4 ಲಕ್ಷ ಬಿಲ್ ಕಟ್ಟಲಾಗದೆ ಪತಿಯ ಮೃತದೇಹ ಬಿಟ್ಟೋದ ಮಹಿಳೆ..! ಈ ವಿಡಿಯೋ ಕಣ್ಣೀರು ತರಿಸುತ್ತೆ

Updated: Thursday, April 29, 2021, 20:07 [IST]

ಹೌದು ಕರೊನಾ ಎರಡನೇ ಅಲೆ ಈಗಾಗಲೇ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶಾದ್ಯಂತ ಅಟ್ಟಹಾಸದಿಂದ ದಿನೇದಿನೇ ಹೆಚ್ಚಿನ ಮಟ್ಟದಲ್ಲಿ ಮೆರೆಯುತ್ತಿದೆ. ಸಾಕಷ್ಟು ಜನರ ಪ್ರಾಣವನ್ನು ಕರೋನವೈರಸ್ ತೆಗೆದುಕೊಳ್ಳುತ್ತಿದೆ. ಹೌದು ಕರೋನವೈರಸ್ ನಿಂದಾಗಿ ಬೆಂಗಳೂರಿನಲ್ಲಿ ಸಾಕಷ್ಟು ಜನರು ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದು ಕೋವಿಡ್ ಪಾಸಿಟಿವ್ ಬಂದಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿ ಭಯ ಹುಟ್ಟಿಸಿದ್ದಾರೆ. 

ಸರ್ಕಾರ ಈ ಕುರಿತು ಈಗಾಗಲೇ ಇಡೀ ರಾಜ್ಯವನ್ನೇ ಒಟ್ಟು 14 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿ ಆದೇಶ ನೀಡಿದ್ದು, ಕರೋನವೈರಸ್ ತಡೆಹಿಡಿಯುವಲ್ಲಿ ಕೆಲವೊಂದಿಷ್ಟು ಕ್ರಮಗಳನ್ನು ಪಾಲಿಸುವಂತೆ ಜನರಿಗೆ ಹೇಳಿದ್ದಾರೆ. ಹಾಗೆ ತಪ್ಪದೇ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಉಪಯೋಗ ಮಾಡಲಿಕ್ಕೆ ಹೇಳಿದ್ದಾರೆ. ಇತ್ತೀಚೆಗೆ ಒಂದು ಋದ್ರಾವಕ ಘಟನೆ ನಡೆದಿದ್ದು, ಬೆಂಗಳೂರಿಗೆ ಸ್ವಂತ ಊರು ಬಿಟ್ಟು ದುಡಿಯಲು ಬಂದಿದ್ದರು.

ಆದ್ರೆ ಈ ಕೊರೊನ ವೈರಸ್ ಈ ಮಹಿಳೆಯ ಗಂಡನಿಗೆ ಪಾಸಿಟಿವ್ ಬಂದಿದ್ದು, ಬಳಿಕ ಆತ ಆಸ್ಪತ್ರೆಯಲ್ಲಿ ಮೊನ್ನೆ ಸಾವನ್ನಪ್ಪಿದ್ದಾನೆ. ತದನಂತರ ಆಸ್ಪತ್ರೆಯವರು ನಾಲ್ಕು ಲಕ್ಷ ಬಿಲ್ ಕಟ್ಟಿ ನಿನ್ನ ಪತಿಯ ಮೃತದೇಹ ಪಡೆಯಿರಿ ಎಂದು ಹೇಳಿದ್ದಾರೆ. ಆಗ ಮಹಿಳೆ ಗಂಡನ ಮೃತದೇಹ ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಡಿಯೋ ನೋಡಿ ನಿಜಕ್ಕೂ ಬೆಂಗಳೂರು ಆಸ್ಪತ್ರೆಯ ಕರಾಳ ಸ್ಥಿತಿ ತೆರೆದಿಡುತ್ತದೆ..