ಪತಿ ಉಳಿಸಲು ತನ್ನ ಬಾಯಿಯಿಂದ ಉಸಿರು ನೀಡಿದ ಪತ್ನಿ..! ಈ ಪ್ರಯತ್ನದಿಂದ ಪತಿ ಏನಾದ ಗೊತ್ತಾ

Updated: Thursday, April 29, 2021, 10:41 [IST]

ಹೌದು ಸ್ನೇಹಿತರೆ ಕರೋನವೈರಸ್'ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಹಾವಳಿ ತುಂಬಾನೇ ಪ್ರಬಲವಾಗಿದೆ. ಪ್ರತಿದಿನ ಆರ್ಭಟಿಸುತ್ತಲೇ ಸಾಕಷ್ಟು ಜನರ ಪ್ರಾಣ ತೆಗದುಕೊಳ್ಳುತ್ತಿದೆ. ಹೌದು ಕೊರೋನಾ ಮಹಾ ಮಾರಿಯಿಂದ ಜನರು ತತ್ತರಿಸಿ ಹೋಗಿದ್ದಾರೆ.  ಹಾಗೂ ಪ್ರತಿದಿನ ಸಾವನ್ನಪ್ಪುತ್ತಿದ್ದಾರೆ. ಹೌದು ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಮನಕಲಕುವ ಪತಿ ಹಾಗೂ ಪತ್ನಿಯ ಫೋಟೋ ಕಂಡು ಬಂದಿದೆ.  

ಉತ್ತರಪ್ರದೇಶದ ಆಗ್ರಾದಲ್ಲಿ ಘಟನೆ ನಡೆದಿದ್ದು ತನ್ನ ಪತಿಗೆ ಕರೋನಾ ಪಾಸಿಟಿವ್ ಬಂದಿದ್ದು ನಂತರ ಚಿಕಿತ್ಸೆ ಪಡೆಯುವ ಮುನ್ನವೇ ಆಟೋದಲ್ಲಿ ಹೋಗುವ ವೇಳೆ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ ಅವಳೇ ತನ್ನ ಪತಿಗೆ ತನ್ನ ಬಾಯಿಂದ ಈ ಮಹಿಳೆ ಉಸಿರು ಕೊಟ್ಟು ಪ್ರಾಣ ಬದುಕಿಸಲು ಪ್ರಯತ್ನಿಸಿದ್ದಾಳೆ ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಕೆಲವರು ದಂಪತಿಯ ಈ ದೃಶ್ಯದ ಫೋಟೋ ತೆಗೆದುಕೊಂಡು ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ ಹೌದು ದುರದೃಷ್ಟವಂತ ಈ ಮಹಿಳೆ ಎಷ್ಟು ಪ್ರಯತ್ನಿಸಿದರೂ ಈಕೆಯ ಪತಿ ಆಟೋದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 

ಈ ದಂಪತಿ ಹೆಸರು ರೇಣು ಸಿಂಗಾಲ್,  ರವಿ ಸಿಂಗಾಲ್ ಎಂದು ಹೇಳಲಾಗುತ್ತಿದೆ. ಈ ಘಟನೆ ಆಗ್ರಾದಲಿ ನಡೆದಿದೆ ಹಾಗೆ ಎಸ್ ಎನ್ ಮೆಡಿಕಲ್ ಆಸ್ಪತ್ರೆಯಲ್ಲಿ ಈ ಮಹಿಳೆ ಪತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ...