ಜನಮೆಚ್ಚಿದ ನಿರೂಪಕಿ ಡಿಂಪಲ್ ದಿವ್ಯ ಮುದ್ದು ಕಂದನ ಆಗಮನ ; ಪಬ್ಲಿಕ್ ಟಿವಿಗೆ ಗುಡ್ ಬಾಯ್ ಹೇಳುತ್ತಾರಾ ?!
Updated:Thursday, March 10, 2022, 11:20[IST]

ಪಬ್ಲಿಕ್ ಟಿವಿಯ ಖ್ಯಾತ ಸುದ್ದಿ ನಿರೂಪಕಿ, ರಂಗನಾಥ ಅವರ ಸಹೋದ್ಯೋಗಿ ದಿವ್ಯ ಜ್ಯೋತಿ ಅತೀವ ಸಂತಸದಲ್ಲಿದ್ದಾರೆ. ನಿರೂಪಕಿಯಿಂದ ತಾಯಿಯ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ದಿವ್ಯ ಜ್ಯೋತಿಯವರ ಮನೆಯಲ್ಲಿ ಹೊಸ ವ್ಯಕ್ತಿಯ ಆಗಮನವಾಗಲಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ ದಿವ್ಯ. ಕೆಲ ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿವ್ಯ ಜ್ಯೋತಿ ಅವರ ಕುಟುಂಬವೀಗ ಹಬ್ಬದ ವಾತಾವರಣದಲ್ಲಿದೆ. ತಾಯಿತ್ತನದ ಸುಖದ ಹರುಷದಲ್ಲಿದ್ದಾರೆ ದಿವ್ಯ ಜ್ಯೋತಿ.
ಬಿಕಾಂ ಪದವಿಪಡೆದ ದಿವ್ಯ ಜನರ ಅಚ್ಚುಮೆಚ್ಚಿನ ನಿರೂಪಕಿ. ಇವರ ನಿರೂಪಣೆಯ ವೈಖರಿಗೆ ಜನ ತಲೆತೂಗುತ್ತಾರೆ.
ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಡಿಂಪಲ್ ದಿವ್ಯಾ ಎಂದೇ ಕರೆಯುತ್ತಾರೆ. ಡಿಂಪಲ್ ದಿವ್ಯಾ ನಾಲ್ಕು ವರ್ಷದ ಹಿಂದೆ ಮಹೇಶ್ ಎಂಬುವವರ ಜೊತೆ ವೈವಾಹಿಕ ಪಯಣ ಆರಂಭಿಸಿದ್ದರು. ಈಗ ಗರ್ಭಿಣಿಯಾದ ಡಿಂಪಲ್ ಗೆ ಸೀಮಂತ ಸಮಾರಂಭ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಪಬ್ಲಿಕ್ ಟಿವಿ ವಾಹಿನಿಯ ಸ್ನೇಹಿತರು ಸಂಬಂಧಿಕರು, ಆಪ್ತರು ಎಲ್ಲರೂ ಆಗಮಿಸಿ ಸಂತಸಕ್ಷಣದಲ್ಲಿ ಭಾಗಿಯಾಗಿದ್ದಾರೆ. ಸೀಮಂತದ ಹಾಗೂ ಗರ್ಭಿಣಿ ಸಮಯದ ಫೋಟೋ ಚಿತ್ರೀಕರಣ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಶುಭಹಾರೈಸುತ್ತಿದ್ದಾರೆ.
ಇಷ್ಟು ದಿನಗಳ ಕಾಲ ಕಾರ್ಯೊನ್ಮುಖರಾದ ದಿವ್ಯ ಈಗ ತುಂಬು ಗರ್ಭಿಣಿಯಾಗಿದ್ದು ಇನ್ನು ಕೆಲವು ದಿನ ವಾಹಿನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಬೇಸರದ ನಡುವೆ, ಕೆಲವೇ ದಿನದಲ್ಲಿ ದಿವ್ಯಾ ಮಗುವಿಗೆ ಜನ್ಮ ನಿಡುತ್ತಾರೆ ಎಂಬ ಸಂತಸ ಜನತೆಯಲ್ಲಿದೆ.