ಕೊರೊನಾ ಬಂದಾಗಿನಿಂದ ಪೆಟ್ರೋಲ್‌, ಡೀಸೆಲ್‌, ಕೆರೋಸಿನ್‌ ಸೇರಿದಂತೆ ಅಡುಗೆ ಎಣ್ಣೆ ಬೆಲೆ ಕೂಡ ಗನಕ್ಕೇರಿದೆ. 

ಇದಕ್ಕೆಲ್ಲಾ ಪ್ರಮುಖ ಕೊರೊನಾ ಅಂತ ಹೇಳಲಾಗುತ್ತೆ. ಆದರೆ, ಲಾಕ್‌ ಡೌನ್‌ ಮಾಡಿದಾಗ ಪೆಟ್ರೋಲ್‌ ಬೆಲೆ ಕಡಿಮೆಯಾಗಬೇಕಿತ್ತು. ಆದರೆ, ಹೆಚ್ಚಾಗಿದ್ದು ಹೇಗೆ ಅನ್ನೋದೆ ಯಕ್ಷ ಪ್ರಶ್ನೆಯಾಗಿಬಿಟ್ಟಿದೆ.  ಪಾಕಿಸ್ತಾನದಂತಹ ಬಡ ದೇಶಗಳಲ್ಲೇ ಪೆಟ್ರೋಲ್‌ ಬೆಲೆ ಲೀಟರ್‌ ಗೆ ಕೇವಲ 51 ರೂ. ಇದೆ. ಅಂತಹದರಲ್ಲಿ ಭಾರತದಲ್ಲಿ 100 ರ ಗಡಿ ದಾಟಲು ಕಾರಣ ಏನು.. ಚೀನಾ, ಅಮೆರಿಕ ದೇಶಗಳಲ್ಲಿ ಈ ಮೊದಲೇ 100 ರ ಗಡಿ ದಾಟಿರುವ ಪೆಟ್ರೋಲ್‌ ಚಿನ್ನದ ದ್ರವ ಎಂದೇ ಹೆಸರುವಾಸಿಯಾಗಿದೆ. 

ಚಿನ್ನದಂತೆಯೇ ಪೆಟ್ರೋಲ್‌ ಅನ್ನು ಕೂಡ ನಾವು ತಯಾರಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಸಿಗುವ ಚಿನ್ನದಂತೆಯೇ ಪೆಟ್ರೋಲ್‌ ಕೂಡ ಸಮುದ್ರದ ಆಳದಲ್ಲೋ ಭೂಮಿಯ ಒಳಗೋ ಸಿಗುತ್ತದೆ. ಈ ಆಯಿಲ್‌ ಸಾವಿರಾರು ಕೋಟಿ ವರ್ಷಗಳ ಹಿಂದೆ ಮೃತಪಟ್ಟ, ಪ್ರಾಣಿಗಳ ಕೊಳೆತ ನಂತರ ಸಿಗುವುದೇ ಈ ಆಯಿಲ್.‌ ಇದನ್ನು ಹಲವು ಸಲ ಪರಿಷ್ಕರಿಸಿದ ಬಳಿಕ ಪೆಟ್ರೋಲ್‌, ಡೀಸೆಲ್‌, ಕೆರೋಸಿನ್‌ ಸಿಗುತ್ತದೆ. 

ಅರೇಬಿಯಾದಂತಹ ದೇಶಗಳಲ್ಲಿ ಮಾತ್ರ ಪೆಟ್ರೋಲ್‌ ಸಿಗುತ್ತದೆ. ಇದನ್ನು ಇತರೆ ದೇಶಗಳು ಖರೀದಿಸುತ್ತವೆ. ಒಂದು ಬ್ಯಾರೆಲ್‌ ಗೆ ಕಳೆದ 10ವರ್ಷಗಳ ಹಿಂದೆ 90 ರೂ. ಇತ್ತು. ಇದೀಗ ಒಂದು ಬ್ಯಾರೆಲ್ ಗೆ 72 ರೂ. ಆಗಿದೆ. ಆದರೂ ಕೂಡ ಪೆಟ್ರೋಲ್‌ ಬೆಲೆ ಜಾಸ್ತಿನೇ ಇದೆ. ಬ್ಯಾರೆಲ್‌ ರೇಟ್‌ ಕುಸಿತ ಕಾಣಲು ಕಾರಣ ಕೊರೊನಾ ಲಾಕ್‌ ಡೌನ್.‌ ಲಾಕ್‌ ಡೌನ್‌ ಸಮಯದಲ್ಲಿ ಯಾರೂ ಕೂಡ ಪೆಟ್ರೋಲ್‌ ಬಳಸದ ಕಾರಣ ಬ್ಯಾರೆಲ್‌ ಗಳು ಸೇಲ್‌ ಆಗುತ್ತಿರಲಿಲ್ಲ. ಇದರಿಂದ ಇಂಧನ ಕಂಪೆನಿಗಳು ದರ ಇಳಿಕೆ ಮಾಡಿದರು. 
ಇದನ್ನೇ ಸದಾವಕಾಶ ಮಾಡಿಕೊಂಡ ಭಾರತದಂತಹ ದೇಶಗಳು, ಬ್ಯಾರೆಲ್‌ ಗಳನ್ನು ಖರೀದಿಸಿವೆ. ಆದರೆ, ಟ್ಯಾಕ್ಸ್‌ ಹೆಚ್ಚಾಗಿರುವುದರಿಂದ ಪೆಟ್ರೋಲ್‌ ಬೆಲೆ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ. ಮಧ್ಯ, ಪೆಟ್ರೋಲ್‌ ದರ ಗಲ ಮೇಲೂ ಜಿಎಸ್ಟಿ ಅಳವಡಿಸಿದಲ್ಲಿ, ಎಲ್ಲೆಡೆ ಪೆಟ್ರೋಲ್‌ ಬೆಲೆ ಚಿನ್ನದ ಬೆಲೆಯಂತೆ ಒಂದೆ ಸಮನಾಗಿರಲಿದೆ.